Sunday 6th, July 2025
canara news

ಮಾ.24: ಸಯನ್ ಪೂರ್ವದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದÀ ಬ್ರಹ್ಮಕಲೋಶ್ಸವ ಮತ್ತು ನಾಗಮಂಡಲೋತ್ಸವಪೂರ್ವಭಾವಿಸಭೆ

Published On : 14 Mar 2018   |  Reported By : Rons Bantwal


ಮುಂಬಯಿ, ಮಾ.14: ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ಬರುವ ಮೇ.4 ರಿಂದ ಜರುಗಲಿದ್ದು ಆ ಪ್ರಯುಕ್ತ ಪೂರ್ವಭಾವಿ ಸಭೆಯನ್ನು 24.ಮಾರ್ಚ್.2018ನೇ ಶನಿವಾರ ಸಂಜೆ 3.30 ಗಂಟೆಗೆ ನಿತ್ಯಾನಂದ ಸಭಾಗೃಹ, ಮುಖ್ಯೋಧ್ಯಾಪಕ ಭವನ, ಪ್ಲಾಟ್ ಸಂಖ್ಯೆ-6ಬಿ ಸಯನ್ ಪೂರ್ವ ಮುಂಬಯಿ ಇಲ್ಲಿ ಆಯೋಜಿಸಲಾಗಿದೆ.

ಬರುವ ಮೇ.04ರಿಂದ ಮೇ.09 ತನಕ ನಡೆಯಲಿರುವÀ ಅಷ್ಠಬಂಧ ಬ್ರಹ್ಮಕಲಶೋತ್ಸವ, ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವದ ಪೂರ್ವ ತಯಾರಿಯಾಗಿಸಿ ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯೊಂದಿಗೆ ಜಂಟಿಯಾಗಿ ಸಭೆಯನ್ನು ಆಯೋಜಿಸಿ ವಾರ್ಷಿಕ ವೈಭವೋತ್ಸವದ ಮಾಹಿತಿ ನೀಡಲಿದ್ದಾರೆ.

ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಆರ್.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಹಾಗೂ ಭಂಡಾರಿ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಚಾಲನೆ ನೀಡುವರು. ಮುಖ್ಯ ಅತಿಥಿsಗಳಾಗಿ ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಾಜಿ ಅಧ್ಯಕ್ಷ ಸುಂದರ ಜಿ.ಭಂಡಾರಿ, ಅಂತರಾಷ್ಟ್ರೀಯ ಕೇಶ ವಿನ್ಯಾಸಕ ಹಾಗೂ ಶಿವಾಸ್ ಹೇರ್ ಡಿಸೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಗೌರವ ಕಾರ್ಯದರ್ಶಿ ಸೋಮಶೇಖರ ಎಂ.ಭಂಡರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರುಗಳಾದ ಕೆ.ವಿಶ್ವನಾಥ ಭಂಡಾರಿ, ಮಾಧವ ಕೂಳೂರು ಮತ್ತು ಯು.ಗಣೇಶ್ ಭಂಡಾರಿ ಹಳೆಯಂಗಡಿ ಆಗಮಿಸಲಿದ್ದಾರೆ.

ಆ ಪ್ರಯುಕ್ತ ಬೃಹನ್ಮುಂಬಯಿ, ಉಪನಗರಗಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಭಂಡಾರಿ ಸಮಾಜದ ಸರ್ವ ಬಾಂಧವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಿ ಸಭೆಯ ಯಶಸ್ಸಿಗೆ ಸಹಕರಿಸುವಂತೆ ಭಂಡಾರಿ ಸೇವಾ ಸಮಿತಿ ಮುಂಬಯಿ ಪ್ರಧಾನ ಕಾರ್ಯದರ್ಶಿ ವಿಜಯ ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಭಂಡಾರಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಹಾಗೂ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here