Wednesday 14th, May 2025
canara news

ಕೋಪರ್‍ಖೈರ್ನೆಯಲ್ಲಿ ಯಶಸ್ವಿಯಾಗಿ ತೆರೆಕಂಡ `ಅಂಬರ್ ಕ್ಯಾಟರರ್ಸ್' ಸಿನೆಮಾ

Published On : 26 Mar 2018   |  Reported By : Rons Bantwal


ಪ್ರೋತ್ಸಾಹಕ ಹಿತದೃಷ್ಠಿಯಿಂದಾದರೂ ಸಿನೆಮಾ ನೋಡಬೇಕು : ಅಣ್ಣಿಶೆಟ್ಟಿ

ಮುಂಬಯಿ, ಮಾ.25: ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ತೌಳವ ಸೂಪರ್‍ಸ್ಟಾರ್ ಬಿರುದಾಂಕಿತ ಸೌರಭ್ ಸುರೇಶ್ ಭಂಡಾರಿ ನಾಯಕ ನಟನೆಯಲ್ಲಿ ನಿರ್ಮಿತ ಕರ್ನಾಟಕದ ಕರಾವಳಿಯಾದ್ಯಂತ ಭಾರೀ ಜನಮನ್ನಣೆ ಪಡೆದ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ನವಿ ಮುಂಬಯಿ ಅಲ್ಲಿನ ಕೋಪರ್ ಖೈರ್ನೆಯ ಬಾಲಾಜಿ ಮೂಬಿ ಪ್ಲೆಕ್ಸ್ ಟಾಕೀಸ್‍ನಲ್ಲಿ ಯಶಸ್ವಿಯಾಗಿ ತೆರೆಕಂಡಿತು.

ಅತಿಥಿüಗಳಾಗಿ ಬಂಟರ ಸಂಘ ಮುಂಬಯಿ ಇದರ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ನವಿ ಮುಂಬಯಿ ಹೊಟೇಲ್ಸ್ ಒನರ್ಸ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಶಹಾಡ್ ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಪಾಂಗಾಳ, ಚಿಣ್ಣರ ಬಿಂಬದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದು ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ದೀಪ ಪ್ರಜ್ವಲಿಸಿ ಇಂದಿನ ಪ್ರದರ್ಶನಕ್ಕೆ ಚಾಲನೆಯನ್ನೀಡಿದರು.

ಸಿನೆಮಾ ಅಂದರೆ ತನ್ನೊಳಗಿನ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಒಂದು ಸಿನೆಮಾವನ್ನೇ ಅವಲಂಬಿಸಿ ಬದುಕುವ ನೂರಾರು ಜನÀರಿದ್ದಾರೆ. ಅವರ ಉದರ ಮತ್ತು ಕುಟುಂಬ ಪೆÇೀಷಣೆಗೂ ಒಂದು ಸಿನೆಮಾ ಭವ್ಯ ವೇದಿಕೆಯಾಗುತ್ತದೆ. ಒಂದು ಸಿನೆಮಾ ನಿರ್ಮಾಣದ ಹಿಂದೆ ಎಷ್ಟು ಶ್ರಮ, ಕಷ್ಟನಷ್ಟವಿದೆ ಎಂದು ನಿರ್ಮಾಪಕ ಮತ್ತು ಸಿನೆಮಾ ತಂಡಕ್ಕೆ ಮಾತ್ರ ತಿಳಿಯುವುದು. ಆದುದರಿಂದ ತಮ್ಮೊಳಗಿನ ಪ್ರತಿಭೆಗಳಿಗೆ ಪೆÇ್ರತ್ಸಾಹಿಸುವ ಮತ್ತು ಅದನ್ನವಲಂಬಿಸಿ ಬದುಕುವ ಜನರಿಗೆ ಪ್ರೇರೆಪಿಸುವ ಹಿತದೃಷ್ಠಿಯನ್ನಿರಿಸಿ ಸಿನೆಮಾವನ್ನು ನೋಡಬೇಕು. ನಮ್ಮ ಮಾತೃಭಾಷೆಯ ಬೆಳವಣಿಗೆ ಉದ್ದೇಶವಿರಿಸಿ ಸುರೇಶ್ ಭಂಡಾರಿ ಮತ್ತು ಸೌರಭ್ ಭಂಡಾರಿ ಅವರಿಂದ ರಚಿಸಲ್ಪಟ್ಟ ಅಂಬರ್ ಕ್ಯಾಟರರ್ಸ್ ತುಳು ಚಿತ್ರವಂತೂ ಸಮಗ್ರ ತುಳುವರ ಹಿರಿಮೆಯಾಗಿದೆ. ಇಂತಹ ಚಿತ್ರವನ್ನು ನೋಡುವುದರಿಂದ ನಾವೂ ನಮ್ಮ ಮಾತೃಭಾಷೆಯ ಋಣ ಪೂರೈಸುವಂತಾಗುತ್ತದೆ ಎಂದು ಧರ್ಮದರ್ಶಿ ಅಣ್ಣಿ ಶೆಟ್ಟಿ ತಿಳಿಸಿದರು.

ನಾನೂ ಓರ್ವ ಸಿನೆಮಾ ನಿರ್ಮಾಪಕ, ನಿರ್ದೇಶಕ, ನಟನಾಗಿಯೂ ಚಿತ್ರರಂಗದಲ್ಲಿ ಪಳಗಿದ್ದೇನೆ. ಅನೇಕ ಏರುಪೇರುಗಳ ಮಧ್ಯೆ ಸಾವಿರಾರು ಗಂಟೆಗಳ ಕಾಲಾವಧಿಯನ್ನು ವಿನಿಯೋಗಿಸಿ ಒಂದೆರಡು ಗಂಟೆಯ ಚಲನಚಿತ್ರ ನಿರ್ಮಾಣ ತಯಾರಿ ಅಂದರೆ ಅದೊಂದು ಅಂದಾಜಿಸಲಾಗದ ಪ್ರಯತ್ನ. ಜನಮೆಚ್ಚಿದರೆ ಓಕೆ, ಇಲ್ಲವಾದರೆ ಇದೆಲ್ಲಾ ಬೇಕೇ ಅನ್ನುವಷ್ಟರ ಮಟ್ಟಕ್ಕೆ ಸಿದ್ಧರಾಗಬೇಕಾಗುತ್ತದೆ. ಒಂದು ಸಿನೆಮಾ ರಚನೆ ಅಂದರೆ ಜಗತ್ತನ್ನು ಮುಷ್ಠಿಯಲ್ಲಿರಿಸುವ ಪ್ರಯತ್ನವೇ ಸರಿ ಎಂದು ಶ್ಯಾಮ ಶೆಟ್ಟಿ ತಿಳಿಸಿದರು.

ಹೊಟೇಲ್ ಉದ್ಯಮಿಗಳಾದ ಮೋಹನ್ ಶೆಟ್ಟಿ ಮಜ್ಜಾರು, ಉದಯ ಆರ್.ಹೆಗ್ಡೆ ಶಿರ್ವಾ, ಸತೀಶ್ ಪೂಜಾರಿ, ನಾಗರಾಜ್ ಶೆಟ್ಟಿ, ಅರುಣ್ ಶೆಟ್ಟಿ, ಸುಜೀತ್ ಶೆಟ್ಟಿ ಸಾಂತೂರು, ಅಶೋಕ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸೇರಿದಂತೆ ಅಕೇಕ ಗಣ್ಯರು ಉಪಸ್ಥಿತರಿದ್ದು ಸುರೇಶ್ ಭಂಡಾರಿ ಮತ್ತು ಸೌರಭ್ ಭಂಡಾರಿ ಸಾಧನೆಗೆ ಶುಭಾರೈಸಿದರು.

ಸೌರಭ್ ಸುರೇಶ್ ಭಂಡಾರಿ ಸುಖಾಗಮನ ಬಯಸಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here