Wednesday 14th, May 2025
canara news

ಎಂಎಸ್‍ಆರ್‍ಎಸ್ ಕಾಲೇಜು ಶಿರ್ವ 1993ರ ಬಿಎ ಬ್ಯಾಚ್ `ಬೆಳ್ಳಿ ಸಂಭ್ರಮ'

Published On : 27 May 2018   |  Reported By : Rons Bantwal


ಹಳೆವಿದ್ಯಾಥಿರ್üಗಳೇ ಶಿಕ್ಷಣ ಸಂಸ್ಥೆಯ ಆಧಾರಸ್ತಂಭಗಳು:ವಿ.ಸುಬ್ಬಯ್ಯ ಹೆಗ್ಡೆ

ಮುಂಬಯಿ,ಮೇ.27: ಉಡುಪಿ ಅಲ್ಲಿನ ಶಿರ್ವ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜ್‍ನ 38ವರ್ಷಗಳ ಇತಿಹಾಸದಲ್ಲಿ ಬಿಎ ತರಗತಿಯಲ್ಲಿ ಅತ್ಯಧಿಕ 85 ವಿದ್ಯಾಥಿರ್üಗಳನ್ನು ಹೊಂದಿದ 1993ನೇ ಬ್ಯಾಚ್‍ನ ವಿದ್ಯಾಥಿರ್üಗಳು 25ವರ್ಷಗಳ ನಂತರ ಸಂಘಟಿತರಾಗಿ ಕಾಲೇಜ್‍ನಲ್ಲಿ ಸಮಾವೇಶಗೊಂಡು ತಮ್ಮ ಹಳೆಯ ಸವಿನೆನಪುಗಳ ವಿನಿಮಯದೊಂದಿಗೆ ಶಿಕ್ಷಣ ನೀಡಿದ ಗುರುಗಳನ್ನು ಗೌರವಿಸುವ ಕಾರ್ಯಅಭಿನಂದನೀಯ. ಹಳೆವಿದ್ಯಾಥಿರ್üಗಳೇ ಶಿಕ್ಷಣ ಸಂಸ್ಥೆಯ ಆಧಾರಸ್ತಂಭಗಳು ಎಂದು ಶಿರ್ವ ವಿದ್ಯಾವರ್ಧಕ ಸಂಘ (ರಿ.) ಇದರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ನುಡಿದರು.

ಶನಿವಾರ ಶಿರ್ವ ಎಂಎಸ್‍ಆರ್‍ಎಸ್ ಕಾಲೇಜ್‍ನ 1993ನೇ ಬ್ಯಾಚ್ ವಿದ್ಯಾಥಿರ್üಗಳು ಸಂಯೋಜಿಸಿದ `ಬೆಳ್ಳಿ ಸಂಭ್ರಮ' ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹೆಗ್ಡೆ ಮಾತನಾಡಿದರು. ಕಾಲೇಜ್‍ನ ಪ್ರಾಂಶುಪಾಲ ಪೆÇ್ರ| ಕರುಣಾಕರ ನಾಯಕ್ ಹಳೆ ವಿದ್ಯಾಥಿರ್üಗಳನ್ನು ಅಭಿನಂದಿಸಿ ಮಾತನಾಡುತ್ತಾ, 25ವರ್ಷಗಳ ಬಳಿಕ 76 ವಿದ್ಯಾಥಿರ್üಗಳು ಒಂದಾಗಿ ಸೇರಿದ ಈ ಕ್ಷಣ ಅವಿಸ್ಮರಣಿಯ ಹಾಗೂ ಮನಸ್ಸಿಗೆ ಅತ್ಯಂತ ಆನಂದ ನೀಡಿದೆ ಎಂದರು.

ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಮಾತನಾಡಿ ಸಂಸ್ಕಾರವಂತ ಮಕ್ಕಳೇ ನಮ್ಮ ಆಸ್ತಿ.ಕೃತಜ್ಞತಾ ಭಾವನೆಯೇ ಮನಸ್ಸಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ.ನಮ್ಮಲ್ಲಿಉತ್ತಮ ಮೌಲ್ಯಗಳು ಜಾಗೃತವಾದಾಗ ಮೌಲ್ಯಾಧಾರಿತ ಸಮಾಜದ ನಿರ್ಮಾಣವಾಗುತ್ತದೆಎಂದರು.

`ಬೆಳ್ಳಿ ಸಂಭ್ರಮ' ಸವಿ ನೆನಪಿಗಾಗಿ ಅಂದಿನ ತಮ್ಮಗುರುವರೇಣ್ಯರಾದ ಪೆÇ್ರ| ವೈ,ಭಾಸ್ಕರ ಶೆಟ್ಟಿ, ಡಾ| ಶಾರದಾ ಎಂ., ಡಾ| ಸುಧಾಕರ ಮರ್ಲ ಕೆ., ಪೆÇ್ರ| ವಿನೋದ್‍ನಾಥ್, ಪೆÇ್ರ| ಕರುಣಾಕರ ನಾಯಕ್, ಮಂಜುನಾಥ್‍ಕೆ.ಜಿ, ಸುರೇಂದ್ರ ಶೆಟ್ಟಿ ಹೆಚ್., ರಘುರಾಮ ಶೆಟ್ಟಿ, ಕೆ.ಮುರುಗೇಶ್, ಶ್ರೀಮತಿ ಎಸ್.ನಯನಾ, ರಾಮದಾಸ್ ಪ್ರಭು, ರಮಾನಂದ ಶೆಟ್ಟಿಗಾರ್, ಎನ್.ಲಕ್ಷ್ಮೀ, ಪಿ.ಗೀತಾ ಹಾಗೂ ಕಾಲೇಜಿನ ಸಿಬ್ಬಂಧಿವರ್ಗ ಇಂದಿನ ಉಪನ್ಯಾಸಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಉಮೇಶ ಶೆಟ್ಟಿ, ದಿವಾಕರ ಶೆಟ್ಟಿ, ಗಂಗಾಧರ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಪ್ರಸಾದ್ ಶೆಟ್ಟಿ ಕುತ್ಯಾರು,
ಶಭುನಾ ಸತೀಶ್ ಶೆಟ್ಟಿ ಮುಂಬಯಿ, ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.

ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವನೆಗೈದರು. ಬಳಿಕ ಗುರುಶಿಷ್ಯರೊಂದಿಗೆ ಮನದಾಳದ ಮಾತು-ಸಂವಾದ ನಡೆಯಿತು.

ಇಂತಹ ಕಾರ್ಯಕ್ರಮಗಳು ಒಳ್ಳೆಯ ಯೋಚನೆಗಳಿಗೆ ಮುನ್ನುಡಿ ನೀಡುತ್ತವೆ.ಹೊಸರೀತಿಯ ಸಂತೋಷದಅನುಭವ ಶಿಕ್ಷಕವೃಂದಕ್ಕೆ ನೀಡಿದ್ದೀರಿ. ಕುಟುಂಬ ಸಮೇತರಾಗಿಇಂತಹಕಾರ್ಯಕ್ರಮ ಮಾಡಿದಾಗ ನಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರದ ಮೌಲÀು ಸಿಗುತ್ತವೆ ಎಂದÀು ಪೆÇ್ರ| ಸುಧಾಕರ ಮಾರ್ಲ ಅವರು ಸಮಾರೋಪ ಭಾಷಣವನ್ನುದ್ದೇಶಿಸಿ ತಿಳಿಸಿದರು.

ಆದಿಯಲ್ಲಿ ಅಗಲಿದ ಶಿಕ್ಷಕರಿಗೆ,ಸಹಪಾಠಿಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಸುರೇಶ ದೇವಾಡಿಗ ಅತಿಥಿüವರ್ಯರನ್ನು ಪರಿಚಯಿಸಿದರು. ಶ್ರೀಮತಿ ಗಾಯತ್ರಿ ಪ್ರಾಥಿರ್üಸಿದರು. ಶರಶ್ಚಂದ್ರ ಹೆಗ್ಡೆ ಸ್ವಾಗತಿಸಿದರು. ಶರ್ಮಿಳಾ ಮೋನಿಸ್ ಸಂದೇಶ ವಾಚನ ಮಾಡಿದರು. ಬಾಬುರಾಯ ಆಚಾರ್ಯ, ಶಾಂತಾರಾಮ ವಾಗ್ಲೆ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here