Wednesday 14th, May 2025
canara news

ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Published On : 03 Jun 2018   |  Reported By : Rons Bantwal


ಇತ್ತಿಫಾಕ್ ಮೀಲಾದ್ ಕಮಿಟಿ ಜೋಗಿಬೆಟ್ಟು,ಗಡಿಯಾರ್ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಗಡಿಯಾರ್ ಜಂಕ್ಷನ್ ನಲ್ಲಿ ಜರುಗಿತು. ಇತ್ತಿಫಾಕ್ ಮೀಲಾದ್ ಕಮಿಟಿ ಇದರ ಅಧ್ಯಕ್ಷರಾದ ಅಬ್ದುಲ್ ರಶೀದ್ ಜೋಗಿಬೆಟ್ಟುರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂಜೆಎಂ ಮಸೀದಿಯ ಖತೀಬರಾದ ಅಲ್ಹಾಜ್ ಟಿ.ಪಿ. ಜಮಾಲುದ್ದೀನ್ ದಾರಿಮಿ ಉಧ್ಘಾಟಿಸಿದರು. ಗಡಿಯಾರ ಸರಕಾರಿ ಶಾಲಾ ಅಧ್ಯಾಪಕರಾದ ಸದಾನಂದ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎಂಜೆಎಂ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಝಿಝ್ ಪಾರ್ಪಕಜೆ,ಪ್ರಧಾನ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರಹಿಮಾನ್,ಇತ್ತಿಫಾಕ್ ಮೀಲಾದ್ ಕಮಿಟಿಯ ಗೌರವಾಧ್ಯಕ್ಷರಾದ ಹೈದರ್ ವಿದ್ಯಾನಗರ, ಉಪಾಧ್ಯಕ್ಷರಾದ ಯೂಸೂಫ್ ಜೋಗಿಬೆಟ್ಟು ಹಾಗೂ ಅಲ್ತಾಫ್ ವಿಧ್ಯಾನಗರ, ಕೋಶಾಧಿಕಾರಿ ಶರೀಫ್ ಕಡೇಶ್ವಾಲ್ಯ, ಜಾಬಿರ್ ಮುಸ್ಲಿಯಾರ್ ಉಪಸ್ಥಿತರಿದ್ದರು.

 

ಪಿ.ಜೆ.ಅಬ್ದುಲ್ ಅಝೀಝ್ ಜೋಗಿಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮಾರು 90 ಕ್ಕೂ ಅಧಿಕ ವಿಧ್ಯಾರ್ಥಿಗಳು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ಸದುಪಯೋಗವನ್ನು ಪಡೆದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here