Wednesday 14th, May 2025
canara news

ಕುಂದಾಪುರ ಕಾನ್ವೆಂಟ್ ಛಾಪೆಲ್‍ನಲ್ಲಿ ಸಂತ ಜೋಸೆಫರ ಹಬ್ಬ

Published On : 20 Mar 2018   |  Reported By : Bernard J Costa


ಸಂತ ಜೋಸೆಫರ ಹಬ್ಬದಂದು ಪುರುಷರ ದಿನವನ್ನು ಆಚರಿಸಬಹುದು

ಕುಂದಾಪುರ,ಮಾ.20: ಸಂತ ಜೋಸೆಫರು ದೇವರು ತನಗೆ ಕೊಟ್ಟ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ ವ್ಯೆಕ್ತಿ. ದೇವರ ವಾಕ್ಯವನ್ನು ನಂಬಿದ ನಂಬಿಗಸ್ತನು, ಜೀವನುದ್ದಕ್ಕೂ ಆತ ಶಾಂತಿ, ನೀತಿ, ವಿಧೇಯನಾಗಿ ಜೀವಿಸಿದವನು, ಹಾಗಾಗಿ ಯೇಸು ಕೂಡ ಜೀವನ ಪರ್ಯಾಂತ ವಿಧೇಯನಾಗಿ ಜೀವಿಸಿದನು. ಮೇರಿ ಮಾತೆ ಗರ್ಭಿಣಿಯಾಗಲು ಪವಿತ್ರ ಆತ್ಮ ಕಾರಣ ಎಂದು ದೇವರು ತಿಳಿಸಿದನ್ನು ನಂಬಿ ಮೇರಿಗೆ ವಿಶ್ವಾಸಿ ಪತಿಯಾಗಿದ್ದನು. ಹಾಗೆ ಮೇರಿ ಮತ್ತು ಯೇಸುವಿಗೆ ರಕ್ಷಣೆ ಕೊಡುತ್ತಾ, ಅವರನ್ನು ಅನ್ಯೋನ್ಯಯವಾಗಿ ಪೆÇೀಶಿಸಿದವನು, ಆತ ತನ್ನ ಬದುಕಿನುದ್ದಕ್ಕೂ ಕುಟುಂಬದ ಒಳಿತಿಗಾಗಿಯೆ ಜಿವಿಸಿದ ಆದರ್ಶ ಮಹಾಪುರುಷನಾಗಿದ್ದಾನೆ ಹಾಗಾಗಿ ಈ ದಿನವನ್ನು ಪುರುಷರ ದಿನವನ್ನಾಗಿ ಆಚರಿಸ ಬಹುದು’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಫಾ|ಅನಿಲ್ ಡಿಸೋಜಾ ಸಂದೇಶ ನೀಡಿದರು.

 

ಅವರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕುಂದಾಪುರ ಸಂತ ಜೋಸೆಫರ ಕಾನ್ವೆಂಟಿನ ಚಾಪೆಲನಲ್ಲಿ ಸಂತ ಜೋಸೆಫರ ಹಬ್ಬದ ಪ್ರಯುಕ್ತ ಪ್ರಧಾನ ಯಾಜಕಾರಾಗಿ ಪವಿತ್ರ ಬಲಿದಾನ ನೆಡೆಸಿಕೊಟ್ಟರು ಪ್ರವಚನ ನೀಡಿದರು. ಸಹಯಾಕ ಯಾಜಕಾರಾಗಿ ಕಟ್ಕರೆ ಬಾಲ ಯೇಸುವಿನ ಆಶ್ರಮದ ಪ್ರಧಾನರಾದ ವಂ| ಫಾ|ಏಲಿಯಾಸ್ ಡಿಸೋಜಾ, ಕುಂದಾಪುರ ಇಗರ್ಜಿಯ ಯಾಜಕರಾದ ವಂ|ಫಾ| ಜೆರಾಲ್ಡ್ ಸಂದೀಪ್ ಡಿ’ಮೆಲ್ಲೊ ಮತ್ತು ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಬಲಿದಾನವನ್ನು ಅರ್ಪಿಸಿದರು. ಈ ಬಲಿದಾನದಲ್ಲಿ ಅತಿಥಿ ಧರ್ಮ ಭಗಿನಿಯರು ಮತ್ತು ಹಲವಾರು ಭಕ್ತರು ಪಾಲ್ಗೊಂಡರು. ಕಾನ್ವೆಂಟಿನ ಮುಖ್ಯಸ್ಥೆ ಸಿ|ವಾಯ್ಲೆಟ್ ತಾವ್ರೊ ವಂದಿಸಿದರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here