Wednesday 14th, May 2025
canara news

ವಿ.ಪಿ.ಎಂ ಅಂತರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿ ದ್ವಿದಿನಗಳ ವಿಚಾರ ಸಂಕಿರಣ

Published On : 02 May 2018   |  Reported By : Rons Bantwal


ಮುಂಬಯಿ, ಮೇ.01: ವಿ.ಪಿ.ಎಂ ಅಧ್ಯಯನ ಅಂತರಾಷ್ಟ್ರೀಯ ಕೇಂದ್ರವು ಡಾ| ಪಿ.ಎಂ ಕಾಮತ್ ನಿರ್ದೇಶನದಲ್ಲಿ ಪ್ರತಿ ವರ್ಷವೂ ರಾಷ್ಟ್ರೀಯ-ಅಂತರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಹತ್ತು-ಹಲವಾರು ವಿಚಾರಗೋಷ್ಠಿ ಹಮ್ಮಿಕೊಂಡು ವಿಶ್ವದಲ್ಲಿಯ ರಾಷ್ಟ್ರ-ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ, ಜಟಿಲ ಸಮಸ್ಯೆಗಳು, ವಿದೇಶಾಂಗ ನೀತಿ, ರಾಜಕೀಯ, ಆರ್ಥಿಕ, ರಕ್ಷಣೆಯ, ಭಯೋತ್ಪಾದನೆಯ, ವ್ಯವಹಾರಿಕ ಇತ್ಯಾದಿ ವಿಷಯಗಳನ್ನು ಚರ್ಚೆ ಮಾಡುವ ವಿಶ್ವದ ಮುಕ್ತ ಮಹಾ ವೇದಿಕೆಯಾಗಿಸಿದ್ದು ಈ ಬಾರಿ ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಅಧ್ಯಕ್ಷತೆಯಲ್ಲಿ ಭಾರತ, ಚೀನಾ, ಇರಾನ್ ಜೊತೆ ಯು.ಎಸ್ ಸಂಬಂಧ ಈ ಮೇಲಿನ ವಿಷಯದ ಕುರಿತು ಎರಡು ದಿನಗಳ ಚರ್ಚಾಕೂಟ ಸಮಾರಂಭವನ್ನು ಆಯೋಜಿಸಿತ್ತು.

ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ಟ್ರಂಪ್ ಅಧ್ಯಕ್ಷತೆಯಲ್ಲಿ ಭಾರತ, ಚೀನಾ, ಇರಾನ್ ನಡುವಿನ ಸಂಬಂಧವು ರಾಜಕೀಯವಾಗಿ, ವ್ಯವಹಾರಿಕವಾಗಿ, ಆಥಿರ್üಕವಾಗಿ, ತಾಂತ್ರಿಕವಾಗಿ ಇತರ ವಿಷಯಗಳ ಕುರಿತು ವಿವಿಧ ವಿಶ್ವವಿದ್ಯಾಲಯಗಳ ಶ್ರೇಷ್ಠ ವಿದ್ವಾಂಸರ ಚಿಕ್ಕ ಬರವಣಿಗೆ ಸಾರಾಂಶದ ಮೇಲೆ ಚರ್ಚಾಗೋಷ್ಠಿ ನಡೆಸಲಾಯಿತು.

ಎ.ಆರ್ ಘನಾಶ್ಯಾಮ ಅಧ್ಯಕ್ಷತೆಯಲ್ಲಿ ಚರ್ಚಾಕೂಟದ ಸಮಾಗಮ ನಡೆಸಲ್ಪಟ್ಟಿತು. ಪೆÇ್ರ| ಚಿಂತಾಮಣೀ ಮಹಾಪಾತ್ರ ಚರ್ಚಾಗೋಷ್ಠಿ ಉದ್ಘಾಟಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ವಿ.ಪಿ.ಎಂ ಅಂತರ್‍ರಾಷ್ಟ್ರೀಯ ಅಧ್ಯಯನ ಕೇಂದ್ರದ ಅಧ್ಯಕ್ಷರೂ, ಪ್ರಧಾನ ನಿರ್ದೇಶಕÀ ಡಾ| ಪಿ.ಎಂ ಕಾಮತ್ ಚರ್ಚಾಗೋಷ್ಠಿ ನಡೆಸಿದರು.

ಭಾರತ ಅಮೇರಿಕ ಅಧ್ಯಕ್ಷ ಬುಷ್‍ರ ಅಧ್ಯಕ್ಷತೆಯ ಅವಧಿಯಲ್ಲಿ ಅಂತರರಾಷ್ಟ್ರೀಯ ಸಂಬಂಧ ಬೆಳೆಸಿತು ಎಂಬುದನ್ನು ಟ್ರಂಪ್ ಮಗಳಾದ ಇವಾಂಕಾ ಅಂತರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಕಾರ್ಯತಂತ್ರದ ನೀತಿಯನ್ನು ತಿಳಿಸಿಕೊಟ್ಟಳು. ಅಮೇರಿಕದಲ್ಲಿ ವಂಶಾಧಾರದ ಮೇಲೆ ಉದ್ಯೋಗ ಪ್ರಾಪ್ತವಾಗಬೇಕೆನ್ನುವ ಗೊಂದಲ ಸೃಷ್ಟಿಯಾದಾಗ 2017ರÀಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೆÉೀಟಿಕೊಟ್ಟರು. ಭಯೋತ್ಪಾದನೆಯ ನಿರ್ಮೂಲನೆಯಲ್ಲಿ ಎರಡು ದೇಶಗಳು ಒಂದಾದವು. ಆಥಿರ್üಕ, ರಾಜಕೀಯ, ಸೈನಿಕ ಮತ್ತು ರಕ್ಷಣಾತ್ಮಕ ವಿಷಯದಲ್ಲಿ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೆಯಿಯ ಅಧಿಕಾರದಲ್ಲಿ ಬೆಲೆದು ಬಂದಿದೆ. ಉದಯೋನ್ಮುಖ ಪ್ರವೃತ್ತಿಯ ನೀತಿ ದಕ್ಷಿಣ ಏಷಿಯಾದಲ್ಲಿ ಮೂಡಿ ಬಂದಿದೆ. ಚೀನಾ-ಉತ್ತರ ಕೋರಿಯಾ ಮತ್ತು ಹತ್ತಿರದ ಪೂರ್ವ ಏಷಿಯಾದ ವಿಷಯ ಬಂದಾಗ ಚೀನಾ ಜೊತೆಗಿನ ಸಂಬಂಧದಲ್ಲಿ ಟ್ರಂಪ್‍ನ ನೀತಿ-ತತ್ವಗಳು ಅನುಮಾನಾಸ್ಪದವಾಗಿವೆ. ಚೀನಾದ ನೀತಿಯಲ್ಲಿ ಆರ್ಥಿಕ ದೈತ್ಯತೆ ಒಂದು ಕಡೆಯಾದರೆ, ಮತ್ತೊಂದೆಡೆ ದಕ್ಷಿಣ ಕೋರಿಯಾದ ಪರಮಾಣು ತುದಿಯ ಆಸೆಯ ಸಮಾರಂಭದ ಪ್ರಬಲತೆಯಿಂದಲೋ ಬದಲಾವಣೆಯಾಗಿದೆ.ಜಪಾನ ಪ್ರಬಲವಾದರೆ ದಕ್ಷಿಣ ಕೋರಿಯಾ ಮುಂಚೂಣಿಯಲ್ಲಿದೆ ಎಂದು ಡಾ| ಕಾಮತ್ ಪ್ರಸ್ತಾವನೆಯಲ್ಲಿ ತಿಳಿಸಿದರು.
ವಾಸ್ತವಿಕವಾಗಿ ಟ್ರಂಪ್ ಏಷಿಯಾದ ರಾಷ್ಟ್ರಗಳಾದ ಜಪಾನ, ದಕ್ಷಣ ಕೋರಿಯಾ, ಚೀನಾ ದೇಶಗಳಿಗೆ ಪ್ರವಾಸ ಮಾಡಿ ಇಸ್ಲಾಮಿಕ್ ಭಯೋತ್ಪಾದನೆಯ ಹತ್ತಿಕ್ಕುವಿಕೆಯಲ್ಲಿ ಪಾಕಿಸ್ತಾನಿಗಳಾದ ಹಫೀಜ್ ಸಹಿದ್, ಮಸೂದ್ ಹಜಾರ್ ಹೆಸರನ್ನು ತೆಗೆದುಕೊಂಡರೆ ದಾಹೂದ್ ಇಬ್ರಾಮ್‍ನ ಹೆಸರನ್ನು ಬಿಟ್ಟಿದ್ದಾರೆ.ಅಮೇರಿಕದ ಅಧ್ಯಕ್ಷ ಟ್ರಂಪ್‍ನ ಆಡಳಿತವನ್ನು ವಿಮರ್ಶೆ ಮಾಡಿದಾಗ ಹಲವಾರು ಪ್ರಶ್ನೆಗಳು ಉದ್ಬವಿಸುತ್ತವೆ. ಅಮೇರಿಕದ ಅಧ್ಯಕ್ಷತೆಯ ಇತಿಹಾಸದಲ್ಲಿ ಸಮಕಾಲಿನ ಮತ್ತು ಅನಿರಿಕ್ಷಿತತೆಯ ಪ್ರಚಾರಗಳಿಂದ ಸ್ಪಷ್ಟವಾಗುತ್ತದೆ. ಅವರಿಂದ ಭಾರತ ಮತ್ತು ಭಾರತೀಯರಿಗೆ ಪ್ರತಿ ಫಲದ ಅನಿರಿಕ್ಷಿತತೆಯು ಕಾಡುತ್ತಿದೆ. ಟ್ರಂಪ್‍ನ ಗ್ರಹಿಕೆಗಳು, ಪ್ರತಿಕಾರಗಳು, ಅಪೇಕ್ಷೆಗಳು, ರಾಜತಾಂತ್ರಿಕತೆಯಿಂದ ಕೂಡಿವೆ. ವಿದೇಶಾಂಗ ನೀತಿಗಳು ವ್ಯವಹಾರಿಕವಾಗಿವೆ ಎನ್ನುವ ಗಮನಾರ್ಹವಾದ ಅಂಶಗಳನ್ನು ಕುರಿತು ವಿಸ್ತಾರವಾಗಿ ಎಂದೂ ಡಾ| ಕಾಮತ್ ಪ್ರಸ್ತಾಪಿಸಿದರು.

ಪೆÇ್ರ. ಕೆ.ಪಿ ವಿಜಯಲಕ್ಷ್ಮೀ ಪ್ರಧಾನ ವಿಷಯಮಂಡಿಸಿದರು. ಡಾ| ಆರ್.ಈ ಗಿಡದುಬ್ಲಿ ಧನ್ಯವದಿಸಿದರು.

ಟ್ರಂಪ್ ಆಡಳಿತದಲ್ಲಿ ಭಾರತ-ಅಮೇರಿಕ ಕಾರ್ಯತಂತ್ರ ನೀತಿಯ ನಿಶ್ಚಿತತೆ ವಿಷಯದ ಕುರಿತು ವಿವರವಾಗಿ ಡಾ| ಅರವಿಂದ ಕುಮಾರ ಹಾಗೂ ಟ್ರಂಪ್‍ನ ಅಧ್ಯಕ್ಷತೆಯಲ್ಲಿ ಭಾರತ-ಅಮೇರಿಕ ಅಂಬಂಧದ ಏರಿಳಿತಗಳು ವಿಷಯದಲ್ಲಿ ಡಾ| ಎಂ.ಜೆ ವಿನೋದ ಚರ್ಚಿಸಿದರು. ಚತುರ್ಭುಜ ಅರ್ಥವಂತಿಕೆಯಲ್ಲಿ ಭಾರತ ಮತ್ತು ಇಂಡೋ ಪಾಸಿಫಿಕ್ ಸಂಬಂಧ ಕುರಿತು ಡಾ| ಮೊನಿಶ್ ತೊರಂಗ್‍ಬಾಮ್ ವಿವರಿಸಿದರು.
ಪೆÇ್ರ. ಶ್ರೀರೂಪಾ ಶಹಾ ಅವರು ಭಾರತ-ಅಮೇರಿಕ ನಾಗರಿಕ ಪರಮಾಣು ಶಕ್ತಿಯ ಸಹಕಾರ ಟ್ರಂಪ್ ಅಧ್ಯಕ್ಷತೆಯಲ್ಲಿ ಎಂಬ ವಿಷಯವಾಗಿ ಮಾತನಾಡಿದರು. ಡಾ| ಆರ್.ಈ ಗಿಡದುಬ್ಲಿ ಅವರು ಮುಂದುವರಿದುಕೊಂಡು ಬಂದಿರುವ ಮತ್ತು ಬದಲಾಗುತ್ತಿರುವ ರಶಿಯಾ ಅಮೇರಿಕದ ಸಂಬಂಧಗಳು ವಿಷಯದ ವಿವರಣೆ ಮಾಡಿದರು. ಯುರೋಪಿಯನ್ ಸಂಘಟನೆಗೆ ಟ್ರಂಪ್ ಮತ್ತು ನ್ಯಾಟೋ ವರಮಾನ ಮತ್ತು ಅಳಿವು ಈ ವಿಷಯದ ಕುರಿತು ಡಾ| ಬಿ. ಕೃಷ್ಣಮೂರ್ತಿ ವಿವರಿಸಿದರು. ಟ್ರಂಪ್‍ನ ವ್ಯಾಪಾರ ನೀತಿಯ ಕಡೆಗೆ ಭಾರತ-ಚೀನಾ ಇದು ಜಗತ್ತಿನ ವ್ಯಾಪಾರ ನೀತಿಯ ಸಂಘಟನೆಗೆ ಅಪ್ರಸ್ತುತವೇ ಇದನ್ನು ಡಾ| ಪೌಲ್ ರೊಜಾರಿಯೋ ಮಂಡಿಸಿದರು. ಇರಾನಿನ ಜಟಿಲ ಸಮಸ್ಯೆಯು ಭಾರತ-ಅಮೇರಿಕ ಸಂಬಂಧದಲ್ಲಿ ಂದಾಗಿದೆಯೇ? ಅಂತಹ ಸನ್ನಿವೇಶ ಸ್ಪರ್ಧಿಸುತ್ತಿದೆಯೇ? ನಿರ್ಣಯ ವಿಷಯ ಸರಿ ಹೋಮದುತ್ತದೆಯೇ? ನಿರ್ಬಂಧಗಳ ಆಯ್ಕೆ? ಈ ವಿಷಯದ ಕುರಿತು ಪೆÇ್ರ. ದತ್ತೇಶ ಡಿ.ಪಾರುಲೆಕರ ಮಾತನಾಡಿದರು. ಭಾರತ ಚೀನಾ ಸಂಬಂಧ ಮತ್ತು ಭಾರತ-ಅಮೇರಿಕ ಸಂಬಂಧ ಇದೊಂದು ತ್ರಿಕೋನ ಕಾರ್ಯತಂತ್ರದ ನೀತಿಯನ್ನು ರೂಪಿಸುವುದಾಗಿದೆಯೇ? ಎಂಬುದನ್ನು ಡಾ| ಈಶಾನಿ ನಾಸ್ಕರ್ ಪ್ರಸ್ಥಾಪಿಸಿದರು.

ಅಪಘಾನಿಸ್ಥಾನ-ಪಾಕಿಸ್ಥಾನದಲ್ಲಿ ಅಧ್ಯಕ್ಷ ಟ್ರಂಪ್‍ನ ಅಮೇರಿಕ ನೀತಿಯು ಭಾರತದ ಮೇಲೆ ಪರಿಣಾಮ ಉಂಟು ಮಾಡುತ್ತದೆಯೇ? ಇದರ ಕುರಿತು ಪ್ರಥಮೇಶ ಕಾರ್ಲೆ ವಿವರಿಸಿದರು. ಟ್ರಂಪನನ್ನು ದಾರಿ ತಪ್ಪಿಸುವುದು ಅವರ ವ್ಯಕ್ತಿತ್ವ ಮತ್ತು ನೀತಿಗಳು? ಈ ವಿಷಯವನ್ನು ಡಾ| ಪಿ.ಎಂ ಕಾಮತ್‍ರು ಮಂಡಿಸಿದರು. ಟ್ರಂಪ್‍ನ ಯುಗ ಸಮತೋಲನ ಮತ್ತು ಗೆದೆತ್ತಿನ ಬಾಲ ಹಿಡಿಯುವವರು ಸಂಬಂಧ ಇಂಡೋ ಪಾಸಿಫಿಕ್ ? ಪೆÇ್ರ| ರಾಜೀವ್ ಗುಪ್ತೆ ಚರ್ಚಿಸಿದರು. ಟ್ರಂಪ್‍ನ ಅಧ್ಯಕ್ಷತೆಯ ನೀತಿಯ ಪರಿಣಾಮಗಳು ಭಾರತದ ಜೊತೆಗೆ ರಾಜಕೀಯ ಮತ್ತು ರಕ್ಷಣಾತ್ಮಕ ಉಲ್ಲೇಖನೀಯ ಕುರುಕ್ಷೇತ್ರ ಕುರಿತು ಡಾ|| ಅಮೃತ ದೇಶಮುಖ ಮತ್ತು ಡಾ| ಪ್ರಾಚಿ ಪಡಕೆ ನಿರೂಪಿಸಿದರು.
ಇಂಡೋ ಪೆಸಿಫಿಕ್ ಮತ್ತು ಭಾರತದ ಜವಾಬ್ದಾರಿ ಪ್ರತಿಕ್ರಿಯೆಯಲ್ಲಿ ಅಮೇರಿಕದ ಸಮತೋಲನ ತಂತ್ರ? ಈ ವಿಷಯದ ಕುರಿತು ಪೆÇ್ರ| ಬಿ. ಪಿಳ್ಳೈ ತಿಳಿಸಿದರು. ಟ್ರಂಪ್‍ನ ಅಮೇರಿಕದ ನೀತಿಯು ಚೀನಾಕ್ಕೆ ಒಲವು/ಕಡೆಗೆ ಭಾರತಕ್ಕೆ ಪರಿಣಾಮಗಳು? ಈ ವಿಷಯದ ಕುರಿತು ಡಾ| ರಾಜಕುಮಾರ ಕೋಠಾರಿ ವಿವರಿಸಿದರು. ಇಂಡೋ-ಅಮೇರಿಕ ಸಂಬಂಧದ ವಿಚಾರಣೆ ಡೊನಾಲ್ಡ್ ಟ್ರಂಪ್‍ನಿಂದ ಸಾಧ್ಯ ವಿಷಯವಾಗಿ ಡಾ| ಪ್ರತಿಪ್ ಚಟ್ಟೋಪಾಧ್ಯಾಯ ಮಾಡಿದರು. ಭಾರತ ಅಮೇರಿಕ ರಕ್ಷಣಾತ್ಮಕ ಸಂಬಂಧ ಟ್ರಂಪ್‍ನ ಅಧ್ಯಕ್ಷತೆಯಲ್ಲಿ ಖಚಿತವಾದ ಸುಸ್ಥಿರತೆ ಬಗ್ಗೆ ಬ್ರಿಗ್ ರಾಹುಲ್ ಬೊಸಲೇ ಚರ್ಚಿಸಿದರು.

ಟ್ರಂಪ್ ಅಧ್ಯಕ್ಷತೆಯಲ್ಲಿ ಭಾರತ, ಚೀನಾ ಪೂವರ್À ಹತ್ತಿರದ ಇರಾನ ಜೊತೆಗಿನ ಅಮೇರಿಕದ ಸಂಬಂಧಗಳು ವಿಷಯದ ಮೇಲೆ ನಿರ್ದೆಶಕ ಪಿ. ಎಸ್. ಗಂಗಾಧರ್ ಸುಧಿರ್ಘವಾದ ವಿಶೇಷ ಭಾಷಣಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here