Wednesday 14th, May 2025
canara news

ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನ ಆಚರಣೆ

Published On : 10 Mar 2018   |  Reported By : Rons Bantwal


ಮಹಿಳೆಯರಿಗೆ ಸಮಾಜದಲ್ಲಿ ಗೌರವ ಸಿಗುವಂತಾಗಲಿ : ಶಾರದ ಎಸ್.ಕರ್ಕೇರ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾರ್ಚ್.10: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭನೆಯಿಂದ ಸಂಭ್ರಮಿಸಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ನೇತೃತ್ವದಲ್ಲಿ ಇಂದಿಲ್ಲಿ ಗುರುವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮಿಸಿದ ಮಹಿಳಾ ದಿನಾಚರಣೆಯ ಸಭಾ ಕಾರ್ಯಕ್ರಮಕ್ಕೆ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಬೆಳಗಿಸಿ ಚಾಲನೆಯನ್ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಉದ್ಯಮಿ ಸಂಘಟಕಿ ಶಾರದ ಸೂರು ಕರ್ಕೇರ, ಗೌರವ ಅತಿಥಿsಗಳಾಗಿ ಸಮಾಜ ಸೇವಕಿ, ಉದ್ಯಮಿ ರೇಷ್ಮಾ ರವಿ.ಪೂಜಾರಿ, ಕುಸುಮ ಚಂದ್ರಶೇಖರ್ ಪಾಲೆತ್ತಾಡಿ ಉಪಸ್ಥಿತರಿದ್ದು, ದೇದಿಕೆಯಲ್ಲಿ ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಸುಧಾ ಎಲ್.ವಿ ಅಮೀನ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆಯರುಗಳಾದ ವಿಲಾಸಿನಿ ಕೆ.ಸಾಲ್ಯಾನ್ ಮತ್ತು ಪ್ರಭಾ ಕೆ.ಬಂಗೇರಾ, ಪೂಜಾ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಶಕುಂತಳಾ ಕೆ.ಕೋಟ್ಯಾನ್ , ಪ್ರಭಾ ಕೆ.ಸುವರ್ಣ, ಸರಿತಾ ಚಂದ್ರ ಸಾಲ್ಯಾನ್, ಅಧಿತಿ ಪಿ.ಸಾಲ್ಯಾನ್, ರೊಶ್ನಿ ಸಿ.ಅಮೀನ್, ಶಿಲ್ಪಿಕಾ ಸಾಲ್ಯಾನ್, ವಸಂತಿ ಎಸ್.ಸಾಲ್ಯಾಣ್ಕರ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಸಮಾಜ ಸೇವಕಿ ಯಶೋಧ ಎನ್.ಟಿ ಪೂಜಾರಿ, ಚಂದ್ರಕಲಾ ಆರ್.ಸುವರ್ಣ, ವತ್ಸಲಾ ಕೆ.ಪೂಜಾರಿ, ಲೀಲಾ ಡಿ.ಪೂಜಾರಿ, ಶೋಭಾ ಎಸ್.ಪೂಜಾರಿ, ಭವಾನಿ ಸಿ.ಕೋಟ್ಯಾನ್, ವನಿತಾ ಎ.ಕುಕ್ಯಾನ್, ರೇಖಾ ಎಸ್.ಪೂಜಾರಿ, ಹೀರಾ ಡಿ.ಕೋಟ್ಯಾನ್, ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ, ದಯಾನಂದ ಪೂಜಾರಿ, ಶ್ರೀನಿವಾಸ ಕರ್ಕೇರ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾರದಾ ಕರ್ಕೇರ ಮಾತನಾಡಿ ಮಹಿಳೆಯರು ನಾಲ್ಕು ಗೊಡೆಯ ಒಳಗೆ ಇರುವ ಸಮಯ ಕಣ್ಮರೆಯಾಗಿದೆ. ಈಗ ಮಹಿಳೆಯರು ಸ್ವತಂತ್ರರಾಗಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಾಧನೆ ಮಾಡುತ್ತಿದ್ದಾರೆ. ಮಹಿಳೆÉ ತನ್ನ ಸಂಸಾರದಲ್ಲಿ ಪ್ರೀತಿ, ವಿಶ್ವಾಸ ಮಾತ್ರ ಬಯಸುತ್ತಾಳೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವ ನೀಡಬೇಕು. ಕೇವಲ ಮಹಿಳಾ ದಿನದಂದು ಮಾತ್ರ ಗೌರವಿಸುವುದು ಹೊರತು ಪ್ರತಿದಿನ ಮಹಿಳೆಯರನ್ನು ಗೌರವಿಸಿದಾಗ ಮಾತ್ರ ಮಹಿಳಾ ದಿನಾಚರಣೆಯು ಸಾರ್ಥಕವಾಗುವುದು ಎಂದರು.

ನ್ಯಾ| ರೋಹಿಣಿ ಸಾಲ್ಯಾನ್ ಮಾತನಾಡಿ ಆಧುನಿಕ ಜೀವನದಲ್ಲಿ ಮಹಿಳೆಯರು ತುಂಬಾ ಅಭಿವೃದ್ಧಿ ಕಂಡಿದ್ದಾರೆ. ಮಹಿಳೆಯರು ತಮ್ಮ ಹಿರಿಮೆಯನ್ನು ಕಾಪಾಡಿಕೊಳ್ಳಬೇಕು ಅಂತೆಯೇ ಹತೋಟಿಯಲ್ಲಿರಬೇಕು. ಸಂಸ್ಕಾರ ಮತ್ತು ಅಧುನಿಕ ಯುಗದಲ್ಲಿ ಮಹತ್ವ ಕಳಕೊಂಡಿದೆ. ಮಕ್ಕಳು ತಮ್ಮದಾರಿ ತಪ್ಪಿ ಹೋಗುತ್ತಿರುವುದು ಕಾಣುತ್ತದೆ. ನಾವೂ ಮಕ್ಕಳಿಗೆ ರ್ಯಾಂಕ್ , ವಿದ್ಯಾವಂತರಾಗಬೇಕು ಎಂಬ ಆಶಯದಲ್ಲಿ ನಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಲು ಅಸಮರ್ಥರಾಗುತ್ತೇವೆ. ಮಕ್ಕಳಿಗೆ ಜೀವನ ಸಾಗಲು ಸಂಸ್ಕಾರದ ಅಗತ್ಯವಿದೆ. ಮಕ್ಕಳಿಗೆ ಪರಸ್ಪರ ಅನ್ಯೋನ್ಯತೆಯಿಂದ ಮೆರೆಯಲು ವಿಚಾರ ವಿನಿಮಯದ ಅಗತ್ಯವಿದೆ. ಈ ಬಗ್ಗೆ ಪಾಲಕರು ಮಹತ್ವ ನೀಡಬೇಕು ಎಂದು ತಿಳಿಸಿದರು.

ಕುಸುಮ ಪಾಲೆತ್ತಾಡಿ ಮಾತನಾಡಿ ತುಂಬಾ ಒಳ್ಳೆಯ ಅಭಿಮಾನ ತರುವಂತಹ ಕಾರ್ಯಕ್ರಮ. ಮಹಿಳೆಯರನ್ನು ಒಗ್ಗೂಡಿಸಿ ಗೌರವಿಸುವ ಕಾರ್ಯಕ್ರಮ. ಇಂತಹ ವೇದಿಕೆಗಳು ಭವಿಷ್ಯದಲ್ಲಿ ಉತ್ತಮ ಕಾರ್ಯಕ್ರಮ ನೀಡುವಂತಾಗಲಿ. ಮಹಿಳೆಯರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದು ನುಡಿದರು.

ನಿತ್ಯಾನಂದ ಡಿ.ಕೋಟ್ಯಾನ್ ಮಾತನಾಡಿ ಕಳೆದ ಹದಿನಾಲ್ಕು ವರುಷಗಳಿಂದ ಮಹಿಳೆಯರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಈ ವೇದಿಕೆಯು ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧನೆಗೈದ ಸಮಾಜದಲ್ಲಿ ಮಹಿಳೆಯರನ್ನುಗುರುತಿಸಿ ಸನ್ಮಾನಿಸುವಾಗಲೇ ಅರ್ಥಪೂರ್ಣವಾಗುವುದು. ನಮ್ಮಹಿರಿಯರು ಒಳ್ಳೆಯ ಉದ್ದೇಶದಿಂದ ಸಂಸ್ಥೆಯನ್ನು ಕಟ್ಟಿದ್ದಾರೆ.ನಾವೆಲ್ಲರೂ ಒಂದು ಗೂಡಿ ಉತ್ತಮ ಸಮಾಜ ಕಟ್ಟುವಲ್ಲಿ ಶ್ರಮಿಸೋಣ ಎಂದರು.

ಇದೇ ಸಂದರ್ಭದಲ್ಲಿ ನಡೆಸಲ್ಪಟ್ಟ ಮಹಿಳೆ-ಹಳ್ಳಿಯ ಜೀವನ, ನಗರದ ಬದುಕು, ಉದ್ಯೋಗಸ್ಥ ಮಹಿಳೆಯ ಬದುಕು ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾ ಸದಾನಂದ್ ಅಮೀನ್, ಶಾರದ ಅಂಚನ್ ಮತ್ತು ಡಾ| ಗೀತಾಂಜಲಿ ಎಲ್.ಸಾಲ್ಯಾನ್ ಭಾಗವಹಿಸಿದರು. ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಲಕ್ಷ್ಮೀ ಎಸ್.ಪೂಜಾರಿ ಧನ್ಯವಾದಿಸಿದರು.

ಸಂಭ್ರಮದ ಅಂಗವಾಗಿ ಎಸೋಸಿಯೇಶನ್‍ನ ಸ್ಥಳೀಯ ಸಮಿತಿ ಹಾಗೂ ಸಮನ್ವಯ ಸಮಿತಿಗಳ ಮಹಿಳಾ ವಿಭಾಗಗಳ ಸದಸ್ಯೆಯರು ಹಾಗೂ ಯುವತಿಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು.

ಸಬಿತಾ ಪೂಜಾರಿ, ರೇಖಾ ಸದಾನಂದ ಮತ್ತು ಗಿರಿಜಾ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕವಿತಾ ಪೂಜಾರಿ, ಗಿರಿಜಾ ಚಂದ್ರಶೇಖರ್, ಪ್ರೇಮಾ ಕೋಟ್ಯಾನ್, ವನಿತಾ ಕುಕ್ಯಾನ್, ಪೂಜಾ ಎಸ್.ಕೋಟ್ಯಾನ್, ಗಿರಿಜಾ ಪೂಜಾರಿ ಅತಿಥಿsಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿ ಪುಷ್ಪಗುಚ್ಛ ನೀಡಿದರು. ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್.ಸಾಲ್ಯಾನ್ ಸಭಾಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಗೌ| ಕಾರ್ಯದರ್ಶಿ ಸುಮಿತ್ರಾ ವಿ.ಬಂಗೇರ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here