ಬಂಟ್ವಾಳ,ಮಾ.14: ಇಂದಿಲ್ಲಿ ಬೆಳಿಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆಗೆ ತಾಲೂಕುನಾದ್ಯಂತ ಗುಡುಗು, ಸಿಡುಲು ಸಹಿತ ಸುರಿದ ಬಾರೀ ಮಳೆಗೆ ನಗರದ ಜನಜೀವನ ಅಸ್ತವ್ಯಸ್ಥ ಗೊಂಡಿತು. ಬಿ.ಸಿ ರೋಡ್‌ನ ತಾಲೂಕು ಕಛೇರಿ, ಬಸ್ಸು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳಗೆ ಬಾರಿ ನೀರು ಸ್ಥಗಿತಗೊಂಡು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರದಲ್ಲಿ ವ್ಯತ್ಯಾಯ ಕಂಡಿತು.