Friday 19th, April 2024
canara news

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ

Published On : 19 Mar 2018   |  Reported By : Rons Bantwal


ಕಲಾವಿದರ ಪರಿಷತ್ತಿನಲ್ಲಿ ಕಲಾತ್ಮಾಕ ಸಂಘಟನಾ ಶಕ್ತಿಯಿದೆ : ಡಾ| ಶಿವ ಮೂಡಿಗೆರೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.17: ಹೆಸರಿನಲ್ಲಿ ರೋಮಾಂಚನವಿದೆ. ಇದು ಜಾತಿ ಮತ ಭೇದ ಮೀರಿ ಬೆಳೆಯುತ್ತಿರುವ ಕಲಾರಾಧಕ ಸಂಸ್ಥೆ. ಕಲಾವಿದರಿಗೆ ಮನೆಯಾಗಿ ನಿಂತಿದೆ. ಕಲಾವಿದರ ಪರಿಷತ್ತಿನಲ್ಲಿ ಕಲಾತ್ಮಾಕ ಸಂಘಟನಾ ಶಕ್ತಿಯಿದೆ. ಈ ಸಂಸ್ಥೆಗೆ ಸ್ವಂತಿಕೆಯ ಭವನ ಪ್ರಾಪ್ತಿಯಾಗಲಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ-2018 ಸಮಾರಂಭ ಉದ್ಘಾಟಿಸಿ ಡಾ| ಮೂಡಿಗೆರೆ ಮಾತನಾಡಿದರು.

ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಗೌ| ಪ್ರ| ಕಾರ್ಯದರ್ಶಿ ಸಿಎ| ಸದಾಶಿವ ಶೆಟ್ಟಿ, ಗೌರವ ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಸಮಾಜ ಸೇವಕರಾದ ಪ್ರವೀ ಣ್ ಶೆಟ್ಟಿ ಪುಣೆ, ಬಿ.ಬಾಲಚಂದ್ರ ರಾವ್, ಜ್ಯೋತಿಷಿ ಆರ್.ಎಲ್ ಭಟ್, ಕಲಾವಿದರುಗಳಾದ ದಾಮೋದರ ಶೆಟ್ಟಿ ಇರುವೈಲು, ಉಪಸ್ಥಿತರಿದ್ದರು. ಅತಿಥಿüಗಣ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕಲಾವಿದನ ಜೀವನ ಅತೀ ಸುಂದರವಾದುದು. ಕಲಾರಾಧನೆಯೇ ಅವನ ಆಸ್ತಿ ಆಗಿರುತ್ತದೆ. ಕಲಾವಿದರ ಜೀವನ ಸುಂದರವಾಗಿರುತ್ತದೆ ಕಾರಣ ಆತ ಹಣದ ಹಿಂದೆ ಬೀಳದೆ ಕಲಾತ್ಮಕವಾಗಿ ಬಾಳುತ್ತಾನೆ ಎಂದÀು ಸಿಎ| ಸದಾಶಿವ ಶೆಟ್ಟಿ ತಿಳಿಸಿದರು.

ಕಲಾವಿದರ ಏಳಿಗೆಗಾಗಿ ಹುಟ್ಟಿದ ಸಂಸ್ಥೆ. ಪರಸ್ಪರ ಪ್ರೀತಿಯಿಂದ ದಶಮಾನೋತ್ಸವ ಸಮಾರಂಭವನ್ನು ಆಚರಿಸಿದ್ದೇವೆ. ಕಲಾವಿದರಿಗೆ ಕ್ಷೇಮನಿಧಿ ಕಾರ್ಯಕ್ರಮವನ್ನು ಚಾಲನೆ ಮಾಡಿದ್ದೇವೆ. ಈ ವರ್ಷಗಳಿಂದ ದಾನಿಗಳ ಪೆÇ್ರೀತ್ಸಾಹದಿಂದ ಕಲಾಶ್ರೀ ಪ್ರಶಸ್ತಿ ನೀಡಿ ಧನ ಸಹಾಯ ಮಾಡುವಂತಹ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದÀು ಅಧ್ಯಕ್ಷೀಯ ನುಡಿಗಳನ್ನಾಡಿ ಸುರೇಂದ್ರಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತುನ ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕೊಳಿ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಮಾಜಿ ಗೌ| ಪ್ರ| ಕಾರ್ಯದರ್ಶಿಗಳಾದ ರಾಜು ಶ್ರೀಯಾನ್ ನಾವುಂದ, ಅಶೋಕ ಪಕ್ಕಳ, ಪದ್ಮನಾಭ ಸಸಿಹಿತ್ಲು, ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕೊಲ್ಯಾರು ರಾಜು ಶೆಟ್ಟಿ, ಜಯಕರ ಡಿ.ಪೂಜಾರಿ, ಎಚ್‍ಬಿಎಲ್ ರಾವ್, ಶೇಖರ್ ಸಸಿಹಿತ್ಲು, ಬಾಲಕೃಷ್ಣ ನಿಡ್ವಣ್ಣಾಯ, ಉಮೇಶ್ ಶೆಟ್ಟಿ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು. ಅತಿಥಿüಗಣ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಡಾ| ಆರ್.ಕೆ ಶೆಟ್ಟಿ ಪ್ರಾಯೋಜಿತ `ಕಲಾಶ್ರೀ' ಪ್ರಶಸ್ತಿಯನ್ನು ಹಿರಿಯ ಕಲಾವಿದ, ಸಾಹಿತಿ, ಕವಿ ಶಿಮುಂಜೆ ಪರಾರಿ (ಎಸ್.ಎಂ.ಶೆಟ್ಟಿ) ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಲಾಮಹೋತ್ಸವವಾಗಿ ವಿವಿಧ ಕಲಾ ಸಂಸ್ಥೆಗಳು `ನೃತ್ಯಸಂಗಮ' ಕಾರ್ಯಕ್ರಮ ಹಾಗೂ ಪರಿಷತ್ತುವಿನ ಸದಸ್ಯರು `ಸುಪರ್ಣಕ ಮಾನಭಂಗ' ಯಕ್ಷಗಾನ ತಾಳಮದ್ದಲೆ ಮತ್ತು ಕೃಷ್ಣರಾಜ್ ಶೆಟ್ಟಿ ನಿರ್ದೇಶನದಲ್ಲಿ `ಈ ರಾತ್ರೆಗ್ ಪಗೆಲ್‍ಗ್ ಯಾನ್' ತುಳು ನಾಟಕ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ತಾರಾ ಬಂಗೇರ ನಿರೂಪಿಸಿದರು.

ಉಪಾಧ್ಯಕ್ಷ ಕಮಲಾಕ್ಷ ಜಿ.ಸರಾಫ್ ಸುಖಾಗಮನ ಬಯಸಿ, ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ ಮತ್ತು ಬಳಗದವರಿಂದ ಪ್ರಾರ್ಥನೆಯನ್ನಾಡಿದರು. ಸ್ಥಾಪಕಾಧ್ಯಕ್ಷ ಎಸ್.ಟಿ ವಿಜಯಕುಮಾರ್ ತಿಂಗಳಾಯ, ಸಂಚಾಲಕ ರಮೇಶ್ ಶಿವಪುರ, ಶ್ರೀನಿವಾಸ ಸಾಫಲ್ಯ, ಜಿ.ಟಿ ಆಚಾರ್ಯ, ಚಂದ್ರಶೇಖರ್ ಭಟ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್ ಧನ್ಯವದಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here