(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.26: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಹಾಗೂ ಸಾಂಸ್ಕೃತಿಕ ಉಪ ಸಮಿತಿಯು ವಾರ್ಷಿಕವಾಗಿ ನೆರವೇರಿಸುತ್ತಿರುವ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ಅಲಂಕೃತವಾಗಿ ರಚಿಸಿದ ಮಾತಾ ವಿೂನಾಕ್ಷಿ (ಮಧುರೈ)ವೇದಿಕೆಯಲ್ಲಿ ವಿಧಿವತ್ತಾಗಿ ನೆರವೇರಿಸಿತು.
ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮಕ್ಕೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಹಾಗೂ ಅಸೋಸಿಯೇಶನ್‍ನ ಮಾಜಿ ಗೌ| ಪ್ರ| ಕಾರ್ಯದರ್ಶಿ ಎನ್.ಎಂ ಸನಿಲ್ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.
ಅಸೋಸಿಯೇಶನ್‍ನ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಮತ್ತು ವೀಣಾ ದಯಾನಂದ್ ಪೂಜಾರಿ ದಂಪತಿ ಕಲಶವನ್ನು ಪ್ರತಿಷ್ಠಾಪನೆಗೈದÀರು. ರವೀಂದ್ರ ಶಾಂತಿ ಸಾಮೂಹಿಕ ಶನಿಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಸಾಂಸ್ಕೃತಿಕ ಸಮಿತಿ ಗೌ| ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಸದಸ್ಯರುಗಳಾದ ಪದ್ಮನಾಭ ಕೆ.ಪೂಜಾರಿ, ಶಿವರಾಮ ಕೋಟ್ಯಾನ್ ಕಲೀನಾ, ಭವನದ ವ್ಯವಸ್ಥಾಪಕ ಭಾಸ್ಕರ ಟಿ.ಪೂಜಾರಿ, ಎಚ್.ಬಿ.ಎಲ್ ರಾವ್, ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಪುಷ್ಫಲತಾ ಎನ್.ಸಾಲ್ಯಾನ್, ಕೆ.ಬಿ ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ನ್ಯಾಯವಾದಿ ಎಸ್.ಬಿ ಅವಿೂನ್, ಅಶೋಕ್ ಎಂ.ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಹಾಗೂ ಅನೇಕ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.
ಭಾರತ್ ಬ್ಯಾಂಕ್‍ನ ನಿರ್ದೇಶಕ ಹಾಗೂ ಅಸೋಸಿಯೇಶನ್‍ನ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮತ್ತು ಯಶೋಧರ್ ಡಿ.ಪೂಜಾರಿ ಗ್ರಂಥ ಪಾರಾಯಣಕ್ಕೆ ಚಾಲನೆಯನ್ನಿತ್ತರು. ನೆರೆದ ಸೇವಾಥಿರ್s, ಭಕ್ತಾಧಿಗಳು ಸಾಮೂಹಿಕ ಪೂಜಾ ಪ್ರಕ್ರಿಯೆ ನೆರವೇರಿಸಿ ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾದರು.