Monday 24th, September 2018
canara news

ಕೇರಳದ ಕರಾವಳಿ ತೀರದಲ್ಲಿ ನಿಮ್ನ ಒತ್ತಡ;ಲಂಗರು ಹಾಕಿದ ಬೋಟುಗಳು

Published On : 13 Mar 2018   |  Reported By : canaranews network

ಮಂಗಳೂರು: ಕೇರಳದ ಕರಾವಳಿ ತೀರದ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿ ಬೃಹತ್ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಸೋಮವಾರ ಬಹುತೇಕ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿದೆ. ಕನ್ಯಾಕುಮಾರಿಯಿಂದ ಕೋಯಿಕ್ಕೋಡ್ ವರೆಗೆ ಹಾಗೂ ಕಲ್ಲಿಕೋಟೆ ಶ್ರೀಲಂಕಾ ಕಡೆಗಳಲ್ಲಿ ಸಮುದ್ರದೊತ್ತದ ಉಂಟಾಗಿರುವುದರಿಂದ ಆ ಭಾಗಕ್ಕೆ ಯಾವುದೇ ಬೋಟುಗಳು ತೆರಳಲಿಲ್ಲ. ಇದಲ್ಲದೆ ಇತರ ಬೋಟುಗಳು ತರಾತುರಿಯಲ್ಲಿ ಬಂದರಿಗೆ ಆಗಮಿಸಿದೆ.

ಕೇವಲ ಸ್ಥಳೀಯವಾಗಿ ಮೀನುಗಾರಿಕೆಯಲ್ಲಿ ತೊಡಗಿರುವವರು ಮಾತ್ರ ತಮ್ಮ ನಿತ್ಯದ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.ಸಮುದ್ರ ಒತ್ತಡ ದಕ್ಷಿಣ ಶ್ರೀಲಂಕಾದಿಂದ ವಾಯುವ್ಯ ದಿಕ್ಕಿನತ್ತ ಸಾಗುತ್ತಿದ್ದು, ಮುಂದಿನ ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕೇರಳ ಮತ್ತು ಲಕ್ಷದೀಪ ಭಾಗದ ಸಮುದ್ರದಲ್ಲಿ ಗಂಟೆಗೆ ಇದರ ಪ್ರಭಾವದಿಂದ ಗಂಟೆಗೆ 60 ಕಿ.ಮೀ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಸೂಚನೆಯವರೆಗೆ ಯಾವುದೇ ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ದ,ಕ ಜಿಲ್ಲಾ ಆಡಳಿತ ಮೀನುಗಾರರಿಗೆ ಎಚ್ಚರಿಗೆ ನೀಡಿದೆ
More News

ಇಲೈಕ ಯಾ ರಸೂಲಲ್ಲಾಹ ಮೀಲಾದ್ - ಕಾನ್ಫರನ್ಸ್-2018 ಸ್ವಾಗತ ಸಮಿತಿ ರಚನೆ ಚೇರ್ಮೇನ್ ಆಗಿ ಜನಾಬ್ ಯಾಕೂಬ್ ಕಾರ್ಕಳ ಆಯ್ಕೆ
ಇಲೈಕ ಯಾ ರಸೂಲಲ್ಲಾಹ ಮೀಲಾದ್ - ಕಾನ್ಫರನ್ಸ್-2018 ಸ್ವಾಗತ ಸಮಿತಿ ರಚನೆ ಚೇರ್ಮೇನ್ ಆಗಿ ಜನಾಬ್ ಯಾಕೂಬ್ ಕಾರ್ಕಳ ಆಯ್ಕೆ
 ಯಕ್ಷಗಾನ, ಸಂಗೀತ ಕಲೆಗಳು ಸಾಮಾಜಿಕ ಏಕತೆಗೆ ಶಕ್ತಿ ನೀಡುತ್ತದೆ :  ಸಚಿವ ಇ.ಚಂದ್ರಶೇಖರನ್
ಯಕ್ಷಗಾನ, ಸಂಗೀತ ಕಲೆಗಳು ಸಾಮಾಜಿಕ ಏಕತೆಗೆ ಶಕ್ತಿ ನೀಡುತ್ತದೆ : ಸಚಿವ ಇ.ಚಂದ್ರಶೇಖರನ್
ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ : ಭಜನೆಯಿಂದ ವಿಭಜನೆ ಆಗಬಾರದು, ಸಮಾಜದ ಸಂಘಟನೆ ಆಗಬೇಕು.
ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ : ಭಜನೆಯಿಂದ ವಿಭಜನೆ ಆಗಬಾರದು, ಸಮಾಜದ ಸಂಘಟನೆ ಆಗಬೇಕು.

Comment Here