Sunday 24th, March 2019
canara news

ಧರ್ಮಸ್ಥಳದ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಡಿ.ಧರ್ಣಪ್ಪನವರಿಗೆ ಸನ್ಮಾನ.

Published On : 16 Apr 2018   |  Reported By : Rons Bantwal


ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಡಿ.ಧರ್ಣಪ್ಪ ಅವರ ವಯೋನಿವೃತ್ತಿ ಹೊಂದಿದ ಸಂದರ್ಭದಲ್ಲಿ ಕ್ಷೇತ್ರದ ನೌಕರವೃಂದ ಹಾಗೂ ನಾಗರಿಕರು ಸೇರಿ ಶ್ರೀ ಕ್ಷೇತ್ರದ ಮಹೋತ್ಸವ ಸಭಾ ಭವನದಲ್ಲಿ ಅವರು ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಅರ್ಪಣಾ ಮನೋಭಾವದ ಸೇವೆಗಾಗಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ತೋಳ್ಪಡಿತ್ತಾಯರು ನಮ್ಮೆಲ್ಲರ ನೆಚ್ಚಿನ ಶಿಕ್ಷಕರಾದ ಶ್ರೀ ಡಿ.ಧರ್ಣಪ್ಪನವರು ತಾನು ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳದಲ್ಲಿ ಸಕ್ರಿಯವಾಗಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿರುವ ಇವರು ಅಭಿನಂದನಾರ್ಹ ವ್ಯಕ್ತಿ ಎಂದರು.

ಶ್ರೀ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಹರಿದಾಸ ಗಾಂಭೀರ್ ರವರು ಇವರೊಬ್ಬರ ಶ್ರದ್ಧೆ ,ನಿಷ್ಠೆ,.ವೃತ್ತಿ ಗೌರವವನ್ನು ಉಳಿಸಿಕೊಂಡ ವಿಶೇಷ ವ್ಯಕ್ತಿತ್ವದವರು..ತಾನು ಸೇವೆ ಸಲ್ಲಿಸಿದ ಶಾಲೆಯ ಬಗ್ಗೆ ವಿಶೇಷ ಕಾಳಜಿಯ ವಹಿಸಿ ಆಡಳಿತ ಮಂಡಳಿಯ ಮಧುರ ಬಾಂಧವ್ಯದೊಂದಿಗೆ ಶಾಲೆಯ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರಲ್ಲದೆ ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿತ್ವದವರು..

ಶ್ರೀ.ಧ.ಮಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರ್ರೀ ಮೋಹನನಾರಾಯಣರವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಇವರು ತನ್ನ ವೃತ್ತಿ ಜೀವನದುದ್ದಕ್ಕೂ ಸಂಸ್ಥೆ ಹಾಗೂ ಕ್ಷೇತ್ರದ ಎಲ್ಲಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ವಿಶೇಷ ವ್ಯಕ್ತಿ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ತೋಳ್ಪಡಿತ್ತಾಯರು ಇವರದು ವಿಭಿನ್ನ ವ್ಯಕ್ತಿತ್ವ , ಆದರ್ಶ ನಡತೆಯ ಆತ್ಮೀಯ ಸಂಗಾತಿಯಾಗಿ ತನ್ನ ವೃತ್ತಿಯೊಂದಿಗೆ ತಾನು ಬಾಳುವ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡವರು ಎಂದರು.

ಶ್ರೀ ಕ್ಷೇತ್ರದ ಪಾರುಪತ್ಯಗಾರರಾದ ಶ್ರೀ ಲಕ್ಷಿನಾರಾಯಣ ರಾವ್ ಇವರು ಉತ್ತಮ ಒಡನಾಟದ ವ್ಯಕ್ತಿತ್ವ,ಚತುರ ,ಸಂಘಟಕ ತಾನು ನಿರ್ವಹಿಸಿದ ಜವಾಬ್ದಾರಿಯ ಬಗ್ಗೆ ವಿಶೇಷ ಕಾಳಜಿ ತನ್ನ ಸಾಮಾಜಿಕ ಕಾರ್ಯಕ್ರಮದಲ್ಲಿ ಆಳವಾದ ಚಿಂತನೆ, ಕಾರ್ಯನಿರ್ವಹಣೆಯಲ್ಲಿ ಅಚ್ಚುಕಟ್ಟುತನ ಪ್ರಾಮಾಣಿಕ ವ್ಯಕ್ತಿತ್ವ ಎಲ್ಲರೊಡನೆ ಆತ್ಮೀಯವಾಗಿ ಬೆರೆಯಬಲ್ಲ ಉತ್ತಮ ಗುಣನಡತೆಯ ವ್ಯಕ್ತಿ . ನಿರ್ವಹಿಸಿದ ಜವಾಬ್ದಾರಿಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿದವರು ಎಂದರು.

ಸಭಾದ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರದ ಜಮಾಉಗ್ರಾಣದ ಹಿರಿಯ ಮುತ್ಸುದ್ದಿ ಶ್ರೀ ಬಿ.ಭುಜಬಲಿ ಯವರು ಇವರೋರ್ವ ಜವಾಬ್ದಾರಿಯುತ ಶಿಕ್ಷಕ ಸಮಾಜದ ವಿವಿಧÀ ರಂಗಗಳಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಣೆ ಮಾಡಿ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡು ಸಾಮಾಜಿಕ ಕಳಕಳಿಯಿಂದ ದುಡಿದವರು.ತನ್ನ ಎಲ್ಲಾ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರುವರು.ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ,ಸಹೋದ್ಯೋಗಿಗಳ ಸಹೋದರನಾಗಿ ಹೆತ್ತವರ ಆತ್ಮೀಯ ಶಿಕ್ಷಕರಾಗಿ ಬದುಕಿದವರು.42 ವರ್ಷಗಳ ಕಾಲ ತಾನು ವಿದ್ಯಾಭ್ಯಾಸ ನಡೆಸಿದ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದವರು.ಇವರ ಸೇವೆಯನ್ನು ಗುರ್ತಿಸಿ ವಿದ್ಯಾ ಇಲಾಖೆಯವರು 2016-17 ನೇ ಸಾಲಿನಲ್ಲಿ ತಾನು ಸೇವೆ ಸಲ್ಲಿಸಿದ ಶಾಲೆಗೆ ದ.ಕ ಜಿಲ್ಲಾ ಮಟ್ಟದ ‘ಸ್ವಚ್ಚ ವಿದ್ಯಾಲಯ’ ಪ್ರಶಸ್ತಿಯಿಂದ ಪುರಸ್ಕೃತಗೊಳ್ಳಲು ಕಾರಣೀಭೂತರಾಗಲು ದುಡಿದ ವಿಶೇಷ ವ್ಯಕ್ತಿತ್ವ ಇವರದು.

ಸನ್ಮಾನ ಸ್ವೀಕರಿಸಿದ ಶ್ರೀ.ಡಿ.ಧರ್ಣಪ್ಪನವರು ತನ್ನ ಸೇವೆಯ ಹಿಂದೆ ಶ್ರೀ ಮಂಜುನಾಥ ಸ್ವಾಮಿಯ ಕೃಪೆ ,ಪೂಜ್ಯ ಖಾವಂದರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಮಾರ್ಗದರ್ಶನ ಸಂಸ್ಥೆಯ ಪೆÇ್ರೀತ್ಸಾಹದಿಂದ ಶಿಕ್ಷಕರಾಗಿ ಮಾತ್ರವಲ್ಲದೆ ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮದಲ್ಲಿ ದುಡಿಯಲು ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯಿತಲ್ಲದೆ ತನ್ನ ಶ್ರೇಯಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಶ್ರೀ ಶ್ರೀನಿವಾಸರಾವ್ ಅವರು ಶಾಲೆ ಮತ್ತು ಸಮಾಜದ ಸೇವೆಯನ್ನು ಮನಪೂರ್ವಕವಾಗಿ ನಿರ್ವಹಿಸಿದ ವಿಶೇಷ ವ್ಯಕ್ತಿತ್ವ ಇವರದ್ದು ಎಂದು ಕಾರ್ಯಕ್ರಮ ನಿರೂಪಿಸಿದರು.ಶ್ರೀ ಭುಜಬಲಿ ಹಾಗೂ ಶ್ರೀ ಲಕ್ಷ್ಮಿನಾರಾಯಣ ರಾವ್ ಕಾರ್ಯಕ್ರಮ ಸಂಘಟಿಸಿ,ಶ್ರೀ ಸುಬ್ರಹ್ಮಣ್ಯರಾವ್ ಧನ್ಯವಾದ ಸಮರ್ಪಿಸಿದರಲ್ಲದೆ ಸನ್ಮಾನಿತರು ಸೇರಿದ ತನ್ನ ಎಲ್ಲಾ ಅಭಿಮಾನಿಗಳಿಗೆ ಸಿಹಿಯಾದ ಬೋಜನ ಕೂಟ ಏರ್ಪಡಿಸಿದ್ದರು.

 
More News

ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿ ಮುಡಿಗೇರಿಸಿದ ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್ -2019 ಪ್ರಶಸ್ತಿ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿ ಮುಡಿಗೇರಿಸಿದ ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್ -2019 ಪ್ರಶಸ್ತಿ
ಪೆÇಲೀಸ್ ಆಯುಕ್ತ ಸಂಜಯ್ ಬಾರ್ವೆ ಅವರನ್ನು ಅಭಿನಂದಿಸಿದ  ಜಯ ಸಿ.ಸುವರ್ಣ
ಪೆÇಲೀಸ್ ಆಯುಕ್ತ ಸಂಜಯ್ ಬಾರ್ವೆ ಅವರನ್ನು ಅಭಿನಂದಿಸಿದ ಜಯ ಸಿ.ಸುವರ್ಣ
ಮಿಲಾಗ್ರಿಸ್ ಕನ್ನಡ ಪ್ರೌಡಶಾಲೆಯ ವಿದ್ಯಾರ್ಥಿ ಎನ್.ಎಮ್.ಎಮ್. ಎಸ್ ಆಯ್ಕೆ
ಮಿಲಾಗ್ರಿಸ್ ಕನ್ನಡ ಪ್ರೌಡಶಾಲೆಯ ವಿದ್ಯಾರ್ಥಿ ಎನ್.ಎಮ್.ಎಮ್. ಎಸ್ ಆಯ್ಕೆ

Comment Here