Monday 7th, July 2025
canara news

ರತ್ನಗಿರಿಯ ಆರೆವರೆ ಬೀಚ್‍ನಲ್ಲಿ ಈಜಲು ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋರಿವಿಲಿ ಅಲ್ಲಿನ ಐವರು ನಿವಾಸಿಗಳ ದಾರುಣ ಸಾವು

Published On : 04 Jun 2018   |  Reported By : Rons Bantwal


ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.04: ಕಳೆದ ಶನಿವಾರ ಗೋವಾದಿಂದ ಕಾರು ಮೂಲಕ ಹಿಂತಿರುಗುವಾಗ ರತ್ನಗಿರಿ ದೇವ್‍ರುಕ್ ಅಲ್ಲಿನ ಪ್ರಸಿದ್ಧ ಆರೆವರೆ ಕಡಲ ತೀರದಲ್ಲಿ ಸಂಜೆ ವೇಳೆಗೆ ವಿಹಾರಕ್ಕೆಂದು ಇಳಿದ ಬೋರಿವಿಲಿ ಅಲ್ಲಿನ ಐವರು ನಿವಾಸಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ದಾರುಣ ಸಾವನ್ನಪ್ಪಿದ್ದು, ಎಲ್ಲಾ ಐದು ಮೃತದೇಹಗಳನ್ನು ಪೆÇೀಲಿಸ್ ರಕ್ಷಣೆಯೊಂದಿಗೆ ಎರಡು ಅಂಬ್ಯುಲೆನ್ಸ್‍ಗಳ ಮೂಲಕ ಇಂದಿಲ್ಲಿ ಸಂಜೆ ಮುಂಬಯಿ ಉಪನಗರದ ಬೋರಿವಿಲಿಗೆ ತರಲಾಯಿತು.

ಮೃತರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದು ಬೋರಿವಿಲಿ ಐ.ಸಿ ಕಾಲೋನಿ ಕಿನ್ನೀಸ್ ಕಾರ್ನರ್ ಅಲ್ಲಿನ ಸಿಲ್ವರ್ ಸ್ಟೋನ್ ಬಿಲ್ಡಿಂಗ್‍ನ ನಿವಾಸಿಗಳಾಗಿದ್ದರೆ. ಮೋನಿಕಾ ಬೆನ್ಟೋ ಡಿ'ಸೋಜಾ (44.), ಕು| ಸನೋಮಿ ಬೆನ್ಟೋ ಡಿ'ಸೋಜಾ (22.), ಮಾ| ರಿಚಾರ್ಡ್ ಬೆನ್ಟೋ ಡಿ'ಸೋಜಾ (19.), ಮಾ| ಮಾಥೇವ್ ಬೆನ್ಟೋ ಡಿ'ಸೋಜಾ (18.) ಮತ್ತು ಕೆನ್ನೀತ್ ಮಾಸ್ಟೆರ್ಸ್ (56.) ಮೃತ ದುರ್ದೈವಿಗಳು. ಕೆನ್ನೀತ್ ಮಾಸ್ಟೆರ್ಸ್ ಕೊಚ್ಚಿಹೋದವರನ್ನು ರಕ್ಷಿಸಲು ಹೋಗಿ ತಾನೇ ಪ್ರಾಣಕಳೆದು ಕೊಳ್ಳುವಾಯಿತು. ಪ್ರಯಾಣದ ಜೊತೆಗಿದ್ದ ಪಯ್ಕಿ ಡಿ'ಸೋಜಾ ಮತ್ತು ಮಾಸ್ಟೆರ್ಸ್ ಪರಿವಾರ ಮಿತ್ರರಾದ ಕೆನ್ನೀತ್ ಪತ್ನಿ ಲೀನಾ ಕೆ.ಮಾಸ್ಟೆರ್ಸ್ ಮತ್ತು ರೀಟಾ ಡಿ'ಸೋಜಾ ಬದುಕಿ ಉಳಿದ ಅದೃಷ್ಟಶಾಲಿಗಳಾಗಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ರಜಾ ಕಾಲದ ವಿಶ್ರಾಂತಿಗಾಗಿ ತೆರಳಿದ್ದರು ಎನ್ನಲಾಗಿದೆ. ರತ್ನಗಿರಿಯ ಸ್ಥಳಿಯ ಪೆÇೀಲಿಸರು ಕೇಸು ದಾಖಲಿಸಿ ಕೋಸ್ಟ್‍ಗಾರ್ಡ್‍ಗಳ ಸಹಾಯದಿಂದ ಮೃತದೇಹಗಳನ್ನು ಪತ್ತೆಹಚ್ಚಿ ಸಮುದ್ರ ತೀರಕ್ಕೆ ತಂದು ಪಂಚನಾಮ ನಡೆಸಿ ರತ್ನಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಡಾ| ಪಿ.ದೇವ್ಕರ್ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ ತಮ್ಮ ವಾರಿಸುದಾರರಿಗೆ ನೀಡಿದ್ದು ಇಂದಿಲ್ಲಿ ಬೋರಿವಿಲಿಗೆ ತರಲಾಯಿತು.

ಮೃತರೆಲ್ಲರೂ ಮುಂಬಯಿವಾಸಿಗಳಾಗಿದ್ದು ನ್ಯೂಲೈಫ್ ಸಮುಹಕ್ಕೆ ಸೇರಿದ ಕ್ರೈಸ್ತರು ಎನ್ನಲಾಗಿದೆ. ಪಾರ್ಥೀವ ಶರೀರಗಳ ಅಂತ್ಯಕ್ರಿಯೆಯು ಬುಧವಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here