Wednesday 14th, May 2025
canara news

ಜಮ್ಮು, ಯುಪಿಯಲ್ಲಿ ಅತ್ಯಾಚಾರ ಪ್ರಕರಣಕ್ಕೆ ಖಂಡನೆ: ಗಡಿಯಾರದಲ್ಲಿ ಪ್ರತಿಭಟನೆ

Published On : 19 Apr 2018   |  Reported By : Rons Bantwal


ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಬಂಟ್ವಾಳ ತಾಲೂಕಿನ ಗಡಿಯಾರದ ಇತಿಕಾಫ್ ಮೀಲಾದ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗಡಿಯಾರ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಿತ್ತಿಚಿತ್ರಗಳನ್ನ ಹಿಡಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಶಂಶೀರ್ ಬುಡೋಳಿ, ಈ ಎರಡು ಪ್ರಕರಣಗಳನ್ನ ವಿರೋಧಿಸಿ ಇವತ್ತು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜಾತಿ, ಧರ್ಮ ಮೀರಿ ಇವತ್ತು ನಡೆಯುತ್ತಿರುವ ಹೋರಾಟದ ಉದ್ದೇಶ ನ್ಯಾಯವೇ ಹೊರತು ಬಲಪ್ರದರ್ಶನವಲ್ಲ. ದೇಶದ ಜನರ ಒಗ್ಗಟ್ಟಿನ ಹೋರಾಟಕ್ಕೆ ನ್ಯಾಯ ಸಿಗಬೇಕು. ಕಾನೂನು ಬಲಗೊಳ್ಳಬೇಕು ಅಂದರು.

ಇದೇ ವೇಳೆ ಝೈನುಲ್ ಅಕ್ಬರ್, ಹಮೀದ್ ದಾರಿಮಿ ಸಂಪ್ಯ, ರಶೀದ್ ಸಖಾಫಿ ಗಡಿಯಾರ ಮಾತನಾಡಿದರು. ಪ್ರತಿಭಟನೆಯಲ್ಲಿ ಅಬ್ದುಲ್ ಮಜೀದ್ ದಾರಿಮಿ, ಸ್ವಾದೀಕ್ ಮುಹಿನಿ, ಸಿದ್ದೀಕ್ ಫೈಝಿ ಉಪಸ್ಥಿತರಿದ್ದರು. ಜೊತೆಗೆ ಇತಿಕಾಫ್ ಮೀಲಾದ್ ಕಮಿಟಿಯ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಗಡಿಯಾರ, ಅಬ್ದುಲ್ ಅಝೀಝ್ ಗಡಿಯಾರ, ಹೈದರ್ ವಿದ್ಯಾನಗರ, ಅಲ್ತಾಫ್ ವಿದ್ಯಾನಗರ, ನೌರೂಶ್ ವಿದ್ಯಾನಗರ, ನಿಝಾಂ, ಸಲ್ಮಾನ್ ಜೋಗಿಬೆಟ್ಟು ಸೇರಿ ಸ್ಥಳೀಯರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here