Wednesday 14th, May 2025
canara news

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ

Published On : 30 Mar 2018   |  Reported By : Bernard Dcosta


ಕುಂದಾಪುರ, ಮಾ.29: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ನೆರವೇರಿಸಿಕೊಟ್ಟರು.

ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ ‘ಪರಮ ಪ್ರಸಾದ ಪವಿತ್ರ ಸಭೆಯ ಥಳ ಮತ್ತು ಶಿಖರವಾಗಿದೆ. ಪರಮ ಪ್ರಸಾದ ಅಂದರೆ ಯೇಸುವಿನ ಭೋಜನ, ಭೋಜನ ಅಂದರೆ ಸಂತೊಷ, ಪ್ರೀತಿ, ಸಡಗರ, ದೇವರ ರಾಜ್ಯ ಪಡೆಯುವುದಕ್ಕೆ ಪರಮ ಪ್ರಸಾದ ನಮಗೆ ದಾರಿ. ಯೇಸು ದೇವರ ಪುತ್ರ, ಮಹಾ ಗುರುಗಳು, ಆದರೂ ಅವರು ಅತೀ ಸಣ್ಣವನಾಗಿ, ಅಂದಿನ ಕಾಲದಲ್ಲಿ ಗುಲಾಮರು ಮಾತ್ರ ಧನಿಗಳ ಕಾಲು ತೊಳೆಯುವ ಸಂಪ್ರಾದಾಯ ಇತ್ತು, ಅದರಂತೆ ಸೇವೆ ಮಾಡಲು ನಾವು ಸಣ್ಣವರಾಗಬೇಕೆಂದು ತೊರಿಸಿಕೊಡಲು, ಯೇಸು ತನ್ನ ಶಿಸ್ಯರ ಕಾಲು ತೊಳೆದು,ಒರೆಸಿ ನನ್ನ ಶಿಸ್ಯರಾದ ನೀವು ಅತೀ ಸಣ್ಣವರಾಗಿ ಇತರರ ಕಾಲು ತೊಳೆಯ ಬೇಕೆಂದು ಸಾಂಕೇತಿಕವಾಗಿ ತೋರಿಸಿಕೊಟ್ಟು, ನೀವು ಇತರರ ಸೇವೆ ಮಾಡಬೇಕೆಂದು ತಿಳಿಯ ಪಡಿಸಿದರು, ಇದು ಕೇವಲ ಶಿಸ್ಯರಿಗೆ ಮಾತ್ರವಲ್ಲಾ, ಯೇಸುವಿನ ಅನುಯಾಯಿಗಳು ಅನ್ವಯವಾಗುತ್ತೆ, ನಮಗೆ ಬಡವರ ದೀನ ದಲಿತರ ಸೇವೆ ಮಾಡಲು ನೀಡಿದ ಸಂದೇಶವಿದು, ತನ್ನ ಧರ್ಮರಾಜ್ಯವನ್ನು ಮುಂದುವರಿಸ್ಕೊಂಡು ಹೋಗಲು ಇದೇ ದಿನ ಯೇಸು ತನ್ನ ಶಿಸ್ಯರಿಗೆ ಧರ್ಮಗುರುವಿನ ದಿಕ್ಷೆಯನ್ನು ನೀಡಿ ಯಾಜಕ ಸಂಸ್ಕಾರವನ್ನು ಸ್ಥಾಪಿಸಿದ ದಿನ’ ಎಂದು ಹೇಳುತ್ತಾ ‘ಯಾಜಕರೂ ಕೂಡ ಮನುಷ್ಯರೆ, ಅವರಿಗೆ ತಮ್ಮ ಧಾರ್ಮಿಕ ಸಂಸ್ಕಾರವನ್ನು ಒಳ್ಳೆಯ ರೀತಿಯಲ್ಲಿ ನೆಡೆದುಕೊಂಡು ಹೋಗಲು ವಿಶ್ವಾಸಿಗಳ ಪ್ರಾರ್ಥನೆ ಅಗತ್ಯವಿದೆ ಹಾಗಾಗಿ ಯಾಜಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿಸಿರಿ’ ಎಂದು ಅವರು ಪ್ರವವಚನ ನೀಡಿದರು.

ಎರಡನೇ ಭಾಗದಲ್ಲಿ ಆರಿಸಲ್ಪಟ್ಟ ವಿಶ್ವಾಸಿಗಳ ಪಾದ ತೊಳೆಯುವ ಧಾರ್ಮಿಕ ವಿಧಿಯನ್ನು ಧರ್ಮಗುರು ವಂ|ಅನಿಲ್ ಡಿಸೋಜಾ ನೆಡೆಸಿಕೊಟ್ಟರು. ಮೂರನೇ ಭಾಗವಾಗಿ ರೊಟ್ಟಿ ಮತ್ತು ದ್ರಾಕ್ಷರಸದೊಂದಿಗೆ ಪರಮ ಪ್ರಸಾದದ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಹೀಗೆ ಮೂರು ಧಾರ್ಮಿಕ ವಿಧಿಗಳು ನೆಡೆದ ಬಳಿಕ ಪರಮ ಪ್ರಸಾದವನ್ನು ವಿಶ್ರಾಂತಿ ಪೀಠಕ್ಕೆ ಕೊಂಡಯ್ದು, ಪರಮ ಪ್ರಸಾದದ ಆರಾಧನೆ ನೆಡೆಯಿತು. ಈ ಆರಾಧನೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಭಗಿನಿಯರು ನೆಡೆಸಿಕೊಟ್ಟರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here