Thursday 28th, March 2024
canara news

ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ

Published On : 23 Mar 2018   |  Reported By : Rons Bantwal


ಹೊಸತನದ ಯೋಚನೆ-ಯೋಜನೆಗೆ ಸಲ್ಯೂಟ್ ಅನ್ನಲೇಬೇಕು

ಮುಂಬಯಿ, ಮಾ.23: ಸೇವೆ ಸಲ್ಲಿಸಲು ಪ್ರಾಮಾಣಿಕತೆ, ಉದಾರತೆ, ತ್ಯಾಗ, ಧರ್ಮ, ಶ್ರದ್ಧೆಗಳು ತೀರ ಅಗತ್ಯ. ಪ್ರತಿಫಲ ಅಥವಾ ಸಂಭಾವನೆ ತೆಗೆದು ಕೊಂಡರೂ ಅನೇಕರು ಮಾಡುವ ಕೆಲಸಗಳಲ್ಲಿ ಕರ್ತವ್ಯ ಲೋಪ ಮಾಡುತ್ತಾರೆ. ಭೃಷ್ಟಾಚಾರ ನಡೆಸುತ್ತಾ ದುಷ್ಟತನದಿಂದ ವರ್ತಿಸುತ್ತಾ ನಿರ್ದಿಷ್ಟ ಗುರಿ ತಲುಪುವುದಿಲ್ಲ. ಅಂತಹುದರಲ್ಲಿ ಸಂಪಾದನೆಯ ಒಂದಂಶವನ್ನು ಯಾವ ಪ್ರತಿಫಲವನ್ನು ನಿರೀಕ್ಷಿಸದೆ ಕೇವಲ ಸಮಾಜದ ಒಳಿತಿಗಾಗಿಯೇ ಮುಡಿಪಾಗಿಟ್ಟು ಕೊಂಡು ಅಶಕ್ತರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುನ್ನುಡಿ ಬರೆದ ಮುನಿಯಾಲು ಉದಯ ಶೆಟ್ಟಿ ಅವರು ಸ್ಥಾಪಿಸಿದ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ.) ಸ್ಥಾಪಿತವಾದ ಕಿರು ಅವಧಿಯಲ್ಲಿಯೇ ಮಹತ್ವದ ಸೇವಾ ಕಾರ್ಯದೊಂದಿಗೆ ನಿರತವಾಗಿದೆ.

ಸೀದಾ ಸಾದಾ ಮನುಷ್ಯನಾಗಿದ್ದವನಿಗೆ ಶಕ್ತಿ ತುಂಬುವುದು ಸಮಾಜವೇ.... ಸಮಾಜ ನೀಡಿದ ಶಕ್ತಿಯನ್ನು ಸಮಾಜದ ಉನ್ನತಿಗೆ ಹರಿಸಬೇಕು. ಸಮಜಕ್ಕೆ ಮನುಷ್ಯನ ಕೊಡುಗೆಯೇ ಹೆಚ್ಚು ಶಾಶ್ವತ ಎಂಬ ನಿಲುವಿನೊಂದಿಗೆ ಪ್ರಾಮಾಣಿಕ ನಿಷ್ಠೆತೊಂದಿಗೆ ಕಾರ್ಯವೆಸಗುತ್ತಿರುವ ಟ್ರಸ್ಟ್‍ನ ರೂವಾರಿ ಮುನಿಯಾಲು ಉದಯ ಶೆಟ್ಟಿ ಅವರ ಹೊಸತನದ ಯೋಜನೆ ಯೋಚನೆಗೆ ಹ್ಯಾಟ್ಸ್‍ಅಪ್ ಅನ್ನಲೇಬೇಕು.

ತಂದೆ ಮುನಿಯಾಲು ಕೃಷ್ಣಯ್ಯ ಶೆಟ್ಟಿ ಅವರ ಪ್ರತಿಷ್ಠಿತ ಉದ್ಯಮದ ಹಿನ್ನೆಲೆಯಿಂದ ಬೆಳೆದು ಬಂದಿರುವ ಉದಯ ಶೆಟ್ಟಿ ಅವರು ತಂದೆಯವರು ಹಾಕಿಕೊಟ್ಟ ದಾರಿ ಮತ್ತು ಅವರ ಮಾರ್ಗದರ್ಶನದ ನೆರಳಿನಲ್ಲಿ ಬದಕನ್ನು ಅರಳಿಸಿಕೊಂಡು ಓರ್ವ ಉದ್ಯಮಿಯಾಗಿ ಬರಿಯ ಲಾಭದ ದೃಷ್ಟಿಯಿಂದ ಕೆಲಸ ಮಾಡದೆ ಸರಕಾರದ ಗುತ್ತಿಗೆ ಕಾಮಗಾರಿಗಳಿಗೆ ಸಾರ್ವಜನಿಕರ ಬೆವರಿನ ಹಣ ವ್ಯಯವಾಗುತ್ತದೆ ಅದು ಸಮರ್ಪಕವಾಗಿ ಬಳಕೆ ಆಗಬೇಕು, ಮಾಡಿದ ಕೆಲಸ ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು ಎಂಬ ಪ್ರಜ್ಞೆಯಿಂದ ತನ್ನ ಗುತ್ತಿಗೆದಾರ ಉದ್ಯಮ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ.

ತನ್ನ ಅವಿರತ ಪರಿಶ್ರಮ ಹಾಗೂ ಪ್ರಾಮಾಣಿಕ ಉದ್ದೇಶವೇ ಯಶಸ್ಸಿನ ಮೆಟ್ಟಿಲು ಎಂಬ ನಿದರ್ಶನದೊಂದಿಗೆ ತಮ್ಮ ಮನೆ, ನೆರೆಕರೆ,, ಪರಿಸರದ ವಾತಾವರಣದಲ್ಲಿ ಸಹಯ, ಸಹಕಾರ ಮಾಡುತ್ತಾ, ಅನ್ಯರ ಕಷ್ಟ ಸುಖಗಳಲ್ಲಿ ಭಗಿಯಾಗುತ್ತಾ ಪರರ ನೋವಿಗೆ ಸ್ಪಮದಿಸಿ ಸಾಂತ್ವನ ನೀಡುತ್ತಾ ಸ್ನೇಹಜೀವಿಯಗಿ ಬೆಳೆದು ಬಂದವರು. ಈ ರೀತಿಯಾಗಿ ವೈಯಕ್ತಿಕವಾಗಿ ಸಮಾಜಪರ ಕಾರ್ಯವೆಸಗುತ್ತಿದ್ದ ಉದಯ ಶೆಟ್ಟಿಯವರು ಇದು ಕೇವಲ ಒಂದು ಪರಿಸರಕ್ಕೆ ಸೀಮಿತವಾಗಿರಬಾರದು. ಈ ಸೇವೆಯು ಕಾರ್ಕಳ ತಾಲೂಕಿನ ವ್ಯಾಪ್ತಿಯ ಜನರಿಗೆ ಲಾಭವಾಗಬೇಕು. ಅದಕ್ಕಾಗಿ ಸಾಂಥಿಕ ರೂಪದಲ್ಲಿ ನಡೆಸುವುದು ಹೆಚ್ಚು ಸೂಕ್ತ, ಮಾತ್ರವಲ್ಲದೆ ಅದು ವ್ಯಕ್ತಿಗತ ಚಟುವಟಿಕೆಗಿಂತ ಹೆಚ್ಚು ಶಾಶ್ವತ ಎನ್ನುವುದನ್ನು ಮನಗಂಡು ಹೊಸತನದ ಯೋಚನೆ ಯೋಜನೆಯನ್ನು ರೂಪಿಸಿಕೊಂಡು ಈ ಸೇವಾ ಚಟುವಟಿಕೆಗೆ ಮುನಿಯಾಲು `ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್' ಎಂಬ ನಾಮಾಂಕಿತದ ಚೌಕಟ್ಟು ನೀಡಿ ಇದು ಸುದೀರ್ಘ ಕಾಲ ಸಮಾಜದ ಬಡವರ ಕಣ್ಣೀರೊರೆಸುವಲ್ಲಿ ನೆರವಾಗಬೇಕು ಎಂಬ ಪ್ರಾಮಾಣಿಕ ಕಾಳಜಿಯನ್ನು ಇಟ್ಟುಕೊಂಡು ತನ್ನ ಪ್ರವೃತ್ತಿಗೆ ಒಂದು ನಿರ್ದಿಷ್ಟ ರೂಪ ದಿಕ್ಕು ದೆಸೆಯನ್ನಿತ್ತು ಈ ಟ್ರಸ್ಟ್‍ಗೆ ಚಾಲನೆ ಇತ್ತರು.

ಟ್ರಸ್ಟ್‍ನ ಪ್ರಮುಖ ಸೇವಾ ಕಾರ್ಯಗಳು:

* ನೈಜ ಕಾರಣಗಳಿಗಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು.
* ಆರೋಗ್ಯ ಸಮಸ್ಯೆ, ವಿಕಲಾಂಗರ ನೋವು, ನಿರ್ಲಕ್ಷಿತ ಮತ್ತು ಪರಿತ್ಯಜಿತ ಮಂದಿಗೆ ಸಹಾಯ.
* ಕಲಿಕೆ-ಕ್ರೀಡಾ ಕೌಶಲ್ಯಗಳಲ್ಲಿ ಬಡ ಕುಟುಂಬದ ಪ್ರತಿಭಾವಂತರನ್ನು ಗುರುತಿಸಿ ಪೆÇ್ರೀತ್ಸಾಹಿಸುವುದರ ಜತೆಗೆ
ಆಥಿರ್üಕ ನೆರವು.
* ಸಾಂಸ್ಕøತಿಕವಾಗಿ ಸಾಹಿತ್ಯ, ಸಂಗೀತ ಮತ್ತು ನಮ್ಮ ಆರಾಧನಾ ಧರ್ಮ ಪರಂಪರೆಗೆ ಸೇರಿದ ಚಟುವಟಿಕೆ
ಇತ್ಯಾದಿಗಳಿಗೆ ಕೊಡುಗೆ
* ತಾಲೂಕು ಅಲ್ಲಿನ ಯುವ ಸಮುದಾಯಕ್ಕೆ ಶಕ್ತಿ ತುಂಬುವ ಕಾರ್ಯ.
* ಆಥಿರ್üಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ.
* ವೃತ್ತಿಯಲ್ಲಿ ಶೃದ್ಧೆ, ನಿಷ್ಠೆ, ಬಡವರ ಪರ ಕಾಳಜಿ ವಹಿಸಿ ಪ್ರಾಮಾಣಿಕತೆಯಿಂದ ದುಡಿಯುವ ಆಟೋರಿಕ್ಷಾ ಚಾಲಕರನ್ನು ಗುರುತಿಸಿ ಪ್ರತಿ ವಾರಕ್ಕೆ ಒಬ್ಬರನ್ನು `ವಾರದ ಸಾರಥಿü' ಎಂಬ ಬಿರುದುನೊಂದಿಗೆ ಗೌರವಿಸಿ 5000 ರೂಪಾಯಿ ಗೌರವ ಧನ ನೀಡಿ ಪುರಸ್ಕರಿಸುವುದು.

ಟ್ರಸ್ಟ್ ಪ್ರಾರಂಭವಾದ ಅತೀ ಕಡಿಮೆ ಸಮಯದಲ್ಲೇ ಈ ಮೇಲ್ಕಂಡ ಸೇವೆಗಳನ್ನು ಕಾರ್ಯಕರ್ತಗೊಳಿಸಿ ಜನಮನ್ನಣೆಯನ್ನು ಪಡೆದ ಶ್ರೆಯಸ್ಸು ಈ ಟ್ರಸ್ಟ್‍ಗಿದೆ. ಇಷ್ಟೆಲ್ಲಾ ಸಮಾಜ ಪರ ಕಾರ್ಯಗಳು ಟ್ರಸ್ಟ್‍ನ ಮುಖೇನ ನಡೆಯುತ್ತಿದ್ದರೂ ಸಾರ್ವಜನಿಕ ದುಡ್ಡಿನಿಂದ ಬೆನ್ನು ತಟ್ಟಿಕೊಳ್ಳದೆ ಪ್ಲೆಕ್ಸ್, ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳದೆ ತನ್ನ ಅಪಾರ ಮಿತ್ರರ ಸ್ನೇಹಿತರ ಬೆಂಬಲ ಸಹಕಾರ ನೆರವಿನೊಂದಿಗೆ ಟ್ರಸ್ಟ್‍ನ ಚಟುವಟಿಕೆಯನ್ನು ನಿರಂತರವಾಗಿರಿಸಿಕೊಂಡಿರುವ ಉದಯ ಶೆಟ್ಟಿ ಅವರು ತಾವು ಮಾಡುವ ಸಮಾಜ ಸೇವೆಯ ಬಗ್ಗೆ ಎಂದೂ ಹೆಮ್ಮೆ ಪಟ್ಟುಕೊಳ್ಳದೆ, ತಮ್ಮ ಮನ ದಾಳದ ಮತನ್ನು ಈ ರೀತಿಯಾಗಿ ಹೇಳುತ್ತಾರೆ.

ತನ್ನ ಅಮೂಲ್ಯ ಯೌವನ ಶಕ್ತಿ, ಪ್ರಾಣವನ್ನು ಸ್ವಾತಂತ್ರ್ಯಕ್ಕಾಗಿ ದೇಶಕ್ಕಾಗಿ ಅರ್ಪಿಸಿದ ಭಗತ್ ಸಿಂಗ್, ರಾಜಗುರು, ಸುಖ್‍ದೇವ್ ಅಂತಹ ಭಾರತ ಮಾತೆಯ ಅನೇಕ ಸುಪುತ್ರ ಸುಪ್ರತ್ರಿಯರ ಆದರ್ಶ ನಮ್ಮ ಮುಂದಿದೆ. ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ, ಶಿವಾಜಿ ರಾಣಾ ಪ್ರತಾಪ ಅಂತಹ ರಾಜರುಗಳು ಭಾರತ ಮಾತೆಯ ರಕ್ಷಣೆಗೆ ಬಲಿದಾನವಾಗಿದ್ದಾರೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಮಹಾತ್ಮ ಗಾಂಧಿ, ಜೆ.ಪಿ. ಬಾಬಾ ಆಮ್ಟೆ, ಮದರ್ ಥೆರೆಸಾ, ಬಾಲಗಂಗಾಧರ ತಿಲಕ್ ಹೀಗೆ ಸಾಲು ಸಾಲು ಮಂದಿ ಸಮಾಜಕ್ಕಾಗಿ, ದೇಶಕ್ಕಾಗಿ ಕೊಡುಗೆಗಳ ಮಹಾಪೂರÀವನ್ನೇ ಹರಿಸಿದ್ದಾರೆ. ಅವರೆದುರು ನಮ್ಮದೆಲ್ಲ ಬರಿಯ ಅಳಿಲ ಸೇವೆ ಮಾತ್ರ ಎಂದು ನುಡಿಯುತ್ತಾರೆ. ಮಾತ್ರವಲ್ಲದೆ ವಿಶೇಷವಾಗಿ ಗೋಮಾತೆಯನ್ನು ಪೂಜಿಸಿ, ಗೌರವಿಸಿ ಅವುಗಳ ರಕ್ಷಣೆಗೆ ಕೂಡ ವಿಶೇಷ ಸೇವೆಯನ್ನು ನೀಡುತ್ತಿರುವುದನ್ನು ಸ್ಮರಿಸಬಹುದು.
ಹೌದು ಪ್ರತಿಯೊಬ್ಬ ಆದರ್ಶ ವ್ಯಕ್ತಿಯ ಹಿಂದೆ ಒಬ್ಬಳು ಸ್ತ್ರೀಯ ಅಭಯಹಸ್ತ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಉದಯ ಶೆಟ್ಟಿಯವರ ಸಮಾಜಮುಖಿ ಚಿಂತನೆಗೆ ಸ್ಫೂರ್ತಿಯ ಚಿಲುಮೆಯಾಗಿ ತನ್ನ ಬದುಕಿನ ಆದರ್ಶ ಯೋಚನಗೆಳಿಗೆ ಕೈಗನ್ನಡಿಯಾಗಿ ಪತ್ನಿ ಶ್ರಮಿಸುತ್ತಿದ್ದಾರೆ ಎನ್ನುವುದನ್ನು ಸ್ಮರಿಸುತ್ತಾರೆ.

ಸದಾ ಅನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರಗಿ ನೆರವಿನ ಸಿಂಚನ ಗೈಯುವ ಮಾದರಿ ಆದರ್ಶ ವ್ಯಕ್ತಿತ್ವದ ಉದರ ಶೆಟ್ಟಿಯವರು ಸಾಂಸಾರಿಕ ಬದುಕಿನಲ್ಲಿ ಪತ್ನಿ ನಮಿತಾ ಶೆಟ್ಟಿ, ಮಗಳು ಅಶ್ಮಿತಾ ಮತ್ತು ಸುಪುತ್ರ ವೇದಿಕ್ ಇವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. : ಪ್ರಭಾಕರ್ ಬೆಳುವಾಯಿ




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here