Friday 26th, April 2024
canara news

ಕ್ಷೇತ್ರದ ಶಾಸಕರ ದುರಂಹಾಕಾರದ ಮಾತಿಗೆ ಕೊನೆ ಹಾಡಬೇಕಾಗಿದೆ : ಅಶ್ರಫ್

Published On : 22 Apr 2018   |  Reported By : Rons Bantwal


ಉಳ್ಳಾಲ : ಉಳ್ಳಾಲದಲ್ಲಿ ಜನರ ಸಮಸ್ಯೆಗೆ ಪರಿಹಾರ ನೀಡದೆ ದುರಂಹಾಕಾರ ಮಾತುಗಳನ್ನಾಡುತ್ತಿರುವ ಇಲ್ಲಿನ ಶಾಸಕರ ಮಾತಿಗೆ ಕೊನೆ ಹಾಡಬೇಕಾಗಿದ್ದು, ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದಲ್ಲಿ ವಿಧಾನ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಯ ಬಗ್ಗೆ ದನಿ ಎತ್ತುವುದರೊಂದಿಗೆ ಇಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದ್ದೇನೆ ಎಂದು ಮಾಜಿ ಮೇಯರ್ ಹಾಗೀಊ ಮಂಗಳೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಅಶ್ರಫ್ ಅಭಿಪ್ರಾಯಪಟ್ಟರು.

ಅವರು ಮಾಸ್ತಿಕಟ್ಟೆಯಲ್ಲಿ ಜೆಡಿಎಸ್ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ನೂತನ ಕಾರ್ಯಕರ್ತರಿಗೆ ಪಕ್ಷದ ದ್ವಜ ನೀಡಿ ಮಾತನಾಡಿದರು.

ಉಳ್ಳಾಲದಲ್ಲಿ ಕಾಂಗ್ರಸ್ ಆಡಳಿತದಲ್ಲಿ ನಿರಪರಾ„ಗಳನ್ನು ಜೈಲಿನಲ್ಲಿಟ್ಟು ಅವರಿಗೆ ತೊಂದರೆ ನೀಡುವ ಕಾರ್ಯ ಆಗುತ್ತಿದೆ. ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳಾದ ಕಡಲ್ಕೊರೆತ, ಹಕ್ಕುಪತ್ರ ವಂಚಿತರು, ನಿಉದ್ಯೋಗ ಯುವಕರ ಬಗ್ಗೆ ಇಲ್ಲಿನ ಶಾಸಕರು ಗಮನ ಹರಿಸುತ್ತಿಲ್ಲ. ನಾನು ಕಾಂಗ್ರೆಸ್‍ನಲ್ಲಿ 30 ವರ್ಷಗಳ ಕಾಲ ಅ„ಕಾರ ಪಡೆದಿದ್ದೇನೆ ಆದರೆ ಜನರಿಗೆ ಸರಿಯಾಗಿ ನ್ಯಾಯ ಒದಗಿಸಲು ಈ ಪಕ್ಷದಿಂದ ಸಾಧ್ಯವಾಗಿಲ್ಲ ಈ ನಿಟ್ಟಿನಲ್ಲಿ ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದು, ಕ್ಷೇತ್ರದ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಉಳ್ಳಾಲದ ಜನರಲ್ಲಿ ಅಸಹನೆ, ಕ್ರೋಧ ಹೆಚ್ಚುತ್ತಿದ್ದರೂ, ಜನಪ್ರತಿನಿಧಿ ತನ್ನ ಬಲದಿಂದ ಹೆದರಿಸಿ ಅದನ್ನು ಮುಚ್ಚಿ ಹಾಕುತ್ತಿದ್ದಾರೆ. ಆದರೆ ಅವರೆಲ್ಲರೂ ಜತೆಗೂಡಿ ಸಮರ್ಥ ನಾಯಕನನ್ನು ಸೂಚಿಸುವ ಮೂಲಕ ಚುನಾವಣೆ ಅಖಾಡಕ್ಕೆ ಇಳಿದಿದ್ದು, ಭಿನ್ನತೆಯ, ಕ್ರೋಧವುಳ್ಳ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರಲ್ಲಿರುವ ಅಸಮಾಧಾನ, ಅಸಹನೆಯನ್ನು ಮತವಾಗಿ ಪರಿವರ್ತಿಸಲು ಮುಂದಾಗಿದ್ದೇವೆ. ಕ್ಷಯರೋಗ, ಮೆಡಿಕಲ್ ಕಿಟ್ ನಿಂದ ಪಡೆ ಕಮೀಷನ್ ಹಣದಲ್ಲಿ ಚುನಾವಣಾ ಖರ್ಚು ಮಾಡದೆ, ಜನರು ದುಡಿದ ಹಣವನ್ನು ಕೇಳಿಪಡೆದು ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದೇವೆ ಎಂದರು.

ಸಿದ್ದೀಖ್ ತ¯ಪಾಡಿ ಮಾತನಾಡಿ ಕ್ಷೇತ್ರದ ಸಮಸ್ಯೆಗಳಿಗೆ ಹೋರಾಟ ನಡೆಸಿದರೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಕೆಲಸವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಹಿರಿಯ ನಾಯಕರನ್ನು ಮೂಲೆಗುಂಪಾಗಿಸಿ ಬೆಳೆಯುವ ವ್ಯಕ್ತಿಗಳನ್ನು ಬದಿಗೆ ಸರಿಸಿ ಸರ್ವಾಧಿಕಾರದ ಆಡಳಿತ ನಡೆಸಲಾಗುತ್ತಿದೆ. ತಂದೆಯ ಬಳಿಕ ಮಗನ ಸಾಮ್ರಾಜ್ಯ, ಮುಂದೆ ಅವರ ಸಹೋದರ ಸಜ್ಜಾಗಿದ್ದು, ಉಳ್ಳಾಲದ ಕಾಂಗ್ರೆಸ್ ನಲ್ಲಿ ಒಂದೇ ಕುಟುಂಬದವರ ಪಾಲಾದಂತಿದೆ. ಅಲ್ಲದೆ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಇಲ್ಲದೇ ಇರುವುದು ಬೇಸರ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಝೀಝ್ ಮಲಾರ್ ಮಾತನಾಡಿ ಮದಕ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟನೆ ಉಪಯೋಗಕ್ಕೆ ಬಾರದೆ ಸರಕಾರದ ಹಣ ದುರುಪಯೋಗವಾಗಿದೆ. ಇಂದಿರಾ ಕ್ಯಾಂಟೀನಿನ ಕಾಮಗಾರಿಯಲ್ಲಿಯೂ ಮಿತಿಗಿಂತ ಅಧಿಕ 90 ಲಕ್ಷ ಅನುದಾನ ಪಡೆದು, ಕೇರಳ ಮೂಲದ ಸಂಬಂಧಿಕರಿಗೆ ಗುತ್ತಿಗೆಯನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಮಂಗಳೂರು ಕ್ಷೇತ್ರಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ಉಳಿದೊಟ್ಟು ವಹಿಸಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಝೀಜ್ ಮಲಾರ್,ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ರಾವ್, ಮುಖಂಡರಾದ ನಝೀರ್ ಉಳ್ಳಾಲ್, ಸಿದ್ಧಿಖ್ ತಲಪಾಡಿ, ಇಝಾಝ್ ಮಾರಿಪಳ್ಳ, ನಾಸಿರ್ ಮಂಗಳೂರು,ಪುತ್ತುಮೋನು ಉಳ್ಳಾಲ್, ಹಿದಾಯತ್ ಪರಂಗಿಪೇಟೆ, ಪಂಚಾಯತ್ ಸದಸ್ಯ ಎಚ್. ಸಾಲಿ ಹರೇಕಳ, ಸತ್ತಾರ್ ಸಜಿಪ ರಾಷ್ಟ್ರೀಯ ಉಪಾಧ್ಯಕ್ಷೆ ಶ್ರೀಮಣಿ ವಿದ್ಯಾರ್ಥಿ ನಾಯಕ ಸಿನಾನ್ ಪ್ರ, ಕಾರ್ಯದರ್ಶಿ ಬಾವಾಕಾ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಸುಮಾರು 50 ಕ್ಕೂ ಅಧಿಕ ಯುವಕರು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಫಯಾಝ್ ಕೋಟೆಪುರ ಇವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here