Wednesday 14th, May 2025
canara news

ರೈಲ್ ಯಾತ್ರಿ ಸಂಘದ ವತಿಯಿಂದ ರೈಲ್ವೆ ಮಂತ್ರಿ ಪೀಯೂಶ್ ಗೋಯೆಲ್ ಅವರಿಗೆ ಮನವಿ

Published On : 29 Mar 2018   |  Reported By : Bernard J Costa


ಮುಂಬಯಿ, ಮಾ. 28: ಕರ್ನಾಟಕ ಮತ್ತು ಕೇರಳ ರಾಜ್ಯದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಾನ್ಯ ಸಂಸದರಾದ ಗೋಪಾಲ ಶೆಟ್ಟಿ ನೇತೃತ್ವದ ಅಯೋಗವು ಇತ್ತೀಚೆಗೆ ಭಾರತ ಸರಕಾರದ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಪೀಯೂಶ್ ಗೋಯೆಲ್ ಇವರನ್ನು ಭೇಟಿ ಮಾಡಿ ರೈಲ್ವೆ ಪ್ರಯಾಣಿಕರ ಈ ಕೆಳಗಿನ ಬೇಡಿಕೆಗಾಗಿ ಮನವಿಯನ್ನು ಸಲ್ಲಿಸಿತು. ಪಶ್ಚಿಮ ರೈಲ್ವೆ ವಿಭಾಗದಿಂದ ಕೊಂಕಣ್ ರೈಲ್ವೆ ಮೂಲಕ ಮಂಗಳೂರು ಸೆಂಟ್ರಲ್ ಗೆ ರೈಲು, ಪಶ್ಚಿಮ ರೈಲ್ವೆ ಮತ್ತು ಮಂಗಳೂರು ಸೆಂಟ್ರಲ್ ರೈಲುಗಾಗಿ ಸುಮಾರು 7 ಕಿಲೋ ಮೀಟರ್ ಉದ್ದದ ಹಳಿ ಜೋಡಣೆ, ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ವಿಮಾ ಸೌಲಭ್ಯ ನೀಡುವುದು, ಮುಂಬೈನಿಂದ ಮಂಗಳೂರಿಗೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ಗೆ ಮುಲ್ಕಿಯಲ್ಲಿ ನಿಲುಗಡೆ ಕೋರಿಕೆಗಳನ್ನು ನೀಡಿದರು.

ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಸಕಾರಾತ್ಮಕ ಒಪ್ಪಿಗೆಯನ್ನು ಸೂಚಿಸಿ, ಇದೀಗ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ನಂತರ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು. ಈ ನಮ್ಮ ಬೇಡಿಕೆಯು ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ.

ನಿಯೋಗದ ನೇತೃತ್ವವನ್ನು ಸಂಸದರಾದ ಗೋಪಾಲ ಶೆಟ್ಟಿ ವಹಿಸಿದ್ದು, ರೈಲ್ ಯಾತ್ರಿ ಸಂಘ ಬೊರಿವಿಲಿ ವತಿಯಿಂದ ವಿರಾರ್ ಶಂಕರ್ ಶೆಟ್ಟಿ , ಉದಯಕುಮಾರ್ ಶೆಟ್ಟಿ ಶಿಮಂತೂರು, ಶ್ರೀಮತಿ ಶೀಲಾ ಶೆಟ್ಟಿ, ರಂಜಿತ್ ಸುವರ್ಣ, ಮೋನ್ ಡಿಕೋಸ್ಟ ಉಪಸ್ಥಿತರಿದ್ದರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here