Monday 7th, July 2025
canara news

ದ.ಕ. ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ಧತೆ: ಮತಗಟ್ಟೆಯೊಳಗೆ ಯಾರಿಗೆಲ್ಲಾ ಪ್ರವೇಶ?

Published On : 07 May 2018   |  Reported By : canaranews network


ಮಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಚುನಾವಣೆಗೆ ಸರ್ವ ಸಿದ್ಧತೆ ಮಾಡಿಕೊಂಡಿದೆ.ಜಿಲ್ಲೆಯಲ್ಲಿ ಮೇ 12 ರಂದು ಚುನಾವಣೆಗೆ ಮೊದಲು ಜಿಲ್ಲೆಯ ಎಲ್ಲಾ 1858 ಮತ ಗಟ್ಟೆಗಳಲ್ಲೂ ಅಣಕು ಮತದಾನ ಹಮ್ಮಿಕೊಳ್ಳಲಾಗಿದೆ.ಈ ಹಿನ್ನಲೆಯಲ್ಲಿ ಮತದಾನ ಪ್ರಾರಂಭವಾಗುವ ಮೊದಲು ಎಲ್ಲಾ ಪೋಲಿಂಗ್ ಏಜೆಂಟರು ಬೆಳಿಗ್ಗೆ 5.45 ಕ್ಕೆ ಸರಿಯಾಗಿ ಹಾಜರಿದ್ದು, ಮತದಾನ ಮುಕ್ತಾಯವಾಗುವವರೆಗೆ ಮತಗಟ್ಟೆಯಲ್ಲಿ ಉಪಸ್ಥಿತರಿರುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆವುಗಳಲ್ಲಿ ವೆಬ್ಕಾಸ್ಟಿಂಗ್ ಅಥವಾ ಸಿಪಿಎಂಎಫ್ ನಿಯೋಜನೆ ಅಥವಾ ವೀಡಿಯೋಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.ಚುನಾವಣೆಗಾಗಿ ಮೇ 11 ಮತ್ತು 12 ರಂದು ಅಭ್ಯರ್ಥಿ - 1, ಚುನಾವಣೆ ಏಜೆಂಟ್-1 ಮತ್ತು ಪಕ್ಷದ ಕಾರ್ಯಕರ್ತರಿಗೆ -1 ಒಟ್ಟು ಮೂರು ವಾಹನಗಳನ್ನು ಅನುಮತಿ ಪಡೆದು ಉಪಯೋಗಿಸುವಲ್ಲಿ ಅವಕಾಶವಿರುತ್ತದೆ. ಹಾಗೂ ಸದರಿ ವಾಹನದಲ್ಲಿ ವಾಹನ ಚಾಲಕ ಸೇರಿ ಒಟ್ಟು 5 ಮಂದಿ ಪ್ರಯಾಣಿಸಬಹುದಾಗಿದೆ.

ಮತಗಟ್ಟೆಯೊಳಗೆ ಯಾರಿಗೆ ಪ್ರವೇಶವಿದೆ?
1 ಮತದಾರ / ಮತದಾರರ ಕೈಗೂಸು
2 ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ
3 ಮತಗಟ್ಟೆ ಸಿಬ್ಬಂದಿ
4 ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು
5 ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ / ಅವರ ಚುನಾವಣಾ ಏಜೆಂಟ್
6 ಮತದಾರನಿಗೆ Z+ ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬ್ಬಂದಿ

ಮೇಲ್ಕಾಣಿಸಿರುವವರಿಗಲ್ಲದೆ ಇತರರಿಗೆ ಮತಗಟ್ಟೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.ಚುನಾವಣೆ ನಡೆಸುವ ಬಗ್ಗೆ ಅಳವಡಿಸಲಾದ ಪ್ರತಿಯೊಂದು ಮತಗಟ್ಟೆಯಲ್ಲಿ ವರ್ಣಮಾಲೆ ಆಧಾರಿತ ಮತದಾರರ ಪಟ್ಟಿಯ ಸಹಾಯದಿಂದ ಬೂತುಮಟ್ಟದ ಅಧಿಕಾರಿಯವರು ಮತದಾರರ ಹೆಸರು ನೋಂದಣಿಯಾಗಿರುವ ಮತದಾರರ ಪಟ್ಟಿಯ ಭಾಗ ಸಂಖ್ಯೆ ಮತ್ತು ಕ್ರಮಸಂಖ್ಯೆಯನ್ನು ಮತದಾರರಿಗೆ ತಿಳಿಸಲು ಸೌಲಭ್ಯ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here