Sunday 6th, July 2025
canara news

ಎ.11: ಪುಣೆಯಲ್ಲಿ ಜಾತಿ ಪ್ರಮಾಣ ಪತ್ರಿಕೆಯ ತಿಳಿವಳಿಕಾ ಕಾರ್ಯಕ್ರಮ

Published On : 08 Apr 2018   |  Reported By : Rons Bantwal


ಮುಂಬಯಿ, ಎ. 07: ಯುನಿಟಿ ಸಮಾಜ ಹಾಗೂ ವೆಲ್‍ಫೇರ್ ಪೌಂಡೇಶನ್ ಪ್ರಿಂಪ್ರಿ ಪುಣೆ ಇವರು ಜಾತಿ ಪ್ರಮಾಣ ಪತ್ರಿಕೆಯ ತಿಳಿವಳಿಕಾ ಕಾರ್ಯಕ್ರಮವನ್ನು ಇದೇ ಬುಧವಾರ (ಎ.11) ಸಂಜೆ 4.30ಕ್ಕೆ ಹೊಟೇಲ್ ದಕ್ಷಿಣ್, ಸಂತ ತುಕರಾಮ ನಗರ ವೈಸಿಮ್ ಆಸ್ಪತ್ರೆ ರಸ್ತೆ, ಅಗ್ನಿಶಾಮಕದಳದ ಹತ್ತಿರ ಪ್ರಿಂಪ್ರಿ, ಪುಣೆ ಇಲ್ಲಿ ನಡೆಯಲಿದೆ.

   

Rohit Suvarna                   Shridhar Poojary Lonavala.

 

ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಶ್ರೀಧರ ಪೂಜಾರಿ (ಉಪಾಧ್ಯಕ್ಷರು, ಲೋನಾವಾಲ ಮಹಾನಗರಪಾಲಿಕೆ, ಪುಣೆ) ಇವರು ಆಗಮಿಸಲಿರುವರು. ಅಲ್ಲದೆ, ಬಿಲ್ಲವ, ಬೆಳ್ವಡ, ಬಂಜಾರ, ದೇವಾಡಿಗ, ಗಾಣಿಗ, ಕುಲಾಲ್, ಲಮಾನಿ, ಮೂಲ್ಯ ಪದ್ಮಶಾಲಿ, ಸಫಲಿಗ ಹಾಗೂ ತೀಯಾ ಸಮಾಜದವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಜಾತಿ ಪ್ರಮಾಣ ಪತ್ರದ ಬಗ್ಗೆ ರೋಹಿತ್ ಎಂ. ಸುವರ್ಣ (ಮಾಜಿ ನಗರ ಸೇವಕ, ಭಯಂದರ್) ತಮ್ಮ ಒಬಿಸಿ ಬಗೆಗಿನ ಅನುಭವ ವ್ಯಕ್ತ ಪಡಿಸಲಿದ್ದಾರೆ. ನಮ್ಮ ತುಳು ಸಮಾಜ ಬಾಂದವರೆಲ್ಲರೂ ಇದರ ಪ್ರಯೋಜನವನ್ನು ಪಡೆಯ ಬೇಕೆಂದು ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ. ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ ಕಿರಣ್ ವೈ.ಸುವರ್ಣ-9325510046, ಸಂಗೀತ ಸುವರ್ಣ-8007545303 ಮತ್ತು ನೂತನ್ ಎಸ್.ಪನಿಯಾಡಿ-9371009074 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here