Wednesday 14th, May 2025
canara news

ಶಾಸಕ ಯು.ರಾಜೇಶ್ ನಾಯ್ಕ್ ಅವರ ಅದ್ದೂರಿಯ ವಿಜಯೋತ್ಸವ ಮೆರವಣಿಗೆ

Published On : 03 Jun 2018   |  Reported By : Rons Bantwal


ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಭಾರತಿಯ ಜನತಾ ಪಾರ್ಟಿಯ ಶಾಸಕ ಯು.ರಾಜೇಶ್ ನಾಯ್ಕ್ ಅವರ ಅದ್ದೂರಿಯ ವಿಜಯೋತ್ಸವ ಮೆರವಣಿಗೆ ಬಿ.ಸಿ.ರೋಡ್,ಬಂಟ್ವಾಳ ನಗರ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು. ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ತೆರದ ವಾಹನದಲ್ಲಿ ಶಾಸಕ ರಾಜೇಶ್ ನಾಯ್ಕ್ ರವರ ಆರಂಭಗೊಂಡ ವಿಜಯೋತ್ಸವ ಮೆರವಣಿಗೆ ಬಿ ಸಿ ರೋಡ್ ರಾಜಾ ರಸ್ತೆಯಲ್ಲಿ ಸಾಗಿ ಬಂದು, ಗಾಣ ದಪಡ್ಪು. ಬಂಟ್ವಾಳ ನೆರೆ ವಿಮೋಚನ ರಸ್ತೆಯ ಮೂಲಕ ಬಂಟ್ವಾಳ ನಗರವನ್ನು ಪ್ರವೇಶಿಸಿತು. ಅಲ್ಲಿಂದ ಬಡ್ಡಕಟ್ಟೆ ,ಜಕ್ರಿಬೆಟ್ಟು ಆಗಿ. ಬೈಪಾಸ್ ನಲ್ಲಿ ಸಾಗಿ ಬಂದು ಬಂಟ್ವಾಳ ಬೈಪಾಸ್ ರಾಮನಗರ ಜಂಕ್ಷನ್ ನಲ್ಲಿ ವಿಜಯೋತ್ಸವ ಸಂಪನ್ನ ಗೊಂಡಿತು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ರಾಜೇಶ್ ನಾಯ್ಕ್ ಅವರು, ತನ್ನಗೆಲುವು ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ ಎಂದರು. ತೆರೆದವಾಹನದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಸುಗುಣ ಕಿಣಿ,ಭಾಸ್ಕರ ಟೈಲರ್,ಪ್ರಮುಖರಾದ ಉದಯಕುಮಾರ್ ರಾವ್ ಬಂಟ್ವಾಳ, ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ದಿನೇಶ್ ಭಂಡಾರಿ, ದಿನೇಶ್ ಅಮ್ಟೂರು,ರೋನಾಲ್ಡ್ ಡಿಸೋಜ,ಪ್ರಬಾಕರ ಪ್ರಭು, ಗಣೇಶ್ ರೈ ಮಾಣಿ,ಗಂಗಾಧರ್ ಪರಾರಿ, ಮಚ್ಚೇಂದ್ರ ಸಾಲಿಯಾನ್ ,ಯಶೋಧಕುಲಾಲ್,ಸುಶ್ಮಾ ಚರಣ್, ಸೀತರಾಮ ಪೂಜಾರಿ,ರಮಾನಾಥ ರಾಯಿ,ಹರೀಶ್ ಆಚಾರ್ಯ ರಾಯಿ,ಪುರುಷೋತ್ತಮ ಶೆಟ್ಟಿ ವಾಮದಪದವು,ಶಿವಪ್ತಸಾದ್ ಬಂಟ್ವಾಳ ,ರಮಾನಾಥ ಪೈ ಬಂಟ್ವಾಳ ಮೊದಲಾದವರಿದ್ದರು.ಹೊಳ್ಲ ಗೊಂಬೆ ಕುಣಿತ,ಕೀಲುಕುದುರೆ,ಚೆಂಡೆ,ನಾಸಿಕ್ ಬ್ಯಾಂಡ್,ಕೊಂಬು ಕಹಳೆ ಮೆರವಣಿಗೆಗೆ ವಿಶಷ ಮೆರಗು ನೀಡಿತು.ಮೆರವಣಿಗೆಯುದ್ದಕ್ಕೂ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಹಾರ ಹಾಕಿ ಪೇಟೆ ತೊಡಿಸಿ ಅಭಿನಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here