Wednesday 14th, May 2025
canara news

ಸಿನಿಮಾ ರಂಗದಲ್ಲಿ ಕರಾವಳಿಯ ಪ್ರತಿಭೆ ಚಾಂದಿನಿ ಅಂಚನ್

Published On : 27 May 2018   |  Reported By : Rons Bantwal


ತುಳು ಭಾಷೆಯ ಆಲ್ಬಂ ಮೂಲಕ ಬಣ್ಣದ ಬದುಕಿಗೆ ಬಂದಿರುವ ಸುಪ್ರಿಯಾ ಅಂಚನ್ ಯಾನೆ ಚಾಂದಿನಿ ಅಂಚನ್ ತೆಲುಗು-ಕನ್ನಡ ಸಿನಿಮಾದಲ್ಲೂ ಸೈ ಅನಿಸಿಕೊಂಡಿದ್ದಾರೆ. ಕುಡ್ಲದ ಈ ಬಹುಭಾಷಾ ನಟಿ ತಮ್ಮ ಸಿನಿ ಜರ್ನಿ ಕುರಿತು ತುಂಬಾ ಆತ್ಮ ವಿÀಶ್ವಾಸದಲ್ಲಿದ್ದಾರೆ. ಮಂಗಳೂರು ನನ್ನೂರು. ತುಳು ನನ್ನ ಮಾತೃಭಾಷೆ ನನ್ನೂರಿನ ಚಿತ್ರದಲ್ಲಿ ನಟಿಸುವುದೆಂದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಅನ್ಯ ಭಾಷೆಯ ಚಿತ್ರದಲ್ಲಿ ಎಷ್ಟೇ ಬಿಝಿಯಾಗಿದ್ದರೂ, ನನ್ನೂರಿನ ಆಹ್ವಾನ ಬಂದಾಗ ನಟಿಸಲು ಯಾವತ್ತೂ ನಾನು ರೆಡಿ ಎಂದಿದ್ದಾರೆ.


ರ್ಯಾಂಪ್‍ನಿಂದ ಸಿನಿಮಾ:

ನಾನು ಓದಿದ್ದು ಮಂಗಳೂರಿನ ಸೇಂಟ್ ಆ್ಯನ್ಸ್‍ನಲ್ಲಿ ಬಳಿಕ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಮುಗಿಸಿದೆ. ಕಾಲೇಜು ಲೈಫ್‍ನಲ್ಲಿಯೇ ಡಾನ್ಸ್, ಮಾಡೆಲಿಂಗ್‍ನಲ್ಲಿ ತೊಡಗಿಕೊಂಡಿದ್ದೆ 2014 ರಲ್ಲಿ ದೆಹಲಿಯಲ್ಲಿ ನಡೆದ ಮಿಸ್ ಗ್ಲೋರಿ ಆಫ್ ಇಂಡಿಯಾದಲ್ಲಿ ಭಾಗವಹಿಸುವ ಮೂಲಕ ಮಾಡೆಲಿಂಗ್ ಜಗತ್ತಿನಲ್ಲಿ ಅವಕಾಶ ಗಟ್ಟಿಯಾಯಿತು. ಜತೆಗೆ ರ್ಯಾಂಪ್ ವಾಕ್‍ಗಳಿಗೆ ಸಮಯ ನೀಡುತ್ತಿದ್ದೆ. ಬಳಿಕ ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದೆ ಎಂದು ಹೇಳಿದ್ದಾರೆ ಚಾಂದಿನಿ ಅಂಚನ್.
ತೃಪ್ತಿ ನೀಡಿದ ಪಾತ್ರ :

ಮೊಟ್ಟ ಮೊದಲು ಮೋಕೆದ ಮಗಳ್ ತುಳು ಆಲ್ಬಂನಲ್ಲಿ ನಟಿಸಿದ ಬಳಿಕ ಆಲ್ಬಂ ಸಾಂಗ್‍ಗಳಲ್ಲಿ ಅವಕಾಶಗಳು ಬಂದವು. ನಂತರ ತೆಲುಗು ಚಿತ್ರ ರುದ್ರ ಐಪಿಎಸ್‍ನಲ್ಲಿ ಸೈಡ್ ರೋಲ್‍ನಲ್ಲಿ ನಟಿಸಿದೆ. ಇದಾದ ಬಳಿಕ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಜತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಆ್ಯಕ್ಟ್ ಮಾಡಿದೆ. ಇದೊಂದು ದೊಡ್ಡ ಅನುಭವ, ಉಪೇಂದ್ರ ಸರ್ ನಟನೆ ಬಗ್ಗೆ ತುಂಬಾನೆ ಹೇಳ್ಕೊಟ್ರು. ಬಳಿಕ ತೆಲುಗು ಚಿತ್ರರಂಗದಿಂದ ಆಫರ್ ಬಂತು ಈ ಹೊಸ ಚಿತ್ರಕ್ಕೆ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಶೂಟಿಂಗ್ ನಡೆಯುತ್ತಿದೆ. ಅದರ ನಡುವೆ ತುಳು ಚಿತ್ರ ಮಹೇಂದ್ರ ಕಾರ್‍ಸ್ಟ್ರೀಟ್ ನಿರ್ಮಾಣ-ನಿರ್ದೇಶನದ ಕಾರ್ಣಿಕದ ಕಲ್ಲುರ್ಟಿ ತುಳುನಾಡಿನ ದೈವಾರಾಧನೆ ಕುರಿತು ನಿರ್ಮಾಣವಾಗುತ್ತಿರುವ ವಿಭಿನ್ನ ಚಿತ್ರ. ಇದರಲ್ಲಿ ವಿಭಿನ್ನವಾದ ಮತ್ತು ನನಗೆ ಅತ್ಯಂತ ತೃಪ್ತಿ ಕೊಡುವ ಪಾತ್ರ ಸಿಕ್ಕಿದೆÉ ಎನ್ನುತ್ತಾರೆ ಚಾಂದಿನಿ ಅಂಚನ್.

ಈ ನಡುವೆ ಬಾಲಿವುಡ್‍ನಲ್ಲೂ ಆಫರ್ ಬಂದಿದೆ. ಇದರ ಮಾತುಕತೆ ನಡೆಯುತ್ತಿದೆ. ಸುಮಾರು ಒಂದು ತಿಂಗಳ ಕಾಲ ಕಾರ್ನಿಕದ ಕಲ್ಲುರ್ಟಿ ಶೂಟಿಂಗ್ ಕರಾವಳಿಯಾದ್ಯಂತ ನಡೆಯಲಿದೆ. ಅದು ಮುಗಿದ ತಕ್ಷಣ ಮುಂಬಯಿಗೆ ತೆರಳುತ್ತೇನೆ. ಜತೆಗೆ ತಮಿಳು ಚಿತ್ರದಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವನ್ನೂ ಜತೆ ಜತೆಯಾಗಿ ನಿರ್ವಹಿಸುತ್ತಿದ್ದೇನೆ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸಿರುವುದು ನನಗೆ ಪೂರಕವಾಗಿದೆ. ಬಿಡುವಿನಲ್ಲಿ ಹಿಂದೂಸ್ತಾನಿ ಸಂಗೀತ ತರಬೇತಿ ಪಡೆಯುತ್ತಿದ್ದೇನೆ ಎಂದು ಚಾಂದಿನಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಟನೆಗೆ ಅವಕಾಶ ಬಂದಾಗ ತಾಯಿ, ತಂಗಿ ಜತೆ ಕೂತು ಕತೆ ಬಗ್ಗೆ ಚರ್ಚಿಸುತ್ತೇವೆ. ನನ್ನ ಪಾತ್ರವನ್ನು ಒಪ್ಪಿಕೊಳ್ಳಲು ಅವರಿಬ್ಬರ ಸಲಹೆಯನ್ನೂ ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ನಾನು ಒಬ್ಬಳೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಚಾಂದಿನಿ ಅಂಚನ್.
ಕಾರ್ಣಿಕದ ಕಲ್ಲುರ್ಟಿ ಚಿತ್ರದಲ್ಲಿ ಚಾಂದಿನಿ ಅಂಚನ್ ಉಪೇಂದ್ರ ಜತೆ ಚಾಂದಿನಿ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here