Wednesday 14th, May 2025
canara news

ಹರೀಶ್ ಕುಮಾರ್ ರಿಗೆ ಶಾಸಕತ್ವ-*ಪಕ್ಷದ ಸುದೀರ್ಘ ಸೇವೆಗೆ ಸಂದ ಗೌರವ: ಫಾರೂಕ್ ಉಳ್ಳಾಲ್.

Published On : 01 Jun 2018   |  Reported By : Rons Bantwal


ಹರೀಶ್ ಕುಮಾರ್ ಕಾಂಗ್ರೇಸ್ ಪಕ್ಷದ ಕಷ್ಟ ಕಾಲದಲ್ಲಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಪ್ರೀತಿಗೆ, ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಪ್ರಾಮಾಣಿಕ ರಾಜಕಾರಣಿ*.

   

ಫಾರೂಕ್ ಉಳ್ಳಾಲ್                             ಹರೀಶ್ ಕುಮಾರ್

*ಕಾಂಗ್ರೇಸ್ ಪಕ್ಷದ *ದ.ಕ.ಜಿಲ್ಲಾಧ್ಯಕ್ಷರಾಗಿಯೂ ತನ್ನ ಕರ್ತವ್ಯವನ್ನು ಕಾರ್ಯಕರ್ತರ ಮನಸ್ಸರಿತು ನಿರ್ವಹಿಸುತ್ತಾ ಬಂದ ಶ್ರೀ ಕೆ. ಹರೀಶ್ ಕುಮಾರ್ ರವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ, ಪಕ್ಷ ನಿಷ್ಠೆಗೆ ಸಂದ ಅರ್ಹ ಗೌರವ*.

*ಇದು ಪಕ್ಷದ ಸೋಲಿನಿಂದ ನೊಂದ ಕಾರ್ಯಕರ್ತರಲ್ಲಿ ಪುನಶ್ಚೇತನ ತುಂಬಲು ಸಹಕಾರಿಯಾಗಲಿದೆ*.ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿಯ ವೀಕ್ಷಕ ಶ್ರೀ ಫಾರೂಕ್ ಉಳ್ಳಾಲ್ ಹರ್ಷ ವ್ಯಕ್ತ ಪಡಿಸಿದ್ದಾರೆ. *ಪಕ್ಷದ ಅಧ್ಯಕ್ಷನಾದ ಅಲ್ಪ ಸಮಯದಲ್ಲೇ ಕಾರ್ಯಕರ್ತರ ವಿಶ್ವಾಸ ಗಳಿಸಲು ಸಾಧ್ಯವಾದ ಶೀ ಹರೀಶ್ ಕುಮಾರ್ ಶಾಸಕರಾಗಿಯೂ ಪಕ್ಷ ಮತ್ತು ನಾಡಿನ ಅಭಿವೃದ್ಧಿ- ಕೀರ್ತಿಗೂ ಕಾರಣರಾಗಲಿ*,

*ಹೊಸ ಹುದ್ದೆ ಅಭಿನಂದನಾರ್ಹ ಕೆಲಸಗಳಿಗೆ ಪೂರಕವಾಗಲಿ ಎಂದು ಹಾರೈಸಿರುವ ಶ್ರೀ ಫಾರೂಕ್ ಉಳ್ಳಾಲ್,

ಈ ಆಯ್ಕೆಗೆ ಸಹಕರಿಸಿದ ಹಿರಿಯ ನಾಯಕರಿಗೆ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರಲ್ಲದೆ, ಶಾಸಕತ್ವದ ಅವಧಿಯಲ್ಲಿ ಹರೀಶ ಕುಮಾರ್ ರಿಗೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಫಾರೂಕ್ ಉಳ್ಳಾಲ್ ಶುಭ ಕೋರಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here