ಅಬುದಾಬಿ : ಅಲ್ ಸಿತಾರಾ ವತಿಯಿಂದ ಇಫ್ತಾರ್ ಸಮ್ಮಿಲನ ಕಾರ್ಯಕ್ರಮವು ಅಬುದಾಬಿಯ ಅಲ್ ಇಬ್ರಾಹಿಮಿ ರೆಸ್ಟೋರೆಂಟ್ ನಲ್ಲಿ ಅದ್ದೂರಿಯಾಗಿ ಜರುಗಿತು. ಸದಾ ಸಮಾಜಮುಖಿ ಕಾರ್ಯಗಳಿಂದ ಅನಿವಾಸಿ ಕನ್ನಡಿಗರ ನಡುವೆ ಚಿರಪರಿಚಿತರಾಗಿರುವ ಉದ್ಯಮಿ ಮುಹಮ್ಮದ್ ಅಕ್ರಮ್ ರವರ ''ಅಲ್ ಸಿತಾರಾ ಕಾಂಟ್ರಾಕ್ಟಿಂಗ್ ಅಂಡ್ ಜನರಲ್ ಮೇಂಟೆನೆನ್ಸ್ ಕಂಪನಿ'' ಪ್ರತೀವರ್ಷ ಇಫ್ತಾರ್ ಸಮ್ಮಿಲನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಅಲ್ ಸಿತಾರಾದ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪವಾಸವು ಮಾನವನನ್ನು ಎಲ್ಲಾ ರೀತಿಯ ದುಷ್ಟಗಳಿಂದ ತಡೆಗಟ್ಟುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧಗೊಳಿಸುತ್ತದೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅವನ ಮನಸ್ಸಿನಲ್ಲಿ ಹುಟ್ಟುಹಾಕುತ್ತದೆ ಎಂದು ನುಡಿದರು.
ಅನಿವಾಸಿ ಕನ್ನಡಿಗರ ಎಲ್ಲಾ ಕಾರ್ಯಕ್ರಮಗಳಲ್ಲಿ ಅಕ್ರಮ್ ರವರ ಸಹಕಾರ ಸಾನಿಧ್ಯವಿದ್ದೇ ಇರುತ್ತದೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗ ಗಣ್ಯ ಅಥಿತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ ಸಿತಾರದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಮುಹಮ್ಮದ್ ಸುಫಿಯಾನ್, ಮುಹಮ್ಮದ್ ಸಾದ್, ಮುಹಮ್ಮದ್ ಸಾಬಿಹ್, ತಾಹಿರ್ ಹುಸೇನ್, ಅಲ್ತಾಫ್ ಎಂ. ಎಸ್, ಇರ್ಫಾನ್, ಇಮ್ರಾನ್, ಅಹ್ಮದ್ ಹುಸೇನ್, ರಹೀಮ್ ಶೈಖ್, ಮುನೀರ್ ಶೈಖ್, ಅಜ್ಮಲ್, ಕಮರುದ್ದೀನ್, ಲತೀಫ್ ಕೆ ಹೆಚ್ ಕಕ್ಕಿಂಜೆ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.