Wednesday 14th, May 2025
canara news

*ಕಿನ್ಯದಲ್ಲಿ SSF ವತಿಯಿಂದ ಜಸ್ಟೀಸ್ ಫಾರ್ ಆಸೀಪಾ........*

Published On : 17 Apr 2018   |  Reported By : Rons Bantwal


ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ನಿರ್ಧೇಶನ ಮೇರೆಗೆ ರಾಜ್ಯ ವ್ಯಾಪ್ತಿಯಲ್ಲಿರುವ ಎಸ್ಸೆಸ್ಸೆಫ್ ಶಾಖಾ ವ್ಯಾಪ್ತಿಯಲ್ಲಿ ಒಂದೆರಡು ದಿನಗಳ ಮುಂಚೆ ಜಮ್ಮುವಿನಲ್ಲಿ ಆಸೀಫಾ ಎಂಬ 8 ಹರೆಯದ ಮುಗ್ದ ಕಂಧಮ್ಮಳ ಮೇಲೆ ಕೋಮುವಾದಿ ನರ ರಾಕ್ಷಸರು ನಡೆಸಿದ ಅತ್ಯಾಚಾರ ಹಾಗೂ ಹತ್ಯೆಯ ಸಮಗ್ರ ತನಿಖೆ ಹಾಗೂ ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ಪ್ರತಿಬಟನೆ ಮೂಲಕ ಧ್ವನಿ ಓಗ್ಗೂಡಿಸುವ ಬಾಗವಾಗಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಖುತುಬಿನಗರ,ಬೆಳರಿಂಗೆ,ಕುರಿಯ,ಮೀಂಪ್ರಿ,ಉಕ್ಕುಡ,ಈ ಎಲ್ಲಾ ಶಾಖಾ ವ್ಯಾಪ್ತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರತಿಭಟನೆ ನಡೆಸಲಾಯಿತು

ಈ ಕಾರ್ಯಕ್ರಮದಲ್ಲಿ ಮೆಹಬೂಬ್ ಸಖಾಫಿ ಕಿನ್ಯ ಉಸ್ತಾದರು ನಡೆಸಿದ ಜಾಗೃತಿ ಭಾಷಣದಲ್ಲಿ ಈ ಭಾರತ ಎಂಬ ಜಾತ್ಯಾತೀತ ಧೇಶದಲ್ಲಿ ಹಿಂದೂ ಮುಸ್ಲಿಂ ಕೈಸ್ತ ಹಾಗೂ ಇನ್ನಿತರ ಧರ್ಮದ ಜನರು ಪರಸ್ಪರ ಜತೆ ಜತೆಯಾಗಿ ಬಾಳಿ ಬಧುಕಬೇಕಾಗಿದೆ ಅದೇ ರೀತಿ ಈ ಧೇಶದಲ್ಲಿ ಆಡಳಿತ ನಡೆಸುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ಈ ಧೇಶದಲ್ಲಿ ನಡೆಯುವ ಎಲ್ಲಾ ಧುಷ್ಕೃತ್ಯದ ಆರೋಪಿಗಳಿಗೆ ಯಾವೂದೇ ರೀತಿಯಾದ ಬೆಂಬಲ ನೀಡಬಾರದು ಹಾಗೂ ಆಸೀಫಾ ಎಂಬ ಪುಟಾನಿ ಸಹೋದರಿಯ ಮೇಲೆ ನರ ರಾಕ್ಷಸಕರು ನಡೆಸಿದ ಹೀನ ಕೃತ್ಯವನ್ನು ಎಲ್ಲಾ ಜಾತಿಯ ಜನರು ಒಟ್ಟುಗೂಡಿ ಪ್ರತಿಭಟಿಸಬೇಕು ಎಂದು ಎಲ್ಲಾ ಧರ್ಮದ ಜನರಿಗೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ K.H ಇಸ್ಮಾಯಿಲ್ ಸಹದಿ ಕಿನ್ಯ, V.Aಮೊಹಮ್ಮದ್ ಮುಸ್ಲಿಯಾರ್,ಮೊಹಮ್ಮದ್ ಮುಸ್ಲಿಯಾರ್ ಉಕ್ಕುಡ,ಶರೀಫ್ ಸಹದಿ,ಉಸ್ಮಾನ್ ಮುಸ್ಲಿಯಾರ್,ಇಲ್ಯಾಸ್ ಮದನಿ,ಮೊಹಮ್ಮದ್ ಉಳ್ಳಾಲ್, ಅಬೂಬಕ್ಕರ್ ಮೀನಾದಿ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ ಸದಸ್ಯರಾದ ಮೊಹಮ್ಮದ್ ಕುರಿಯ,ಫಾರೂಕ್ ಬೆಳರಿಂಗೆ,ಹಿರಿಯರಾದ ವಾಮನ ಪೂಜಾರಿ ಕಿನ್ಯ , ಹಾಗೂ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖಾ ನಾಯಕರು ಹಾಗೂ ಕಿನ್ಯ ಪ್ರದೇಶದ ಸಹೋದರರು ಬಾಗವಹಿಸಿದ್ದರು .




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here