Sunday 6th, July 2025
canara news

ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಇವರ ನೂತನ ನವ ನಿರ್ಮಾಣ ಸಭಾಗೃಹದ ನೀಲನಕ್ಷೆ ಬಿಡುಗಡೆ

Published On : 07 Mar 2018   |  Reported By : Rons Bantwal


ಮುಂಬಯಿ, ಮಾ.07: ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಇದರ ನೂತನ ಭವ್ಯ ಸುಸಜ್ಜಿತ ಕಟ್ಟೋಣ ನಿರ್ಮಾಣದ ನೀಲನಕ್ಷೆ ಬಿಡುಗಡೆ ಸಮಾರಂಭವು ರವಿವಾರ 04.03.2018 ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ನೇರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಚಂದ್ರಶೇಖರ್ ನಾಣಿಲ್ ಅವರು ವಹಿಸಿದ್ದು, ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಇದರ ಮಾಜಿ ಕಾರ್ಯಾಧ್ಯಕ್ಷ ಹಾಗೂ ನಿರ್ದೇಶಕ ವಿ.ಆರ್ ಕೋಟ್ಯಾನ್, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅವರು ಅತಿಥಿsಗಳಾಗಿ ಉಪಸ್ಥಿತರಿದ್ದು, ನೂತನ ನವ ನಿರ್ಮಾಣ ಸಭಾಗೃಹದ ನೀಲನಕ್ಷೆಯನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಕಟ್ಟಡ ಸಮಿತಿಯ ಅಧ್ಯಕ್ಶ ಮೋಹನ್ ಎಸ್.ಸುವರ್ಣ, ಕೋಶಾಧಿಕಾರಿ ರಮೇಶ ಬಂಗೇರ, ಉಪಾಧ್ಯಕ್ಷರುಗಳಾದ ಜೈಕೃಷ್ಣ ಕೋಟ್ಯಾನ್ ಹಾಗೂ ಜಯೇಂದ್ರ ಜಿ.ಸುವರ್ಣ, ಕಟ್ಟಡ ಸಮಿತಿಯ ಕೋಶಾಧಿಕಾರಿ ಯಶೋಧರ್ ಸಾಲ್ಯಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಂಬಯಿ ಸಮಿತಿಯ ಎಸ್.ಚಂದ್ರಶೇಖರ್ ಪಡುಪಣಂಬೂರು (ಗೌರವಾಧ್ಯಕ್ಷ), ಸುರೇಂದ್ರ ಎ.ಪೂಜಾರಿ ಹಳೆಯಂಗಡಿ(ಅಧ್ಯಕ್ಷ), ವಿಶ್ವನಾಥ ಸಾಲ್ಯನ್ ಪಡುಪಣಂಬೂರು (ಕಾರ್ಯದರ್ಶಿ), ಭಾಸ್ಕರ್ ಸಾಲ್ಯಾನ್ ಹಳೆಯಂಗಡಿ (ಕಟ್ಟಡ ಸಮಿತಿಯ ಕಾರ್ಯದರ್ಶಿ) ಮೊದಲದವರನ್ನು ಆಯ್ಕೆಗೊಳಿಸಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here