Wednesday 14th, May 2025
canara news

ಗುಜರಾತ್ ಬಿಲ್ಲವರ ಸಂಘಕ್ಕೆ ನೂತನ ಸಾರಥಿs ಅಧ್ಯಕ್ಷರಾಗಿ ಮನೋಜ್ ಸಿ.ಪೂಜಾರಿ ಆಯ್ಕೆ

Published On : 05 Mar 2018   |  Reported By : Rons Bantwal


ಮುಂಬಯಿ, : ಗುಜರಾತ್ ಬಿಲ್ಲವರ ಸಂಘ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಮನೋಜ್ ಸಿ.ಪೂಜಾರಿ ಅವರು ಕಳೆದ ಶನಿವಾರ (03.03.2018) ಸ್ಥಳೀಯ ಬೈದಶ್ರೀ ಸಭಾಂಗಣದಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು.

     

Laxman Poojary(Vice President)            Manoj C.Poojary (President)       Vasu Poojary (Vice President)

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರು ವಹಿಸಿದ್ದು, ಎಸ್.ಕೆ ಹಳೆಯಂಗಡಿ, ವಿ.ಡಿ ಅಮೀನ್, ಮನೋಜ್ ಎಂ.ಪೂಜಾರಿ, ಲೋಕಯ ಪೂಜಾರಿ, ಮನೋಜ್ ಸಿ.ಪೂಜಾರಿ, ವಿಶ್ವನಾಥ್ ಪೂಜಾರಿ, ವಾಸು ಪೂಜಾರಿ, ಜಿನ್‍ರಾಜ್ ಪೂಜಾರಿ ಹಾಗೂ ವಿ.ವಿ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಸು ಪೂಜಾರಿ ಮತ್ತು ಲಕ್ಷ್ಮಣ್ ಪೂಜಾರಿ ಅವರನ್ನು ಉಪಾಧ್ಯಕ್ಷರನ್ನಾಗಿ, ಮೋಹನ್ ಸಿ.ಪೂಜಾರಿ ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆಗೊಳಿಸಲಾಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಮುಂದಿನ ಎರಡು ವರ್ಷಗಳಿಗೆ ಮುಂದುವರಿಸಲಾಗುವುದು ಎಂದು ನಿರ್ಧರಿಸಲಾಯಿತು.

ಮನೋಜ್ ಸಿ.ಪೂಜಾರಿ ಅವರು ಕಾರ್ಕಳ ತಾಲೂಕಿನ ಮುದ್ರಾಡಿ ಚಂದು ಪೂಜಾರಿ ಮತ್ತು ಕಮಲ ಪೂಜಾರಿ ಅವರ ಸುಪುತ್ರರಾಗಿದ್ದು, ಗುಜರಾತ್ ಬಿಲ್ಲವರ ಸಂಘ ಇದರ ಉಪಾಧ್ಯಕ್ಷ, ಸೂರತ್ ಕನ್ನಡ ಸಮಾಜದ ಅಧ್ಯಕ್ಷರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here