Tuesday 23rd, April 2024
canara news

ಬದಲಾಗುತ್ತಿರುವ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಬೋಧಿಸುವಂತೆ ಪಠ್ಯವಿಷಯಗಳು ಬದಲಾಗಬೇಕು.-ಪ್ರೊ.ಕೆ.ಚಿನ್ನಪ್ಪಗೌಡ

Published On : 22 Mar 2018   |  Reported By : Rons Bantwal


ನಗರದ ವಿಶ್ವ ವಿದ್ಯಾನಿಲಯ ಸಂಧ್ಯಾಕಾಲೇಜಿನ ವಾರ್ಷಿಕೋತ್ಸವವನು ಉದ್ಘಾಟಿಸಿ ಜನಪದ ವಿಶ್ವ ವಿದ್ಯಾನಿಲಯ ಹಾವೇರಿ ಇದರ ವಿಶ್ರಾಂತ ಕುಲಪತಿ ಪ್ರೊ. ಕೆ.ಚಿನ್ನಪ್ಪಗೌಡ ಮಾತನಾಡಿದರು. ಯಾವುದಾದರೂ ವಸ್ತು ಅಥವಾ ವಿಷಯಗಳನ್ನು ಕಂಡಾಗ ಸಂತಸ ಪಡುವ ಮನಸ್ಸು ನಮ್ಮಲ್ಲಿಲ್ಲವೆಂದಾರೆ ನಮ್ಮ ವ್ಯಕ್ತಿತ್ವದಲ್ಲಿ ಏನೋ ದೋಷವಿದೆ ಎಂದರ್ಥ. ನಮ್ಮ ನಾಡಿನಲ್ಲಿಎತ್ತ ನೋಡಿದರತ್ತ ಅರ್ಥಪೂರ್ಣ ಬೆಳವಣಿಗೆಗಳು ನಡೆದು ಬರುತ್ತಿರುವುದರಿಂz ಅಂತಹ ಕನಸುಗಳಿಗೆ ನೀರುಣಿಸುವ ಮನಸ್ಸುಗಳು ನಮ್ಮದಾಗಬೇಕು. ಮುಂಬರುವ ಪೀಳಿಗೆಗಳ ಆಸಕ್ತಿಗೆ ತಕ್ಕಂತೆ ಕಾಲೇಜುಗಳು ಕಲಿಸುವ ಪಠ್ಯ ವಿಷಯ ಹಾಗೂ ಕೋರ್ಸುಗಳು ಬದಲಾಗದಿದ್ದಲ್ಲಿಯುವಕರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾದೀತು ಎಂಬುದಾಗಿ ಎಚ್ಚರಿಸಿದರು.

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯ ಮನೋವೈದ್ಯಕೀಯ ವಿಭಾಗದ ಡಾ.ಶ್ರೀನಿವಾಸ ಭಟ್ ಉಂಡಾರು ಇವರು ಕಾಲೇಜಿನ ಪ್ರಪ್ರಥಮ ವಾರ್ಷಿಕ ಸಂಚಿಕೆ “ಮಂಗಳ ಸಂಧ್ಯಾ”ವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಪ್ರೌಢಾವಸ್ಥೆಯಲ್ಲಿಉಂಟಾಗುವ ತಲೆಮಾರು ಅಂತರದ ಪರಿಣಾಮವಾಗಿ ಯುವಪೀಳಿಗೆ ದ್ವಂದ್ವ– ಒತ್ತಡಗಳಿಗೆ ಸಿಲುಕಿ ಖಿನ್ನತೆಗೆ ಒಳಗಾಗುವುದಿದೆ. ಹಾಗಾಗಿ ಈ ಸಮಯದಲ್ಲಿ ವಿದ್ಯಾರ್ಥಿಗಳು ತಂದೆ - ತಾಯಿ ಹಾಗೂ ಮನೆಯವರೊಡನೆ ಹೆಚ್ಚು ಬೆರೆಯುವುದನ್ನು ರೂಡಿಸಿಕೊಳ್ಳಬೇಕು ಎಂಬುದಾಗಿ ಅಭಿಪ್ರಾಯಪಟ್ಟರು.

ಸಂಧ್ಯಾಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಉನ್ನತ ಶಿಕ್ಷಣದ ಅವಕಾಶವನ್ನು ಸಮಾಜದ ನೌಕರ ವರ್ಗ ಹಾಗೂ ಕಾರ್ಪೋರೇಟ್ ವಲಯದ ಇತರರಿಗೂ ತಲುಪಿಸುವಲ್ಲಿ ಈ ಸಂಧ್ಯಾಕಾಲೇಜನ್ನು ಪ್ರಾರಂಭಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುವುದು ಕುಲಪತಿ ಪ್ರೊ. ಕೆ. ಬೈರಪ್ಪನವರ ಕನಸಾಗಿತ್ತು ಎಂದು ಸ್ಮರಿಸಿಕೊಂಡರು. ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಹಾಗೂ ಕಾಲೇಜಿನ ಎಂ.ಬಿ.ಎ (ಐ.ಬಿ) ಹಾಗೂ ಎಂ.ಕಾಂ ವಿಭಾಗದ ಸಂಯೋಜಕ ಡಾ. ರಾಮಕೃಷ್ಣ ಬಿ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿ ಆಕಾಶ ಹಾಗೂ ತಂಡದ ಮಂಗಳೂರು ವಿಶ್ವ ವಿದ್ಯಾನಿಲಯ ತತ್ವಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ನಿರೂಪಣೆಯನ್ನು ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಕುಂದರ್ ಹಾಗೂ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ವಾಸುದೇವ ಶೆಣೈ ನಿರ್ವಹಿಸಿದರು.ಮಧುಶ್ರೀ ಜೆ ಶ್ರೀಯಾನ್ ಅತಿಥಿಗಳನ್ನು ಸ್ವಾಗತಿಸಿ, ಕೃಷ್ಣ ಹಾಗೂ ಶ್ರೀಮತಿ ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು, ಜೀವನ್‍ರವರು ವಂದಿಸಿದರು.ಕುಮಾರಿ ಪ್ರೀತಾ ಮೆನೇಜಸ್, ಮೊಹಮ್ಮದ್ ರಿಜ್ವಾನ್ ಹಾಗೂ ನಿತಿನ್‍ಕುಮಾರ್‍ರವರು ಬಹುಮಾನ ವಿಜೇತರುಗಳ ಪಟ್ಟಿಯನ್ನು ವಾಚಿಸಿದರು. ಸಾಂಸ್ಕøತಿಕ ವೈವಿಧ್ಯದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here