Tuesday 23rd, April 2024
canara news

ಕೆ.ಆರ್ ಪೇಟೆ ಶಾಸಕರಾಗಿ ದ್ವಿತೀಯ ಬಾರಿ ಆಯ್ಕೆಯಾದ ಡಾ| ನಾರಾಯಣ ಗೌಡರಿಗೆ ಒಲಿಯಲಿದೆಯೇ ಸಚಿವ ಸ್ಥಾನ..?

Published On : 21 May 2018   |  Reported By : Rons Bantwal


(ಚಿತ್ರ / ವರದಿ :ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.21: ಕರ್ನಾಟಕ ರಾಜ್ಯ ಅಸೆಂಬ್ಲಿ ಚುನಾವಣೆ-2018ರಲ್ಲಿ ಅಧಿಕ ಸಂಖ್ಯೆಯ ಶಾಸಕ ಬಲವಿದ್ದೂ ಇಂದಿಲ್ಲಿ ಸರಕಾರ ರಚಿಸುವಲ್ಲಿ ವಿಫಲವಾದ ಭಾರತೀಯ ಜನತಾ ಪಕ್ಷದ ಸೋಲಿನಿಂದ ತೆರವಾದ ಸ್ಥಾನದಿಂದ ಜನತಾ ದಳ ಜಾತ್ಯಾತೀತ (ಜೆಡಿಎಸ್) ಪಕ್ಷ ಮತ್ತು ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷಗಳ ಸಮ್ಮಿಶ್ರ ಸರಕಾರ ಶೀಘ್ರವೇ ರಚನೆಯಾಗಲಿದೆ.

ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಖಚಿತ. ಅಂತೆಯೇ ಕೃಷ್ಣರಾಜಪೇಟೆ (ಕೆ.ಆರ್ ಪೇಟೆ) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯಥಿರ್üಯಾಗಿ ದ್ವಿತೀಯ ಬಾರಿ ಆಯ್ಕೆಯಾದ ಮುಂಬಯಿ ಮಹಾನಗರದಲ್ಲಿನ ಹಿರಿಯ ಉದ್ಯಮಿ, ಸಮಾಜ ಸೇವಕ, ಏಕೈಕ ಕನ್ನಡಿಗನಾಗಿ ಕರ್ನಾಟಕದ ವಿಧಾನ ಸಭೆಯಲ್ಲಿ ಮುಂಬಯಿ ಕನ್ನಡಿಗರ ಧ್ವನಿಯಾಗಿರುವ ಡಾ| ನಾರಾಯಣ ಆರ್.ಗೌಡ ಶಾಸಕರಾಗಿ ಆಯ್ಕೆಯಾಗಿದ್ದು ಅವರಿಗೆ ನೂತನ ಸಂಪುಟದಲ್ಲಿ ಮಂತ್ರಿಸ್ಥಾನ ಪ್ರಾಪ್ತಿಯಾಗಲಿದೆ ಎನ್ನಲಾಗಿದೆ.

ಇಂದಿಲ್ಲಿ ನಡೆದ ವಿಧಾನಸಭೆಯ ಕಲಾಪದ ಬೆಳವಣಿಗೆಯ ಮುಂಬಯಿ ಪತ್ರಕರ್ತರೋರ್ವರು ಬಳಿಕ ರಾಷ್ಟ್ರದ ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ರಾಷ್ಟ್ರೀಯಾಧ್ಯಕ್ಷ, ಹೆಚ್.ಡಿ ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ನಿಕಟವರ್ತಿ ಆಗಿರುವ ನಾರಾಯಣ ಗೌಡ ಅವರನ್ನು ಸಂಪರ್ಕಿಸಿದ್ದು ಗೌಡ್ರು ಮಾತನಾಡುತ್ತಾ ಕ್ಷೇತ್ರದ ಜನತೆಯ ಅಪಾರ ಶ್ರಮ ಮತ್ತು ತ್ಯಾಗದಿಂದ ನನ್ನ ಎಂಎಲ್‍ಎ ಗೆಲುವು ಸಾಧ್ಯವಾದಂತೆಯೇ ಕ್ಷೇತ್ರದಲ್ಲಿನ ಮುಂಬಯಿವಾಸಿ ಮತದಾರರ ಸಹಯೋಗ, ಹಿತೈಷಿಗಳ ಸಹಕಾರದಿಂದ ದ್ವಿತೀಯ ಬಾರಿ ಶಾಸಕನಾಗಿ ಆಯ್ಕೆ ಆಗಿರುವೆ. ನನಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಜೆಡಿಎಸ್ ಪಕ್ಷದ ಹಿರಿಕಿರಿಯ ಧುರೀಣರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪಕ್ಷವು ಹೆಚ್ಚುವರಿ ಸೇವಾವಕಾಶ ಒದಗಿಸಿ ಸಂಪುಟ ಮಂಡಲದಲ್ಲಿ ಸಚಿವ ಸ್ಥಾನ ನೀಡುವಂತಿದ್ದರೆ ಪಕ್ಷದ ಯಾವುದೇ ತೀರ್ಮಾನಕ್ಕೆ ಬದ್ಧನಾಗಿರುವೆ. ನನ್ನ ಕ್ಷೇತ್ರದಲ್ಲಿ ಇದೀಗಲೇ ಸದಾ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ವಿಧಾನ ಸಭೆಯ ಒಳಗೂ ಮತ್ತು ಹೊರಗೂ ಧ್ವನಿ ಎತ್ತಿ ಕಾರ್ಯತತ್ಪರನಾಗಿದ್ದೇನೆ. ನಾಲ್ಕುವರೆ ವರ್ಷಗಳಲ್ಲಿ ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಜನಪರ ಯೋಜನೆಗಳಿಂದ ಸಂತೃಪ್ತನಾಗಿರುವೆ. ಮುಂದಿನ ದಿನಗಳಲ್ಲಿ ಜನತೆ ನನ್ನಲ್ಲಿರಿಸಿದ ವಿಶ್ವಾಸವನ್ನು ಪರಿಪೂರ್ಣಗೊಳಿಸುವೆ ಎಂದೂ ಡಾ| ನಾರಾಯಣ ಗೌಡ ತಿಳಿಸಿದ್ದಾರೆ.

ನಗರದ ಪೆÇವಾಯಿ ವಾಸಿ ನಾರಾಯಣ ಗೌಡರು ಸಚಿವನಾಗಿ ನೇಮಕ ಗೊಂಡರೆ ನಾರಾಯಾಣ ಗೌಡರ ಪ್ರತಿನಿಧಿತ್ವ ಮಹಾರಾಷ್ಟ್ರ, ವಿಶೇಷವಾಗಿ ಮುಂಬಯಿನ ಕನ್ನಡಿಗರಿಗೆ ವರದಾನವಾಗಲಿದೆ ಎನ್ನುವ ಅಭಿಮತ ಅವರ ನಿಕಟವರ್ತಿಗಳು ವ್ಯಕ್ತ ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಮೂಲದ ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿ, ಅದೇ ಸಂಘದ ಪ್ರಾಯೋಜಕತ್ವದ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಅನೇಕ ವರ್ಷಗಳ ಅವಿರತ ಸೇವೆಗೈದು, ಮಹಾನಗರದಲ್ಲಿನ ನೂರಾರು ತುಳು-ಕನ್ನಡಿಗ ಸಂಘಟನೆಗಳ ಹಿತೈಷಿ, ದಾನಿಯಾಗಿ ಜನಮಾನಸದಲ್ಲಿ ಜನಾನುರಾಗಿರುವ ನಾರಾಯಣ ಗೌಡರ ಸಚಿವ ಸ್ಥಾನದ ಕನಸು ನನಸಾಗಲಿ ಎಂದು ಮುಂಬಯಿಯಲ್ಲಿನ ತುಳು-ಕನ್ನಡಿ ಸಂಘ-ಸಂಸ್ಥೆಗಳು ಶುಭ ಹಾರೈಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here