Wednesday 14th, May 2025
canara news

ಕುಂದಾಪುರ ಸಹಾಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊಗೆ ಬಿಳ್ಕೊಡುಗೆ

Published On : 29 Apr 2018   |  Reported By : Bernard Dcosta


ಫಾ|ಜೆರಾಲ್ಡ್, ಪ್ರವಚನದಲ್ಲಿ ಸಂಘಟಿತ್ವದಲ್ಲಿ ಚತುರರು,ಸೇವೆಯಲ್ಲಿ ಪ್ರಮಾಣಿಕರು-ಫಾ|ಅನಿಲ್

ಕುಂದಾಪುರ,: ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಎರಡು ವರ್ಷದಿಂದ ಸೇವೆಗೈಯುತ್ತಿರುವ ಸಹಾಯಕ ಧರ್ಮಗುರು ವಂ|ಸಂದೀಪ್ ಡಿಮೆಲ್ಲೊ ಇವರಿಗೆ ಕೊಳಲಗಿರಿ ಚರ್ಚಿಗೆ ವರ್ಗಾವಣೆಗೊಂಡ ಪ್ರಯುಕ್ತ ಅವರಿಗೆ ‘ಕುಂದಾಪುರ ದೇವ ಪ್ರಜೆಗಳಿಮ್ದ ಬಿಳ್ಕೊಡುಗೆ ಸಮಾರಂಭ ನೆಡೆಯಿತು.

ಪ್ರಧಾನ ಧರ್ಮಗುರು ’ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಸೀದಾ ಸಾಧ ವ್ಯಕ್ತಿ, ಪ್ರವಚನದಲ್ಲಿ ಚತುರರು, ಸಂಘಟಿತ್ವದಲ್ಲಿ ಚುರುಕು, ಅವರ ಧಾರ್ಮಿಕ ಸೇವೆ ಅತ್ಯಂತ್ತ ಪ್ರಮಾಣಿಕವಾದುದು, ಚರ್ಚ್ ಚಟುವಟಿಕೆಯಲ್ಲಿ ಅತ್ಯಂತ ಕಾಳಜಿ ವಹಿಸುತಿದ್ದರು, ಅವರನ್ನು ನಮಗೆ ಬಿಳ್ಕೊಡಲು ಮನಸ್ಸಿಲ್ಲಾ, ಆದರೆ ಇದೊಂದು ಪ್ರಕ್ರಿಯೆ, ಧರ್ಮಗುರುಗಳ ಸೇವೆ ಮತ್ತೊಂದು ಕಡೆ ಅಗತ್ಯ ಇರುತ್ತದೆ, ನಾವು ಬಿಶಪರು ಹೇಳಿದಂತೆ ಎಲ್ಲಾ ಕಡೆ ಸೇವೆ ನೀಡಲು ಸಿದ್ದವಾಗಿರ ಬೇಕು, ಹಾಗಾಗಿ ಬಿಳ್ಕೊಡುತ್ತೇವೆ’ ಎಂದು ಅವರು ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊರ ಬಗ್ಗೆ ಹೊಗಳಿ ಅವರಿಗೆ ಮುಂದಿನ ಧಾರ್ಮಿಕ ಜೀವನಕ್ಕೆ ಶುಭ ಕೋರಿದರು.

ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ತಮ್ಮ ಅನಿಸಿಕೆಯನ್ನು ವ್ಯಕ್ತ ಮಾಡಿ ‘ನಾನು ಇಲ್ಲಿ ಬರುವಾಗ ಇಲ್ಲಿನ ಜನ ಹೇಗಿರಬಹುದು, ನನ್ನನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕಾಳಜಿ ಇತ್ತು, ಆದರೆ ಇಲ್ಲಿ ಬಂದ ಮೇಲೆ ನನ್ನ ಬಗ್ಗೆ ಇಲ್ಲಿನ ಜನರು ಅಪಾರ ಕಾಳಜಿ ವಹಿಸಿದರು, ನನಗೆ ನನ್ನ ಧಾರ್ಮಿಕ Œಸೇವೆ ಗೈಯಲು ಫಾ|ಅನಿಲ್, ಫಾ| ಪ್ರವೀಣ್ ಮಾರ್ಟಿಸಿ ತುಂಬ ಸಹಕರಿಸಿದರು, ಮತ್ತು ನನಗೆ ಇಲ್ಲಿ ಒಳ್ಳೆಯ ಅನುಭವವನ್ನು ಪಡೆಯಲು ಸಾಧ್ಯವಾಯಿತು, ಎಂದು ಕ್ರತಜ್ನತೆ ಹೆಳುತ್ತಾ, ನನ್ನ ಧಾರ್ಮಿಕ ವ್ರತ್ತಿಯನ್ನು ಪ್ರಮಾಣಿಕವಾಗಿ ನೆಡೆಸಿಕೊಂಡು ಹೋಗಲು ನಿಮ್ಮ ಪ್ರಾರ್ಥನೆ ಅಗತ್ಯವೆಂದು’ ಎನ್ನುತ್ತಾ ಕ್ರತಜ್ನತೆ ಸಲ್ಲಿಸಿದರು.

ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ ಡಿಸೋಜಾ, ಫಾ|ಜೆರಾಲ್ಡ್‍ರ ಗುಣಗಾನ ಮಾಡಿ ಅವರಿಗೆ ಶುಭ ಹಾರೈಸಿದರು, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಸನ್ಮಾನ ಪತ್ರವನ್ನು ವಾಚಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಚರ್ಚ್ ಗಾಯನ ಮಂಡಳಿಯ ಪರವಾಗಿ ಪಾಸ್ಕಲ್ ಡಿಸೋಜಾ ಬೀಳ್ಕೋಡುಗೆ ಗೀತೆ ಹಾಡಿ ಗೌರವಿಸಿದರು. ವೇದಿಕೆಯಲ್ಲಿ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಫಾ|ಪ್ಯಾಟ್ರಿಕ್ ಪಾಯ್ಸ್, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಾಯ್ಲೆಟ್ ತಾವ್ರೊ ಉಪಸ್ಥಿತರಿದ್ದರು. ಕುಂದಾಪುರ ಚರ್ಚಿನ ಭಕ್ತರೆಲ್ಲರೂ ಅವರನ್ನು ಪುಸ್ಪ, ಹೂಗುಚ್ಚ ನೀಡಿ ಶುಭ ಕೋರಿದರು. ಎಲಿಜಾಬೆತ್ ಡಿಸೋಜಾ ಕಾರ್ಯನಿರ್ವನಿಸಿ ಧನ್ಯವಾದಗಳನ್ನು ಅರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here