Wednesday 14th, May 2025
canara news

ದಿ| ಸುಮನ್ ಕೆ.ಚಿಪ್ಲೂಣ್ಕರ್ ಕೃತಿ `ಕುಸುಮ'ಕ್ಕಾಗಿ ಬರಹಗಳಿಗೆ ಆಹ್ವಾನ

Published On : 04 Apr 2018   |  Reported By : Rons Bantwal


ಮುಂಬಯಿ, ಎ.04: ಮುದ್ರಾ ವಿಜ್ಞಾನದಲ್ಲಿ ದಾಖ¯ ನಿರ್ಮಿಸಿ ಇತ್ತೀಚೆಗೆ ನಮ್ಮನ್ನಗಲಿದ ಶ್ರೀಮತಿ ಸುಮನ್ ಕೆ.ಚಿಪ್ಲೂಣ್ಕರ್ ಇನ್ನು ಸ್ಮರಣೆ ಮಾತ್ರ. ಅವರು ಸ್ವರಚಿಸಿದ ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಬರೆದ ಮುದ್ರಾ ವಿಜ್ಞಾನ ಪುಸ್ತಕ ಸುಮಾರು 56ಕ್ಕೂ ಮಿಕ್ಕಿ ಮರು ಮುದ್ರಣಗೊಂಡಿವೆ. ಆದರ್ಶ ಶಿಕ್ಷಕಿಯಾಗಿ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.

ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ತನ್ನನ್ನು ಅರ್ಪಿಸಿಕೊಂಡ ಸುಮನ್ ಚಿಪ್ಲೂಣ್ಕರ್ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ದೃಷ್ಟಿಯಿಂದ ಅವರ ಸಾಧನೆಗಳ ಕುರಿತು ಸಾಹಿತ್ಯ ಬಳಗದ ರಜತ ಮಹೋತ್ಸವದ ಸಂದರ್ಭ `ಸಾಧಕರಿಗೆ ನಮನ' ಎನ್ನುವ ಯೋಜನೆಯ ಅಡಿಯಲ್ಲಿ ಮುದ್ರಾ ವಿಜ್ಞಾನಿ ಸುಮನ್ ಕೆ.ಚಿಪ್ಲೂಣ್ಕರ್ ಕೃತಿ `ಕುಸುಮ'ವನ್ನು ಮುದ್ರಿಸಲು ಯೋಜನೆ ಹಮ್ಮಿಕೊಂಡಿದ್ದೇವೆ. ಸುಮನ್ ಕುರಿತು ತಮ್ಮ ಅನಿಸಿಕೆಗಳನ್ನು ಮನುಶ್ರುತಿ, ಸಿ-42/2/2, ಸೆಕ್ಟರ್-29, ನವಿಮುಂಬಯಿ 400 703, ಈ ವಿಳಾಸಕ್ಕೆ ಬರೆದು ಇದೇ ಮೇ.30ರ ಒಳಗೆ ಕಳುಹಿಸಬೇಕಾಗಿ ಸಾಹಿತ್ಯ ಬಳಗದ ಅಧ್ಯಕ್ಷ ಎಚ್.ಬಿ.ಎಲ್ ರಾವ್ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಎಚ್.ಬಿ.ಎಲ್ ರಾವ್: 9969533123, ಪ್ರೇಮಾ ಎಸ್ ರಾವ್: 999549980, ಪಿ.ಸಿ.ಎನ್ ರಾವ್: 9820599293 ಈ ಮೊಬಾಯ್ಲ್‍ಗಳನ್ನು ಸಂಪರ್ಕಿಸಲು ಕೋರಲಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here