Wednesday 14th, May 2025
canara news

ಜೂ.02 : ದಹಿಸರ್ ಕಾಶೀಮಠದಲ್ಲಿ ಅಭಂಗವಾಣಿ

Published On : 31 May 2018


ಮುಂಬಯಿ, ಮೇ.30: ದಹಿಸರ್ ಪೂರ್ವದ ಸುದೀಂದ್ರ ನಗರದ ಕಾಶೀ ಮಠದಲ್ಲಿ ಶ್ರೀ ವಿಠಲ ರುಖುಮಾಯೀ ಮಂದಿರದಲ್ಲಿ ಇದೇ ಜೂನ್ 2ರ ಶನಿವಾರ ಸಂಜೆ 5.30 ಗಂಟೆಗೆ ಅಧಿಕ ಮಾಸದ ಪ್ರಯುಕ್ತವಾಗಿ ಅಭಂಗವಾಣಿ ನಡೆಯಲಿದೆ.

ಪ್ರಧಾನ ಕಲಾಕಾರರಾದ ಮೂರ್ಜೆ ಬಾಲಚಂದ್ರ ಪ್ರಭು, ರುತುಜಾ ಲಾಡ್ ಹಾಗೂ ಸಹ ಕಲಾವಿದರಾಗಿ ರಾಘವೇಂದ್ರ ಮಲ್ಯ, ಸಿದ್ದಾರ್ಥ್ ಪಡಿಯಾರ್, ಕೋಟೇಶ್ವರ ಶ್ರೀಧರ ಭಟ್ ಹಾಗೂ ಸತೀಶ್ ಪ್ರಭು ಪಾಲ್ಗೊಳ್ಳಲಿದ್ದಾರೆ. ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಣೆ ನಡೆಸಲಿದ್ದಾರೆ.

ಶ್ರೀ ಸಂಸ್ಥಾನ ಕಾಶೀ ಮಠದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಕೃಪಾಶೀರ್ವಾದದೊಂದಿಗೆ ನಡೆಯಲಿರುವ ಗುರುಕೃಪಾ ಕಲಾವಿದರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಶ್ರೀ ಕಾಶೀ ಮಠದ ದಹಿಸರ್ ಶಾಖಾ ಕಾರ್ಯಾಧ್ಯಕ್ಷ ಮೋಹನದಾಸ್ ಮಲ್ಯ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ಈ ಮೂಲಕ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here