Friday 19th, April 2024
canara news

ಬಿಲ್ಲವರ ಭವನದಲ್ಲಿ ಬಿಎಎಂ-ಬಿಸಿಸಿಐ ಆಶ್ರಯದಲ್ಲಿ ಜರುಗಿದ ಜೀವನೋತ್ಸವ ಕಾರ್ಯಕ್ರಮ

Published On : 27 May 2018   |  Reported By : Rons Bantwal


ಬಿಲ್ಲವರು ಬಿಲ್‍ಗೇಟ್ ದೂರದೃಷ್ಟಿತ್ವ ಉಳ್ಳವರಾಗಬೇಕು : ಎನ್.ಟಿ ಪೂಜಾರಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.26: ಮಾರ್ಪಾಟುಗಳಿಂದ ಬದಲಾವಣೆ ಸಾಧ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳೂ ಕ್ರಾಂತಿಯಿಂದಂದಲೇ ಸಮಾಜದಲ್ಲಿ ಅನನ್ಯ ಬದಲಾವಣೆ ತಂದಿದ್ದರು. ಯುವಜನತೆಯೂ ಜೀವನಶೈಲಿಯನ್ನು ಪರಿವರ್ತಿಸಿ ಕೊಂಡಾಗ ತಮ್ಮ ಜೀವನದ ಜೊತೆಗೆ ಅಖಂಡ ಸಮಾಜವನ್ನೇ ಮಾರ್ಪಾಡಿಸ ಬಹುದು. ಅವಾಗಲೇ ಭಾರತೀಯರ ಪ್ರೇರಣೆಯಿಂದ ಇಡೀ ವಿಶ್ವದ ರೂಪವನ್ನೇ ಯುವಜನತೆ ಬದಲಾಯಿಸಬಹುದು. ಬಿಲ್ಲವ ಸಮಾಜದ ಬದಲಾವಣೆಗೆ ಇಂತಹ ಜೀವನ ಪ್ರೇರಣಾ ಉತ್ಸಾಹಗಳು ಅತ್ಯವಶ್ಯವಾಗಿದೆ. ಇದಕ್ಕಾಗಿ ಬಿಸಿಸಿಐ ನಿರಂತರವಾಗಿ ಶ್ರಮಿಸಲಿದೆ. ಸಮಾಜದ ಮುತ್ಸದ್ಧಿಗಳ ಪ್ರೇರಣೆ ಪಡೆಯುವ ಬಿಲ್ಲವರು ಬಿಲ್‍ಗೇಟ್‍ನಂತಹ ಚಿಂತನೆ ಮೂಡಿಸಬೇಕು. ಬಿಲ್‍ಗೇಟ್ ಅಂತಹ ಮೇರುವ್ಯಕ್ತಿತ್ವದ ದೂರದೃಷ್ಟಿಯಿಂದ ಸರ್ವತ್ವ ಸಾಧ್ಯ. ಅವಾಗಲೇ ಯುವಜನಾಂಗವು ಉದ್ಯಮಶೀಲರಾಗಿ ಶಕ್ತಿ, ಸಮರ್ಥ್ಯ ಮತ್ತು ಫಲತ್ವವುಳ್ಳ ಪ್ರಜೆಗಳಾಗಿ ನೆಮ್ಮದಿಯ ಬದುಕು ಅನುಭವಿಸ ಬಹುದು ಎಂದು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆಯ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆಯನ್ನೊಳಗೊಂಡು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್‍ನ ಬಿಲ್ಲವರ ಭವನದ ಸಭಾಗೃಹದಲ್ಲಿ ಆಯೋಜಿಸಿದ್ದ `ಜೀವನೋತ್ಸವ-2018' ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದು ಎನ್.ಟಿ ಪೂಜಾರಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮಕ್ಕೆ ಅಸೋಸಿಯೇಶನ್ ಮಾಜಿ ಗೌರವ ಪ್ರಧಾನ ಕೋಶಾಧಿಕಾರಿ, ಹಿರಿಯ ಧುರೀಣ ಎನ್.ಎಂ ಸನಿಲ್ ಮತ್ತು ನಿಕಟಪೂರ್ವ ಅಧ್ಯಕ್ಷ ಎಲ್.ವಿ ಅವಿೂನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ನಾಡಿನ ಹೆಸರಾಂತ ಜೀವನ ಕೌಶಲ್ಯ ತರಬೇತುದಾರ (ಲೈಫ್ ಸ್ಕಿಲ್ ಕೋಚ್) ಸುಧಾಕರ್ ಕಾರ್ಕಳ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಮಾನವನ ದೈಹಿಕ ಮತ್ತು ಮಾನಸಿಕ ವಿಕಾಸವಾದಗಲೇ ಜೀವನ ಯಶಸ್ಸು ಸಾಧ್ಯ. ಅದಕ್ಕಾಗಿ ಬದುಕು ಬದಲಾವಣೆ ಅಗತ್ಯವಾಗಿದೆ. ಬಹು ಜನಸಂಖ್ಯೆವುಳ್ಳ ಭಾರತದಲ್ಲಿ ನಿರುದ್ಯೋಗವು ಬಹುದೊಡ್ಡ ಸಮಸ್ಯೆಯಾಗಿದ್ದು, ಯುವ ಜನಾಂಗವು ನಿರುದ್ಯೋಗ ನಿವಾರಣಾ ಮುಕ್ತರಾದಗಲೇ ರಾಷ್ಟ್ರದ ಮತ್ತು ಸ್ವಂತಿಕೆಯ ಭವಿಷ್ಯ ನಿರ್ಮಾಣವಾಗುವುದು.

ನಿರುದ್ಯೋಗ ನಿಭಾಯಿಸಿ ಕೊಳ್ಳಲು ದೂರದೃಷ್ಠಿತ್ವವುಳ್ಳ ಅಲೋಚನೆಗಳು, ಪರಿಶ್ರಮ, ಪ್ರತಿಭೆಗಳ ಅನಾವರಣ ಇತ್ಯಾದಿಗಳನ್ನು ಮೈಗೂಡಿಸಿಕೊಂಡಾಗ ಬದುಕು ಹಸನಾಗುವುದು. ಇವಕ್ಕೆಲ್ಲಕ್ಕೂ ಸಾಧನೆ ಸಿದ್ಧಿ ಅತ್ಯವಶ್ಯಕ. ನೀವೂ ಮತ್ತೊಬ್ಬರನ್ನು ಹೊಂದಿಕೊಂಡು ಬಾಳುವುದಕ್ಕಿಂತ ಸ್ವಉದ್ಯಮಿಗಳಾಗುವತ್ತ ಚಿಂತನೆ ಮೂಡಿಸಿ ಎಂದು ಯುವಜನಾಂಗಕ್ಕೆ ಸಲಹಿಸಿದರು.

ಹೊಟೇಲ್ ಓನರ್ಸ್ ಅಸೋಸಿಯೇಶನ್ ಬೆಳಗಾವಿ ಕಾರ್ಯಾಧ್ಯಕ್ಷ ವಿಜಯ ಸಾಲ್ಯಾನ್, ಪ್ರೆಸೈಂಟ್ ಸಮೂಹ ಪುಣೆ ಇದರ ಆಡಳಿತ ನಿರ್ದೇಶಕ ಸಂದೇಶ್ ಜಯರಾಮ ಪೂಜಾರಿ, ಕ್ಲಸ್‍ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಜಿ.ಅವಿೂನ್, ಪುಣೆ ರೆಸ್ಟೋರೆಂಟ್ ಎಂಡ್ ಹೊಟೇಲಿಯರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಾರ್ಯಕ್ರಮದಲ್ಲಿ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಬಿಲ್ಲವ ಸಮಾಜದ ತರುಣ ಪೀಳಿಗೆಯ ಭವ್ಯ ಭವಿಷ್ಯ ರೂಪಿಸುವ ಇಂತಹ ಕಾರ್ಯಕ್ರಮ ಪ್ರಶಂಸನೀಯ ಎಂದÀು ಯುವಜನಾಂಗಕ್ಕೆ ಶುಭಾರೈಸಿದರು.

ಬದುಕಿನ ಉತ್ಸಾಹವು ಉತ್ಸವವಾಗಿ ಪರಿಣಮಿಸಿದಾಗಲೇ ಜೀವನೋದ್ಧಾರ ಸಾಧ್ಯವಾಗುವುದು. ರಾಷ್ಟ್ರವನ್ನು ಮುನ್ನಡೆಸುವಲ್ಲಿ ರಾಜಕೀಯ ಕ್ಷೇತ್ರವು ಪ್ರಬಲಶಕ್ತಿ ಆಗಿದ್ದು ವಿಶೇಷವಾಗಿ ಬಿಲ್ಲವ ಯುವಜನತೆ ರಾಜಕಾರಣದತ್ತ ಹೆಚ್ಚಿನ ಒಲವು ತೋರುವ ಅವಶ್ಯವಿದೆ. ಅಂತೆಯೇ ಎಲ್ಲಾ ವಲಯಗಳಲ್ಲೂ ಬಿಲ್ಲವರು ಸಂಘಟನೆಯನ್ನು ಬಲಪಡಿಸುತ್ತಾ ತಮ್ಮ ಅಸ್ತಿತ್ವವನ್ನು ಮತ್ತು ಜೀವನೋಪಾಯವನ್ನು ಭದ್ರಪಡಿಸಬೇಕು ಎಂದÀು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಶ್ಯಾಮ ಸುವರ್ಣ ಪುಣೆ, ನೂತನ ಎಸ್.ಸುವರ್ಣ, ಯಶೋಧಾ ಎನ್.ಪೂಜಾರಿ, ರತನ್ ಯು.ಸನಿಲ್, ಡಾ| ಮೋಹನ್ ಬೊಳ್ಳಾರು, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ ಸೇರಿದಂತೆ ಅನೇಕ ಗಣ್ಯರು, ಅಸೋಸಿಯೇಶನ್ ಮತ್ತು ಬಿಸಿಸಿಐ ಸಂಸ್ಥೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾತಿ ಮೂಲ್ಯ ಮತ್ತು ಸುಷ್ಮಾ ಪೂಜಾರಿ ಪ್ರಾರ್ಥನೆಯನ್ನಾಡಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್‍ನ ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ವಿಶ್ವನಾಥ್ ತೋನ್ಸೆ, ಬಿಸಿಸಿಐ ಕಾರ್ಯದರ್ಶಿ ನ್ಯಾ| ಆನಂದ್ ಎಂ.ಪೂಜಾರಿ ಅತಿಥಿüಗಳನ್ನು ಪರಿಚಯಿಸಿದರು. ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ನ್ಯಾ| ರಾಜ ವಿ.ಸಾಲ್ಯಾನ್, ಡಾ| ಯು.ಧನಂಜಯ ಕುಮಾರ್ ಶಂಕರ ಡಿ.ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಶೋಕ್ ಸಸಿಹಿತ್ಲು ಕೃತಜ್ಞತೆ ಸಲ್ಲಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here