Wednesday 14th, May 2025
canara news

ಶ್ರೀಕ್ಷೇತ್ರ ಬಂಟಕಲ್ಲು-ಜೀರ್ಣೋದ್ಧಾರಕಾರ್ಯಕ್ಕೆ ಶಿಲಾ ಮುಹೂರ್ತ

Published On : 09 Apr 2018   |  Reported By : Rons Bantwal


ಮುಂಬಯಿ (ಶಿರ್ವ), ಎ.09: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳ ಸಂಪೂರ್ಣ ಜೀಣೋದ್ಧಾರ ಗೊಳ್ಳಲಿದ್ದು, ಪೂರ್ವಭಾವಿಯಾಗಿ ಸೋಮವಾರ ಪೂರ್ವಾಹ್ನ "ಶಿಲಾ ಮುಹೂರ್ತ" ಧಾರ್ಮಿಕ ಅನುಷ್ಠಾನಗಳು ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಜರುಗಿದವು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ದಂಪತಿ ಪೂಜಾನುಷ್ಠಾನದಲ್ಲಿ ಪಾಲ್ಗೊಂಡರು. ಕಾರ್ಕಳದ ಖ್ಯಾತ ಶಿಲ್ಪಿ ಕುಪ್ಪುಸ್ವಾಮಿ ನೇತೃತ್ವದಲ್ಲಿ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಇತರ ಶಿಲಾಪೂರಕ ಕಾಮಗಾರಿಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಜೀರ್ಣೊದ್ಧಾರ ಸಮಿತಿ ಕಾಯಾಧ್ಯಕ್ಷ ಎಂ.ಮಂಜುನಾಥ್ ನಾಯಕ್ ಕುಕ್ಕಿಕಟ್ಟೆ, ಪ್ರಧಾನ ಕಾರ್ಯದರ್ಶಿ ಶಶಿಧರ್ ವಾಗ್ಲೆ ಸಡಂಬೈಲು, ಆರ್‍ಎಸ್‍ಬಿ ಸಂಘದ ಅಧ್ಯಕ್ಷ ಶ್ರೀಶ ಎಸ್.ನಾಯಕ್ ಪೆರ್ಣಂಕಿಲ, ನಿಕಟಪೂರ್ವಾಧ್ಯಕ್ಷ ಉಪೇಂದ್ರ ನಾಯಕ್, ರಾಜಾಪುರ ಸಾರಸ್ವತ ಯುವವೃಂದದ ಅಧ್ಯಕ್ಷ ಸಂಜಯ್ ಆರ್.ನಾಯಕ್, ಗೌರವಾಧ್ಯಕ್ಷ ಕೆ.ಆರ್ ಪಾಟ್ಕರ್, ಶ್ರೀದುರ್ಗಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ, ದೇವಳದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರು ಸಮಾಜ ಭಾಂಧವರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here