ಡಾ| ಎಂ.ಜೆ ಪ್ರವೀಣ್ ಭಟ್‍ಗೆ ಸ್ವಸ್ತಿಸಿರಿ ಪ್ರಶಸ್ತಿ-ಪತ್ರಕರ್ತ ಮೌನೇಶ್ ವಿಶ್ವಕರ್ಮಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ
ಮುಂಬಯಿ (ಬಂಟ್ವಾಳ), ಮಾ.03: ಕಳೆದ ಸುಮಾರು ಮೂರುವರೆ ದಶಕಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 34ನೇ ಸಂಭ್ರಮಾಚರಣೆಯ ಪ್ರಯುಕ್ತ ದಶ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭ ಇದೇ ಮಾ.4ರಂದು ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
Dr. Praveen Bhat Dr.Surendranath nayak Vishveshvara Bhat Sunnambal
Vasanth shetty Nithin poojary Hareendra Pai
Maunesh Vishwakarma Mahmmed Rafiq Narayan Nayak
Krish kumar Ramya Shree
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಲ್ಲಿ ಬುಧವಾರ ರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಬೆಳಗ್ಗೆ 9.30ಕ್ಕೆ ಬಸವನಗುಡಿ ಬಸವೇಶ್ವರ ದೇವಾಲಯದಿಂದ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾತಂಡಗಳೊಂದಿಗೆ ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ವಕವಾಗಿ ಸಾಗಿ ಬರಲಿದೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾ„ಕಾರಿ ಡಾ. ಎಂ.ಆರ್. ರವಿ, ಮುಂಬಯಿ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತಿತರ ಗಣ್ಯರು ದಿಬ್ಬಣಕ್ಕೆ ಚಾಲನೆ ನೀಡಲಿರುವರು.
ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.18ರ ಶುಭ ಮುಹೂರ್ತದಲ್ಲಿ 21 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು.
ಶ್ರೀ ಕ್ಷೇತ್ರ ಕರಿಂಜೆ ಶ್ರೀ ಶಕ್ತಿಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮತ್ತು ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮೀರಾ ಭಯಂದರ್ ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಏಳಿಯಾಲ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಮೋಹನ್ ಪೂಜಾರಿ ಅಹಮ್ಮದಬಾದ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಶುಭಾಶಂಸನೆ ನೀಡಲಿರುವರು. ಪ್ರವೀಣ್ ಕುಮಾರ್ ಬಂಗೇರ, ನಿತ್ಯನಂದ ಪೂಜಾರಿ ಕೆಂತಲೆ, ಸುರೇಶ್ ವಾಸುದೇವ ಬಾಳಿಗಾ ತಾಳಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿüಗಳಾಗಿ ಭಾಗವಹಿಸುವರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಡಾ| ಎಂ.ಜೆ ಪ್ರವೀಣ್ ಭಟ್ ಮುಂಬಯಿ (ಧಾರ್ಮಿಕ), ಡಾ| ಸುರೇಂದ್ರನಾಥ ನಾಯಕ್ (ವೈದ್ಯಕೀಯ), ವಿಶ್ವೇಶ್ವರ ಭಟ್ ಸುಣ್ಣಂಬಳ (ಯಕ್ಷಗಾನ ಕ್ಷೇತ್ರ), ವಸಂತ್ ಶೆಟ್ಟಿ (ಉದ್ಯಮ), ನಿತಿನ್ ಪೂಜಾರಿ (ಕ್ರೀಡೆ) ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿಗೆ ಹರೀಂದ್ರ ಪೈ (ಉದ್ಯಮ), ಮೌನೇಶ್ ವಿಶ್ವಕರ್ಮ (ಪತ್ರಿಕೋದ್ಯಮ), ಮಹಮ್ಮದ ರಫೀಕ್ (ಸಮಾಜ ಸೇವೆ), ನಾರಾಯಣ ನಾಯಕ್ ಕರ್ಪೆ (ಸಮಾಜ ಸೇವೆ), ಎಂ.ಕ್ರಿಶ್ ಕುಮಾರ್ (ಕಲೆ), ಕು| ರಮ್ಯಶ್ರೀ ಜೈನ್ (ಕ್ರೀಡೆ) ಅವರನ್ನು ಆಯ್ಕೆಗೊಳಿಸಲಾಗಿದೆ.
ಮಧ್ಯಾಹ್ನ ಸಾರ್ವಜನಿಕರಿಗೆ ವಿವಾಹ ಭೋಜನ ಏರ್ಪಡಿಸಲಾಗಿದ್ದು, ಸಂಜೆ 50 ಸಂಘ ಸಂಸ್ಥೆಗಳಿಗೆ ಅತ್ಯುತ್ತಮ ಸಂಘಟನೆಗಾಗಿ ಶಿಶಿರ್ ಕುಮಾರ್ ಸ್ಮ ೃತಿ ಸ್ವಸ್ತಿಕ್ ಪುರಸ್ಕಾರ ಪ್ರದಾನ, ತಾಂಬೂಲ ಕಲಾವಿದರಿಂದ ತುಳು ನಾಟಕ ಪ್ರದರ್ಶನ, ಕಲಾಕುಂಭ ಸಾಂಸ್ಕøತಿಕ ವೇದಿಕೆ ಕುಳಾಯಿ ಇವರಿಂದ ತುಳುನಾಡ ಸಂಸ್ಕøತಿ ಪ್ರದರ್ಶನವಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಪ್ರಶಾಂತ್‍ಪುಂಜಾಲಕಟ್ಟೆ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಮಾಜಿ ಅಧ್ಯಕ್ಷ ಪಿ.ಎಂ ಪ್ರಭಾಕರ, ಕಾರ್ಯದರ್ಶಿ ಜಯರಾಜ ಅತ್ತಾಜೆ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.