Wednesday 14th, May 2025
canara news

ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ಬಂಟ್ಸ್ ಡೇ 2018-ವಾರ್ಷಿಕ ಸ್ನೇಹ ಸಂಭ್ರಮ

Published On : 18 Apr 2018   |  Reported By : Rons Bantwal


ಬಂಟ ಮನಸ್ಸುಗಳು ಪರಿಶುದ್ಧವಾಗಿರಲಿ: ವಿ.ವಿವೇಕ್ ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಎ.18: ಬಂಟರ ಸಂಘ ಮುಂಬಯಿ ಇಂದಿಲ್ಲಿ ಶನಿವಾರ ಸಂಜೆ ಕುರ್ಲಾದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಡೇ-2018 ಮತ್ತು ವಾರ್ಷಿಕ ಸ್ನೇಹಮಿಲನವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿತು.

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಪ್ರತಿಷ್ಠಿತ ಉದ್ಯಮಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಬೊಲ್ಯಗುತ್ತು ವಿವೇಕ್ ಶೆಟ್ಟಿ ಮತ್ತು ಗೌರವ ಅತಿಥಿüಗಳಾಗಿ ಯೂನಿಯನ್ ಬ್ಯಾಂಕ್‍ನ ಸಿಇಒ ರಾಜ್‍ಕಿರಣ್ ರೈ, ಬಾಲಿವುಡ್ ನಟಿ ರವೀನಾ ಟಂಡನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘವು ಕೊಡಮಾಡುವ ಡಾ| ಪಿ.ವಿ ಶೆಟ್ಟಿ ಪ್ರಾಯೋಜಕತ್ವದ `ರಮಾನಾಥ ಎಸ್. ಪಯ್ಯಡೆ ಸ್ಮಾರಕ' ವಾರ್ಷಿಕ ಶ್ರೇಷ್ಠ ಸಾಧಕ ಪುರುಷ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ (ಪತ್ನಿ ಚಂದ್ರಿಕಾ ಹರೀಶ್ ಒಳಗೊಂಡು) ಹಾಗೂ ಡಾ| ಮನೋಹರ್ ಹೆಗ್ಡೆ ಮತ್ತು ಆಶಾ ಮನೋಹರ್ ಹೆಗ್ಡೆ ಪ್ರಾಯೋಜಕತ್ವದ `ದಿ ಶೆಫಾಲಿ ಹೆಗ್ಡೆ ರೈ ಸ್ಮಾರಕ' ವಾರ್ಷಿಕ ಶ್ರೇಷ್ಠ ಸಾಧಕ ಮಹಿಳಾ ಪ್ರಶಸ್ತಿಯನ್ನು ಪ್ರಾಚಾರ್ಯಕಿ ಪೆÇ್ರ| ಶುಭಲಕ್ಷ್ಮೀ ಸುದರ್ಶನ್ ಹೆಗ್ಡೆ ಅವರಿಗೆ ಪ್ರಶಸ್ತಿ ಪ್ರಾಯೋಜಕರುಗಳು ಉಪಸ್ಥಿತರಿದ್ದು ಪುರಸ್ಕೃತರನ್ನು ಅಭಿನದಿಸಿದರು.

ವಿವೇಕ್ ಶೆಟ್ಟಿ ಮಾತನಾಡಿ ಇಂದಿನ ಸನ್ಮಾನಿತರಲ್ಲಿ ಇಬ್ಬರು ಮಹಿಳಾ ಸಾಧಕಿಯರನ್ನು ಸಂಘವು ಗುರುತಿಸುವುದು ಮಹಿಳೆಯರ ಬಗ್ಗೆ ಸಂಘಕ್ಕಿರುವ ಗೌರವ, ಅಭಿಮಾನ ಸೂಚಿಸುತ್ತದೆ. ಬಂಟ ಪುರುಷರು ಮಹಿಳೆಯರಿಗೆ ಸಂಘ, ಸೇವೆಯಲ್ಲಿ ಹಿಂದಿನಿಂದಲೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಇದೀಗ ನಾವು ನಮ್ಮ ಅಹಂ ತೊರೆದು ಹೊರಬರಬೇಕು. ಆಗ ಮಾತ್ರ ಬಂಟ ಮನಸ್ಸುಗಳು ಪರಿಶುದ್ಧವಾಗಲು ಸಾಧ್ಯ. ಬಂಟ ಮಹಾದಾನಿಗಳ ನೆರವು ಬೇರೆಲ್ಲೂ ಹೋಗದಂತೆ ಸಂಘವು ಜಾಗೃತವಾಗುವ ಅವಶ್ಯಕತೆ ಇದೆ. ಮುಂಬಯಿ ಎಂಬುದು ಬಂಟರ ಶಕ್ತಿ ಕೇಂದ್ರವಾಗಿದ್ದು, ಸಂಘವು ಮಹಾದಾನಿಗಳಿಂದ ಪ್ರಯೋಜನ ಪಡೆದು ಈ ಶಕ್ತಿಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಈ ಉತ್ಸವ, ಹಬ್ಬದಾಚರಣೆಯಲ್ಲಿ ಬಂಟರೊಂದಿಗೆ ಬೆರೆತು ಸಂಭ್ರಮವನ್ನಾಚರಿಸುವ ಅವಕಾಶ ನನಗೆ ಒದಗಿದ್ದು ನನ್ನ ಭಾಗ್ಯ. ಅದಕ್ಕಾಗಿ ನಾನು ಅಭಿನಂದಿಸುತ್ತೇನೆ. ಹಿಂದಿಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ಅನೇಕ ಬಂಟರು ಚಿತ್ರರಂಗಕ್ಕೆ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ. ತುಳು ಭಾಷೆ ಅತ್ಯಂತ ಸೊಗಸಾದ ಭಾಷೆ. ಬಂಟರು ತುಳು ನಾಡಿನಿಂದ ಮಹಾರಾಷ್ಟ್ರದ ಮುಂಬಯಿಗೆ ಬಂದು ತಮ್ಮ ಅಸ್ಮಿತೆಯಿಂದ ಬೆಳಗಿದ್ದಾರೆ ಎಂದರು. ಬಂಟ ಸಮಾಜದಲ್ಲಿ ಎಷ್ಟೋ ಪ್ರತಿಭೆಗಳಿವೆ ಎಂಬುದನ್ನು ಇಂದಿನ ಯಕ್ಷಗಾನ ಪ್ರದರ್ಶನದಿಂದ ಅರಿತುಕೊಂಡಿದ್ದೇನೆ ಎಂದು ನುಡಿದು ಬಂಟರಿಗೆ ಸದಾ ಯಶಸ್ಸು ಸಿಗಲೆಂದು ರವೀನಾ ಟಂಡನ್ ಹಾರೈಸಿದರು.

ಸುಮಾರು ಒಂಭತ್ತುದಶಕಗಳ ಸುದೀರ್ಘಾವಧಿಯ ಇತಿಹಾಸವುಳ್ಳ ಈ ಬಂಟರ ಸಂಘವು ಕಳೆದ 25 ವರ್ಷಗಳಲ್ಲಿ ಮಾಡಿದ ಸಾಧನೆ, ಪರಿವರ್ತನೆ ಅಮೋಘವಾದದು. ಬಂಟ ಸಮಾಜದಲ್ಲಿ ಆಥಿರ್sಕವಾಗಿ ಸಂಕಷ್ಟದಲ್ಲಿರುವ ಬಂಟ ಕುಟುಂಬಗಳಿಗೆ ಸಹಕಾರ ನೀಡುವಲ್ಲಿ ಬಂಟ ದಾನಿಗಳು ಇಂದು ಸಂಘದ ಮೂಲಕ ಮುಂದೆ ಬರುತ್ತಿದ್ದಾರೆ. ಸಂಘದ ಇಂತಹ ಸೇವೆಯ ಬಗ್ಗೆ ಬಂಟರಲ್ಲಿ ಹೆಚ್ಚಿನ ಅಭಿಮಾನ. ಬಂತರಾದ ನಾವು ಊರು ಬಿಟ್ಟು ಪರದೇಶ ಸೇರಿ ಪರಿಶ್ರಮ ಪಟ್ಟ ಕಾರಣದಿಂದಲೇ ಇಂದು ಎತ್ತರಕ್ಕೇರಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಾಗಿದೆ. ಬಂಟರಿಗೆ ಬಂಟರ ಸಮುದಾಯದ ಮೇಲಿನಪ್ರೀತಿ ಹೆಚ್ಚಾಗಬೇಕು. ಸ್ನೇಹ ಸೌಹಾರ್ದತೆ, ಅನ್ಯೋನ್ಯತೆಯಲ್ಲಿ ಇರಬೇಕು. ನಾವು ನಮ್ಮವರ ಸುಖ-ದುಖದಲ್ಲಿ ಪಾಲ್ಗೋಳ್ಳಬೇಕೆಂಬ ಉದ್ದೇಶ ಬಂಟರ ಸಂಘದ್ದಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪಯ್ಯಡೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿಎ| ಸದಾಶಿವ ಶೆಟ್ಟಿ ಮತ್ತು ಜಯಶ್ರೀ ಸದಾಶಿವ್, ಕಿಲ್ಪಾಡಿ ಭಂಡಸಾಲೆ ಶೇಖರ್ ಶೆಟ್ಟಿ ಮತ್ತು ಸುಜನಾ ಶೇಖರ್, ಡಾ| ಬಾಬುರಾಜ್ ಹೆಗ್ಡೆ ಮತ್ತು ಶುಭಾ ಬಾಬುರಾಜ್, ನ್ಯಾ| ದಯಾನಂದ್ ಕೆ.ಶೆಟ್ಟಿ ಮತ್ತು ಕಲಾ ದಯಾನಂದ್, ಕಿರಣ್ ಶೆಟ್ಟಿ ಮತ್ತು ನೀತಾ ಕಿರಣ್, ಅಶೋಕ್ ಪಕ್ಕಳ ಮತ್ತು ಹರಿಣಾಕ್ಷಿ ಪಕ್ಕಳ, ಮಮತಾ ಅಶ್ವಿನಿ ಶೆಟ್ಟಿ ದಂಪತಿಯರನ್ನು ಹಾಗೂ ಸಂಜೀವ ಎಂ.ಶೆಟ್ಟಿ ಕಾಂದಿವಿಲಿ, ಕ್ರೀಡಾಳು, ಬ್ಯಾಡ್ಮಿಂಟನ್ ಪ್ರತಿಭೆ ಚಿರಾಗ್ ಶೆಟ್ಟಿ (ಪರವಾಗಿ ಪಾಲಕರಿಗೆ) ಸನ್ಮಾನಿಸಿ ಶುಭಾರೈಸಿದರು.

ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಪ್ರದೀಪ್ ಶೆಟ್ಟಿ ಮತ್ತು ಅನುಶ್ರೀ ಶೆಟ್ಟಿ ಅತಿಥಿüಗಳನ್ನು, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಶೋಭಾ ಎಸ್.ಶೆಟ್ಟಿ ಪುರಸ್ಕೃತರನ್ನು ಹಾಗೂ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಿಎ| ರಮೇಶ್ ಎ.ಶೆಟ್ಟಿ, ಡಾ| ಪ್ರಭಾಕರ್ ಶೆಟ್ಟಿ, ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಜಯ ಎ.ಶೆಟ್ಟಿ, ಬಿ.ಆರ್ ಶೆಟ್ಟಿ, ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಚಿತ್ರಾ ಆರ್.ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿಜಯ್ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು ಶಿಬರೂರು ಸುರೇಶ್ ಎಲ್.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ ವಾರ್ಷಿಕ ವರದಿ ಭಿತ್ತರಿಸಿದರು. ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ ವಂದನಾರ್ಪಣೆಗೈದರು.

ಬಂಟರ ಸಂಘÀದ ಪದಾಧಿಕಾರಿಗಳು, ಉಪವಿಭಾಗ ಹಾಗೂ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಹಾಜರಿದ್ದು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ವೈಭವ ಪ್ರಸ್ತುತ ಪಡಿಸಿದರು. ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆ ಹಾಗೂ ಬಂಟರ ಸಂಘದ ಸಮಿತಿ ಸದಸ್ಯರು ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಭಾಗವತಿಕೆಯಲ್ಲಿ `ಬೀರೆ ದೇವು ಪೂಂಜೆ' ಯಕ್ಷಗಾನ ಪ್ರದರ್ಶಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here