Wednesday 14th, May 2025
canara news

ಬಂಟ್ವಾಳ ಕ್ಷೇತ್ರದ ನೂತನ ಶಾಸಕ ಉಳಿಪ್ಪಾಡಿ ರಾಜೇಶ್ ನಾಯಕ್ ಗೆ ಅಭಿನಂದನಾ ಕಾರ್ಯಕ್ರಮ

Published On : 04 Jun 2018   |  Reported By : Rons Bantwal


ಬಂಟ್ವಾಳ: ಬಿಜೆಪಿ ಗ್ರಾಮ ಸಮಿತಿ ಬಾಳ್ತಿಲ ಇದರ ಆಶ್ರಯದಲ್ಲಿ ಬಂಟ್ವಾಳ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆ ಯಾದ ಉಳಿಪ್ಪಾಡಿ ರಾಜೇಶ್ ನಾಯಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಪೂರ್ಲಿಪಾಡಿಯಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ರಾಜೇಶ್ ನಾಯಕ್ ನಾನು ರಾಜದರ್ಮವನ್ನು ಪಾಲಿಸುವ ಪ್ರಮಾಣಿಕ ನಿಮ್ಮ ಸೇವಕನಾಗಿ ಐದು ವರ್ಷ ಇತಿ ಮಿತಿಯೊಳಗೆ ಕೆಲಸ ಮಾಡುತ್ತೇನೆ ಎಂದರು. ನೀವು ನೀಡಿದ ಜವಬ್ದಾರಿಗೆ ಕುಂದು ಬಾರದ ರೀತಿಯಲ್ಲಿ.

ಬಂಟ್ವಾಳ ‌ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಇದಕ್ಕೆ ಕ್ಷೇತ್ರದ ಜನರ ಸಹಕಾರವನ್ನು ಬಯಸುತ್ತೇನೆ ಎಂದು ಹೇಳಿ ದರು.

ಕ್ಷೇತ್ರದ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಭ್ಯ ರಾಜಕಾರಣ ಮಾಡುವ ಮೂಲಕ ನೀವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ಚ್ಯುತಿ ಬಾರದ ರೀತಿಯಲ್ಲಿ ಕ್ಷೇತ್ರ ವನ್ನು ಅಭಿವ್ರದ್ದಿಯ ಪಥದಲ್ಲಿ ಕೊಂಡುಹೋಗುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರಿಗೆ ಮತದಾರರಿಗೆ ಅಬಾರಿಯಾಗಿದ್ದೇನೆ ಎಂದರು.

ಕಲ್ಲಡ್ಕ ಎನ್ನುವುದು ಕ್ರಾಂತಿಯ ಕ್ಷೇತ್ರ, ಕಲ್ಲಡ್ಕದಲ್ಲಿ ಕ್ರಾಂತಿ ಯಾದರೆ ಮಾತ್ರ ಜನರಿಗೆ ಶಾಂತಿ ಸಿಗುತ್ತದೆ, ಧಾರ್ಮಿಕ, ಸಾಮಾಜಿಕ, ರಾಜಕೀಯ ವಾದ ಕ್ರಾಂತಿ ಹುಟ್ಟು ಕಲ್ಲಡ್ಕದಲ್ಲಿಯೇ ಎಂದು ಬಿಜೆಪಿ ವಕ್ತಾರ ಹರಿಕ್ರಷ್ಣ ಬಂಟ್ವಾಳ ಹೇಳಿದರು. ಕಲ್ಲಡ್ಕದ ಶಾಲೆಗೆ ' ಕೈ ' ಹಾಕಿದವರಿಗೆ ಸೋಲಾಗಿದೆ ಎನ್ನುವುದು ಸತ್ಯ ಎಂದು ಅವರು ಹೇಳಿದರು. ಗ್ರಾಮ ಸಮಿತಿ ಅದ್ಯಕ್ಷ ಲೋಕಾನಂದ ಪೂಜಾರಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಜಿ.ಪಂ.ಸದಸ್ಯ ಚೆನ್‌ಪ್ಪ ಆರ್ ಕೋಟ್ಯಾನ್, ರೈತ ಮೋರ್ಚಾದ ಜಿಲ್ಲಾ ಉಪಾದ್ಯಕ್ಷ ಬಿ.ಕೆ ಅಣ್ಣು ಪೂಜಾರಿ, ವಕೀಲರಾದ ಶ್ರೀಧರ ಶೆಟ್ಟಿ ಪುಳಿಂಚ , ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಬಂಟ್ವಾಳ, ದೇವದಾಸ ಶೆಟ್ಟಿ, ಜಿಲ್ಲಾ ಎಸ್ ಸಿ ಮೋರ್ಚಾದ ಅದ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ಗ್ರಾಮ.ಪಂ.ಅಧ್ಯಕ್ಷ ವಿಠಲ ನಾಯ್ಕ, ತಾ.ಫಂ. ಸದಸ್ಯೆ ಲಕ್ಮೀ ಗೋಪಾಲಾಚಾರ್ಯ, ಪ್ರಮುಖರಾದ ಮೋಹನ್ ಪಿ.ಎಸ್, ಸುರೇಶ್ ಶೆಟ್ಟಿ ಕಾಂದಿಲ, ಶಿವರಾಜ್ ಶೆಟ್ಟಿ, ಚಂದ್ರಶೇಖರ್, ಶಂಕರ ದರ್ಕಾಸ್, ಕಿಶೋರ್, ಗ್ರಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ, ರಮೇಶ್ ಕುದ್ರೆಬೆಟ್ಟು, ಲೋಕಯ್ಯ ಪೂರ್ಲಿಪಾಡಿ, ಆನಂದ ಶಂಭೂರು, ಉಪಸ್ಥಿತರಿದ್ದರು, ಇದೇ ಪೂರ್ಲಿಪಾಡಿ ಶಿವಾಜಿನಗರ, ಮಂಜನಗುಡ್ಡೆ ನಾಗರಿಕರಿಂದ ಬಿ.ಕೆ.ಪೂಜಾರಿಯವರ ನೇತ್ರತ್ವದಲ್ಲಿ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ ವಂದಿಸಿದರು. ಸಂತೋಷ್ ಬೊಲ್ಪೋಡಿ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here