Wednesday 14th, May 2025
canara news

ಕಲ್ವಾ ಪಶ್ಚಿಮದ ಪಂಡಿತ ಜಿ.ಜಿ ಜೋಶಿ ನಿವಾಸದಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮ

Published On : 02 May 2018   |  Reported By : Rons Bantwal


ಮುಂಬಯಿ ಕನ್ನಡಿಗರು ಕ್ರೀಯಾ ಶೀಲ ಸಾಹಿತ್ಯ ಪ್ರಿಯರು:ಬಿ.ಹೆಚ್ ಕಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.01: ಮುಂಬಯಿ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಆಪಾರ ಕೊಡುಗೆ ಇತ್ತಿದ್ದಾರೆ. ಮುಂಬಯಿಯಲ್ಲಿ ಕನ್ನಡತನದ ಅಸ್ಮಿತೆಯನ್ನು ಉಳಿಸಿಕೊಂಡು ಬರುವುದರಲ್ಲಿ ಮುಂಬಯಿಗಾರ ಪಾಲು ಹಿರಿದಾದುದು. ಮುಂಬಯಿ ಲೇಖಕರು ಜನಪರವಾದ ವಿಚಾರಧಾರೆಗಳನ್ನು ತಮ್ಮ ಕೃತಿಗಳ ಮೂಲಕ ಬಿಂಬಿಸಿದ್ದಾರೆ. ಬಹುಭಾಷೆಯ ಬಹು ಸಂಸ್ಕೃತಿಯ ನಗರ ಮುಂಬಯಿ. ಈ ಮಹಾನಗರವು ಬರಹಗಾರರಿಗೆ ಅಸಂಖ್ಯೆಯ ಪ್ರಮಾಣದಲ್ಲಿ ಸಾಹಿತ್ಯ ರಚನೆಗೆ ವಸ್ತುಗಳನ್ನು ಒದಗಿಸುತ್ತದೆ. ಸಾಹಿತಿಕ, ಸಾಂಸ್ಕೃತಿಕ ಚಟಿವಟಿಕೆಗಳು ಮುಂಬಯಿಯಲ್ಲಿ ಒಂದಲ್ಲ ಒಂದು ಕಾರಣದಿಂದ ಯುವ ಬರಹಗಾರರಿಗೆ ವೇದಿಕೆಯನ್ನು ನೀಡುತ್ತದೆ. ಡಾ| ಜಿ.ಡಿ ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಂಬಯಿಯಲ್ಲಿ ಕನ್ನಡದ ಪರಿಮಳವನ್ನು ಪಸರಿಸುವ ಕೆಲಸ ಸ್ತುತ್ಯರ್ಹ ಹಿರಿಯ ಲೇಖಕ ಬಿ.ಹೆಚ್ ಕಟ್ಟಿ ತಿಳಿಸಿದರು.

ಡಾ| ಜಿ.ಡಿ ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಕಳೆದ ರವಿವಾರ (ಎ.29) ಸಂಜೆ ಕಲ್ವಾ ಪಶ್ಚಿಮದಲ್ಲಿನ ಕಾಮಧೇನು ಕೋ.ಅಪರೇಟಿವ್ ಸೊಸೈಟಿಯ ಪಂಡಿತ ಜಿ.ಜಿ ಜೋಶಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಂಡಿತ ಜಿ.ಜಿ ಜೋಶಿ, ಶ್ರೀಮತಿ ಜೋಶಿ, ಮಲ್ಲಿನಾಥ ಜಲದೆ, ಹೆಚ್.ಆರ್ ಚಲವಾದಿ, ರಮೇಶ ಕೆ.ಪುತ್ರನ್, ಸಾ.ದಯಾ, ಡಾ| ಜಿ.ಪಿ ಕುಸುಮ, ಮಲ್ಲಿಕಾರ್ಜುನ ಬಡಿಗೇರ್, ದುರ್ಗಪ್ಪ ಯು. ಕೋಟಿಯವರ್ ಮತ್ತಿತರ ಸಾಹಿತ್ಯಭಿಮಾನಿಗಳು ಪಾಲ್ಗೊಂಡು ಕಥೆ, ಕಾವನ, ಲೇಖನ, ಪ್ರಬಂಧಗಳನ್ನು ವಾಚಿಸಿ ನಂತರ ಕನ್ನಡ ಸಾಹಿತ್ಯದ ಬಗ್ಗೆ ಚರ್ಚಸಿ ಜಿ.ಜಿ ಜೋಶಿ ದಂಪತಿಯನ್ನು ಸತ್ಕರಿಸಿದರು. ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here