Saturday 20th, April 2024
canara news

ಬಡಕುಟುಂಬದ ಪ್ರತಿಭಾನ್ವಿತೆ ಸನಾ ಕೌಸರ್‍ಗೆ ಸಿಎ ಆಗಬೇಕೆನ್ನುವ ಕನಸು.!

Published On : 24 May 2018   |  Reported By : Rons Bantwal


ಮುಂಬಯಿ, ಮೇ.24: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 608 ಅಂಕಗಳೊಂದಿಗೆ ಶೇ.97.28 ಅಂಕಗಳೊಂದಿಗೆ ಸರ್ವೋತ್ಕೃಷ್ಟವಾಗಿ ಫಲಿತಾಂಶ ಗಳಿಸಿದ ಉಡುಪಿ ಜಿಲ್ಲೆಯ ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾಥಿರ್üನಿ ಸನಾ ಕೌಸರ್. ಯಾವುದೇ ಕೋಚಿಂಗ್ ಸೌಲಭ್ಯಗಳಿಲ್ಲದೆ ತರಗತಿಯಲ್ಲಿ ಕಲಿಸಿದ ಪಾಠಗಳನ್ನೇ ವರವಾಗಿಸಿ ಶಿಕ್ಷಕರ ಮಾರ್ಗದರ್ಶನದಲ್ಲಿ ಹಗಳಿರುಳು ಅಭ್ಯಾಸ ಮಾಡಿ ಶಾಲೆಯ ಶಿಕ್ಷಕರಿಂದಲೇ ಹೆಚ್ಚಿನ ತರಬೇತಿ ಪಡೆದು ಶಾಲೆಯ ಚರಿತ್ರೆಯಲ್ಲಿ ಪ್ರಥಮವಾಗಿ ಅತ್ಯಧಿಕ ಅಂಕ ದಾಖಲಿಸಿದ ವಿದ್ಯಾಥಿರ್üನಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.

ಗ್ರಾಮೀಣ ಪ್ರದೇಶದ ತೀರಾ ಬಡಕುಟುಂಬದಲ್ಲಿ ಹುಟ್ಟಿ ಬೆಳೆದು ಶಾಲೆಯ ಆಡಳಿತ ಮಂಡಳಿ ಸದಸ್ಯರ ಪ್ರಾಯೋಜಕತ್ವದಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ಕಷ್ಟಪಟ್ಟು ಕಲಿತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳಲ್ಲದೆ ಪರಿಸರದಲ್ಲೂ ಮನೆಮಾತಾಗಿದ್ದಾಳೆ.

ತೀರಾ ಬಡಕುಟುಂಬ:
ಅರಸೀಕೆರೆ ಮೂಲತಃ ಸದ್ಯ ಶಿರ್ವ ಮಸೀದಿ ಬಳಿಯ ನಿವಾಸಿ ಕೂಲಿ ಕಾರ್ಮಿಕ ಸಾಬ್‍ಜಾನ್ ಮತ್ತು ಮನೆಕೆಲಸ ನಿರ್ವಾಹಣೆಯ ಜುಬೇದಾ ದಂಪತಿಯ ಎರಡು ಮಕ್ಕಳಲ್ಲಿ ಕಿರಿಯವಳು ಸನಾ ಕೌಸರ್. ಸಹೋದರ ಮಹಮ್ಮದ್ ಪರ್ವೇಜ್ ಕೂಡಾ ಪ್ರತಿಭಾವಂತ ವಿದ್ಯಾಥಿರ್ü ಆಗಿದ್ದು ಇದೇ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ಪಾಸಾಗಿ ಪ್ರಸ್ತುತ ಶಿರ್ವ ಸಂತ ಮೇರಿ ಕಾಲೇಜ್‍ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾನೆ. ತಂದೆ 2ನೇ ತರಗತಿ ಕಲಿತಿದ್ದರೆ ತಾಯಿ 4ನೇ ತರಗತಿ ಪಾಸ್ ಮಾಡಿದ್ದಾರೆ. ತಾವು ಕಲಿಯದಿದ್ದರೂ ಬಡತನದ ನಡುವೆಯೂ ಮಕ್ಕಳು ಉನ್ನತ ಶಿಕ್ಷಣ ಗಳಿಸಬೇಕು ಎಂಬುವುದೇ ಹೆತ್ತವರ ಹೆಬ್ಬಯಕೆ.

ತಂದೆ ಸಾಬ್‍ಜಾನ್ ಆರೋಗ್ಯವೂ ಚೆನ್ನಾಗಿಲ್ಲ. ಕೂಲಿ ಕರ್ಮಿಕನಾಗಿಯೂ ಕೆಲಸವಿರದ ದಿನ ಒಪೆÇ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದ್ದು ಆಥಿರ್üಕ ಅಡಚಣೆ ನಡುವೆಯೂ ಸನಾ ಕೌಸರ್ ಸಿಎ ಕಲಿತು ಒಳ್ಳೆಯ ಉದ್ಯೋಗ ಮಾಡಬೇಕೆಂಬ ಕನಸು ಕಾಣುತ್ತಿದ್ದಾಳೆ. ಸಹೃದಯಿ ಶಿಕ್ಷಣಪ್ರೇಮಿ ಬಂಧುಗಳು ಈಕೆಯ ಕನಸಿಗೆ ಧನಾತ್ಮಕವಾಗಿ ಸ್ಪಂದಿಸಬಹುದು. ಈಕೆಯ ಮೊಬೈಲ್ ಸಂಖ್ಯೆ-8105249544.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here