Wednesday 14th, May 2025
canara news

ಹೆರಂಜೆ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Published On : 05 Jun 2018   |  Reported By : Rons Bantwal


ಬ್ರಹ್ಮಾವರ, ಜೂ.05: ಹೆರಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಜೂ.19ರಿಂದ 24ರವರೆಗೆ ನಡೆಯುವ ಅಷ್ಟಬಂಧ ಸಹಿತ ದೇವರ ಪುನರ್ ಪ್ರತಿಷ್ಟೆ, ದ್ರವ್ಯ ಕಲಶ ಸಹಿತ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದಿಲ್ಲಿ ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಪತ್ರಿಕೆ ಬಿಡುಗಡೆ ಮಾಡಿದ ವೇ| ಮೂ| ಬೆಳ್ಮಾರು ರಾಘವೇಂದ್ರ ಭಟ್ ಮಾತನಾಡಿ ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಊರಿನ ಜನತೆಯನ್ನು ಒಟ್ಟುಗೂಡಿಸುತ್ತದೆ. ಯಾವುದೇ ಕಾರ್ಯದಲ್ಲಿ ವಿಘ್ನಗಳು ಸಹಜ. ಆ ವಿಘ್ನಗಳನ್ನು ಲೆಕ್ಕಿಸದೇ ಮುಂದೆ ಹೋದಲ್ಲಿ ಊರಿನ ಅಭಿವೃದ್ಧಿ ಸಾಧ್ಯ ಹಾಗೂ ಯೋಚಿಸಿದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಹೆರಂಜೆ ದೊಡ್ಮನೆ ಎಚ್, ಸುಧಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

24ರ ಬೆಳಿಗ್ಗೆ 4ರಿಂದ 505 ಪರಿಕಲಶಗಳ ಅಭಿಷೇಕ ಸಹಿತ ಬ್ರಹ್ಮಕುಂಭಾಭೀಷೇಕ ನಡೆಯಲಿದ್ದು, ಸಂಜೆ 5ಕ್ಕೆ ನಡೆಯವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಮತ್ತು ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಚನ, ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.

ಬ್ರಹ್ಮಾವರ ಸ್ಪೋಟ್ರ್ಸ್ ಕ್ಲ್ಲಬ್‍ನ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಚಾಂತಾರು ಅಶೋಕ್ ಭಟ್, ಜೀರ್ಣೋದ್ಧಾರ ಸಮಿತಿಯ ಹೆಚ್.ಚಂದಯ್ಯ ಶೆಟ್ಟಿ, ಸಮಿತಿಯ ಪದಾಧಿಕಾರಿಗಳು, ಅರ್ಚಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಹೆರಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here