Wednesday 14th, May 2025
canara news

ಐ. ಎಸ್. ಟಿ. ಡಿ. ಯ ಮಂಗಳೂರು - ಉಡುಪಿ ಶಾಖೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆ

Published On : 27 Mar 2018   |  Reported By : media release


ದೇಶದ ಅತಿ ದೊಡ್ಡ ತರಬೇತಿ ಸೊಸೈಟಿ ಎಂಬ ಹೆಗ್ಗಳಿಕೆಯಿರುವ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್ ನ 53 ನೇ ಶಾಖೆಯು (ಮಂಗಳೂರು-ಉಡುಪಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡಿತು .

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐ ಎಸ್ ಟಿ ಡಿ ಯ ಬೆಂಗಳೂರು ಶಾಖೆಯ ಅಧ್ಯಕ್ಷೆ ಡಾ ಮೀರಾ ವೆಂಕಟ್ ಭಾಗವಹಿಸಿದ್ದರು . ಆಳ್ವಾಸ್ ನಲ್ಲಿ ಐ ಎಸ್ ಟಿ ಡಿ ಶಾಖೆ ಪ್ರಾರಂಭವಾಗುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಸಂಸ್ಥೆಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು .

ಇನ್ನೋರ್ವ ಅತಿಥಿ , ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ ಸಿ ಸುಜಿತ್ ಮಾತನಾಡಿ , ವಿದ್ಯಾರ್ಥಿಗಳು ಮಾನವ ಸಂಬಂಧಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಬೇಕೆಂದು ಕರೆಯಿತ್ತರು .

ಐ ಎಸ್ ಟಿ ಡಿ ಸಲಹೆಗಾರ ವರಹಸ್ವಾಮಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮ ಸಂಘಟಕರಿಗೆ ಶುಭ ಹಾರೈಸಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಿಳಿಸಿದರು .

ಮಂಗಳೂರು - ಉಡುಪಿ ಶಾಖೆಯ ಛೇರ್ಮನ್ ಮತ್ತು ಎಂಬಿಎ ಡೀನ್ ಪ್ರೊ ಪಿ ರಾಮಕೃಷ್ಣ ಚಡಗ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದತ್ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿ ಧರ್ಮಾನಂದ್ ವಂದಿಸಿದರು .




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here