Sunday 6th, July 2025
canara news

ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆಯಿಂದ ಮಹಿಳಾ ದಿನಾಚರಣೆ.

Published On : 11 Mar 2018   |  Reported By : Bernard Dcosta


ಕುಂದಾಪುರ, ಮಾ.11: ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆ ಅಂತರಾಷ್ಠ್ರಿಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 11 ರಂದು ಕುಂದಾಪುರ ವಲಯ ಮಟ್ಟದಲ್ಲಿ ಸಂತ ಮೇರಿಸ್ ಪಿ.ಯು ಕಾಲೇಜಿನ ಸಭಾಭವನದಲ್ಲಿ ಆಚರಿಸಿದರು.

 

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ|ಲೋರೆನ್ಸ್ ಮಾರ್ಟಿಸ್ ‘ಸ್ತ್ರೀ ಜೀವ ದಾಯಕಳು, ಸ್ತ್ರೀಯರಿಗೆ ಸಮಾಜ Iೂಣಿಯಗಾಬೇಕು, ಅವಳು ಮಗುವನ್ನು ಹೆತ್ತು ಪೆÇೀಶಿಸಿ ಜೀವನವನ್ನು ನೀಡುತ್ತಾಳೆ, ಒಳ್ಳೆಯ ತಾಯಂದಿರು ಇರುವುದರಿಂದಲೇ ಇವತ್ತು ನಾವು ಒಳ್ಳೆಯ ಸಮಾಜದಲ್ಲಿ ಬದುಕುತಿದ್ದೆವೆ’ ಎಂದು ಮಹಿಳೆಯರಿಗೆ ಶುಭ ಕೋರಿದರು.

ಮುಖ್ಯ ಅತಿಥಿಯಾದ ವಲಯ ಪ್ರಧಾನ ಧರ್ಮಗುರು ಅನಿಲ್ ಡಿಸೋಜಾ ‘ಸ್ತ್ರೀಯರು ಸಮಾಜ ಕಟ್ಟುವ ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತಿದ್ದಾರೆ. ಕುಟುಂಬವನ್ನು ಉತ್ತಮವಾಗಿ ಬೆಳೆಸಿದರೆ, ಸಮಾಜ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ’ ಎಂದು ಸಂದೇಶ ನೀಡಿದರು. ಕೇಂದ್ರಿಯ ಮಟ್ಟದ ಸ್ತ್ರೀ ಸಂಘಟನೇಯ ಅಧ್ಯಾತ್ಮಿಕ ನಿರ್ದೇಶಕರಾದ ಧರ್ಮಗುರು ರೆಜಿನಾಲ್ಡ್ ಪಿಂಟೊ ‘ಅಭಿವ್ರದ್ದಿಗಾಗಿ ಸಹಾಯ ಹಸ್ತವನ್ನು ಮಹಿಳೆಯರು ಮಹಿಳೆಯರಿಗೆ ನೀಡ ಬೇಕಾಗಿದೆ, ಪ್ರಗತಿ ಹೊಂದಿದವರು, ಪ್ರಗತಿ ಸಾಧಿಸದೆ ಇದ್ದ ಮಹಿಳೆಗೆ ಸಹಾಯ ಹಸ್ತ ನೀಡಬೇಕೆಂದು’ ಸಂದೇಶ ನೀಡಿದರು. ಸಂಘದ ಸಚೇತಕಿ ಸಿಸ್ಟರ್ ಜೂಲಿಯನ್, ಮತ್ತು ಕೇಂದ್ರಿಯ ಸಂಘಟನೇಯ ಅಧ್ಯಕ್ಷೆ ಜೆಸಿಂತಾ ಫೆರ್ನಾಂಡಿಸ್ ಶುಭ ಕೋರಿದರು. ಮೊತಿಯಾಂ ಪತ್ರಿಕೆಯ ಸಂಪಾದಕಿ ಲೀನಾ ತಾವ್ರೊ ಉಪಸ್ಥಿತರಿದ್ದರು.

ರಾಜಕೀಯದಲ್ಲಿ ಹೆಸರು ಗಳಿಸಿದ ಜುಡಿತ್ ಡಿಮೆಲ್ಲೊ, ಶಿಕ್ಷಣ ಕ್ಷೇತ್ರದ ಗ್ರೇಸಿ ಆಲ್ಮೇಡಾ, ಸಿ.ಎ. ಪದವಿ ಪಡೆದ ಟೆಸಿಕಾ ಶರಲ್ ಪಿಂಟೊ ಇವರನ್ನು ಸನ್ಮಾನಿಸಲಾಯಿತು. ಖಚಾಂಚಿ ಶಾಂತಿ ಕರ್ವಾಲ್ಲೊ ಸನ್ಮಾತಿರ ಪರಿಚಯವನ್ನು ನೀಡಿದರು. ಕುಂದಾಪುರ, ಪಿಯುಸ್ ನಗರ, ಗಂಗೊಳ್ಳಿ, ಕೋಟೆಶ್ವರ, ತಲ್ಲೂರು, ಪಡುಕೋಣೆ, ಬಸ್ರೂರು ಘಟಕದವರು ಗಾಯನ, ನ್ರತ್ಯ, ಕಿರು ನಾಟಕಗಳ ಪ್ರದರ್ಶನವನ್ನು ನೀಡಿದರು. ಅಧ್ಯಕ್ಷೆ ಪ್ರಮೀಳಾ ಡೇಸಾ ಸ್ವಾಗತಿಸಿದರು, ಕಾರ್ಯದರ್ಶಿ ಪೆÇ್ಲೀಸಿ ಬ್ರಗಾಂಜಾ ವಂದಿಸಿದರು. ಜೊಸ್ಪಿನ್ ರೊಡ್ರಿಗಸ್ ಮತ್ತು ಜೆನ್ನಿ ಡೇಸಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here