Wednesday 14th, May 2025
canara news

ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಸಂಯೋಜಕರಾಗಿ ಸುನೀಲ್ ಪಾಯಸ್ ನೇಮಕ

Published On : 07 Mar 2018   |  Reported By : Rons Bantwal


ಮುಂಬಯಿ, ಮಾ.07: ಮಹಾನಗರದ ಯುವ ಉದ್ಯಮಿ, ತೆರೆಮರೆಯ ಸಮಾಜ ಸೇವಕ ಕೊಡುಗೈದಾನಿ ನಿತ್ಯಾಧರ್ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ಸುನೀಲ್ ಪಾಯಸ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಜನಾಬ್ ಖುರ್ಷಿದ್ ಅಹ್ಮದ್ ಸೈಯ್ಯದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಸಂಯೋಜಕರನ್ನಾಗಿ ನೇಮಿಸಿದೆ.

 

ಈ ಬಗ್ಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ| ಜಿ. ಪರಮೇಶ್ವರ ಅವರಿಗೆ ನೇಮಕಾತಿಯ ಅಧಿಕೃತಪತ್ರವನ್ನು ರವಾನಿಸಿ ನೇಮಕಾತಿಯನ್ನು ದೃಢಪಡಿಸಿದ್ದಾರೆ.

ಪಾಯಸ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ| ಜಿ.ಪರಮೇಶ್ವರ್, ಕಾರ್ಯನಿರತ ಅಧ್ಯಕ್ಷ ದಿನೇಶ್ ಗುಂಡೂರಾವ್ ಇವರ ನೇತ್ರತ್ವದಲ್ಲಿ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕಾ ಐವನ್ ಡಿ'ಸೋಜಾ, ಎಸ್.ಆರ್ ಪಾಟೀಲ್ ವ್ಮತ್ತಿತರ ಸಲಹೆಯಂತೆ ಸುನೀಲ್ ಪಾಯಸ್ ಸೇವಾ ನಿರತರಾಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here