Wednesday 14th, May 2025
canara news

ರವಿ ಶೆಟ್ಟಿಗೆ ಬಂಟ್ಸ್ ಕತಾರ್ ಸನ್ಮಾನ-ಅಬ್ದುಲ್ಲಾ ಮೋನು ಅವರಿಗೆ ಸೇವಾ ಸಂಪದ ಪ್ರಶಸ್ತಿ

Published On : 18 May 2018


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ,ಮೇ.18: ಕೊಲ್ಲಿ ರಾಷ್ಟ್ರ ಕತಾರ್ ಅಲ್ಲಿನ ಬಂಟ್ಸ್ ಕತಾರ್ ಸಂಸ್ಥೆಯ ಪಂಚಮ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿದ್ದು ಈ ಸಂದರ್ಭದಲ್ಲಿ ಕತಾರ್‍ನ ಪ್ರತಿಪ್ಠಿತ ಎಟಿಎಸ್ ಸಮೂಹದ ಆಡಳಿತ ನಿರ್ದೇಶಕ ಮೂಡಂಬೈಲು ರವಿ ಶೆಟ್ಟಿ ಹಾಗೂ ಜ್ಯೋತಿ ರವಿ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಕತಾರ್ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲಾ ಮೋನು ಅವರಿಗೆ ಪ್ರತಿಷ್ಠಿತ ಬಂಟ್ಸ್ ಕತಾರ್‍ನ ಪ್ರಕಾಶ್ ಚಂದ್ರ ಅಜಿಲ ಸ್ಮರಣಾರ್ಥ ಸೇವಾ ಸಂಪದ ಪ್ರಶಸ್ತಿ 2018 ನೀಡಿ ಗೌರವಿಸಲಾಯಿತು.

ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕತಾರ್‍ನಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ ಖ್ಯಾತ ಉದ್ಯಮಿ, ಕಲಾ ಪೋಷಕ, ಕ್ರೀಡಾ ಪೆÇೀಷಕ, ಸಾಮಾಜಿಕ ಸೇವಾ ಚಟುವಟಿಕೆಗಳ ಮುಂಚೂಣಿಯ ಯುವ ಧುರೀಣ ರವಿ ಶೆಟ್ಟಿ ಅವರು ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್ ಕತಾರ್ ಮೊದಲಾದ ಸಂಘಟನೆಗಳ ಮುಂಚೂಣಿ ನಾಯಕರಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಕಾರ್ಯಕ್ರಮದ ವಿಶೇಷ ಅತಿಥಿü ಡಾ| ಶಶಿಕಲಾ ಶೆಟ್ಟಿ ಗುರುಪುರ (ನಿರ್ದೇಶಕಿ, ಸಿಂಬೋಸಿಸ್ ಸ್ಕೂಲ್ ಆಫ್ ಲಾ, ಪುಣೆ) ಅಭಿನಂದಿಸಿದರು ಅತಿಥಿü ಸತ್ಕಾರ, ಕಲಾವಿದರಿಗೆ ಪೆÇ್ರೀತ್ಸಾಹ, ನಿರಂತರ ಚಟುವಟಿಕೆಗಳ ಮಧ್ಯೆ ಯಶಸ್ವೀ ಉದ್ಯಮಿಯಾಗಿ ನೂರಾರು ತುಳುವರಿಗೆ ಉದ್ಯೋಗದಾತರಾಗಿರುವ ರವಿ ಶೆಟ್ಟಿ ದಂಪತಿಗಳ ಸಾಧನೆಯನ್ನು ಖ್ಯಾತ ಭಾಗವತ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ಮರಿಸಿ ಹಾರೈಸಿದರು.

ದೊಹ ಕತಾರ್‍ನ ಇಂಡಿಯನ್ ಕಲ್ಚರಲ್ ಸೆಂಟರ್‍ನ ಅಧ್ಯಕ್ಷೆ ಮಿಲನ್ ಅರುಣ್, ಹವ್ಯಾಸಿ ಯಕ್ಷಗಾನ ಕಲಾವಿದ ಕದ್ರಿ ನವನೀತ ಶಟ್ಟಿ, ಯಂ. ಪಲಾಂಜಿ ಸಂಸ್ಥೆಯ ಪ್ರಧಾನ ಪ್ರಬಂಧಕ ಜೆಪ್ಪು ಚಿದಾನಂದ ನಾಯ್ಕ, ಕತಾರ್ ಡಿಸೈನ್ ಕನ್ಸ್‍ಸೋರ್ಟಿಯಂ ಸಂಸ್ಥೆಯ ಬಿ.ಆರ್ ಸತೀಶ್ ಮುಖ್ಯ ಅತಿಥಿüಗಳಾಗಿ ಪಾಲ್ಗೊಂಡಿದ್ದರು.

ಬಂಟ್ಸ್ ಕತಾರ್‍ನ ಅಧ್ಯಕ್ಷ ನವನೀತ ಶೆಟ್ಟಿ ಸ್ವಾಗತಿಸಿದರು. ರಾಮ್ ಮೋಹನ್ ರೈ ಅಭಿನಂದನಾ ಭಾಷಣ ಮಾಡಿದರು. ಅಮತಿ ಅಕ್ಷಿಣಿ ಶೆಟ್ಟಿ ಮತ್ತು ನವೀನ್ ಶೆಟ್ಟಿ ಇರುವೈಲು ಕಾರ್ಯಕ್ರಮ ನಿರೂಪಿಸಿದರು.

ಸಮುದಾಯದ ಸದಸ್ಯರಿಂದ ಭಾರತೀಯ ಹಬ್ಬಗಳ ವೈಶಿಷ್ಟ್ಯವನ್ನು ವಿವಿಧ ನೃತ್ಯಗಳಿಂದ ಅನಾವರಣ ಗೊಳಿಸಲಾಯಿತು. ಪಟ್ಲ ಸತೀಶ್ ಶೆಟ್ಟಿ ನಿರ್ದೇಶನದಲ್ಲಿ ಖ್ಯಾತ ಕಲಾವಿದರಿಂದ `ಚಂದ್ರಹಾಸ ಚರಿತ್ರೆ' ಯಕ್ಷಗಾನ ಪ್ರದರ್ಶಿಸಿತು.

ಉಪಾಧ್ಯಕ್ಷ ರಾಮಚಂದ್ರ ಶೆಟ್ಟಿ ಪೇಜಾವರ ಪ್ರಧಾನ ಕಾರ್ಯದರ್ಶಿ ರೋಶನ್ ಶೆಟ್ಟಿ , ಕೋಶಾಧಿಕಾರಿ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯದರ್ಶಿ ಚೈತಾಲಿ ಉದಯ ಶೆಟ್ಟಿ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here