Wednesday 14th, May 2025
canara news

ನಿವ್ರತ್ತಿ ಹೊಂದಿದ ಚೆನ್ನಪ್ಪ ಗೌಡ ಮತ್ತು ಡಿ.ಆನಂದ ವಿದಾಯ ಸಮಾರಂಭ

Published On : 06 Jun 2018   |  Reported By : Rons Bantwal


ಬಂಟ್ವಾಳ: ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಜೊತೆ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ವಿಶ್ವಾಸಕ್ಕೆ ಪಡೆದು ಕೊಂಡಿಯಾಗಿ ಕೆಲಸ ಮಾಡಿದಾಗ ಸಹಕಾರಿ ಸಂಘಗಳು ಬೆಳೆಯುತ್ತದೆ ಎನ್ನುವುದಕ್ಕೆ ಬಂಟ್ವಾಳ ಸಹಕಾರಿ ಸಂಘಗಳು ಸಾಕ್ಷಿ ಎಂದು ಡಿ.ಸಿ.ಸಿ.ಬ್ಯಾಂಕ್ ನ ನಿರ್ದೇಶಕ ಟಿ.ರಾಜಾರಾಂ ಭಟ್ ಹೇಳಿದರು.

ಅವರು ಬಿಸಿರೋಡು ಡಿ.ಸಿ.ಸಿ.ಬ್ಯಾಂಕ್ ನಲ್ಲಿ ಬಂಟ್ವಾಳ ತಾಲೂಕಿನ ಪ್ರಾಥಮಿಕ ಕ್ರಷಿಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ , ಕೆದಿಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿದ ಚೆನ್ನಪ್ಪ ಗೌಡ ಮತ್ತು ಬಿಸಿರೋಡು ಡಿ.ಸಿ.ಸಿ.ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾಗಿ ನಿವ್ರತ್ತಿ ಹೊಂದಿದ ಆನಂದ ಇವರ ವಿದಾಯ ಸಮಾರಂಭದಲ್ಲಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಬಂಟ್ವಾಳ ತಾಲೂಕು ಸಹಕಾರಿ ಕ್ಷೇತ್ರ ಗಳು ಆದರ್ಶದ ಗೆರೆಯಲ್ಲಿ ನಡೆಯುತ್ತಿದೆ. ಇದಕ್ಜೆ ಸಿಬ್ಬಂದಿ ಗಳ ಪಾತ್ರ ಪ್ರಾಮುಖ್ಯ ಪಡೆದಿದೆ ಎಂದರು.

ಕಾರ್ಯವೈಖರಿ ಯ ಶೈಲಿ ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎಂದು ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಹೇಳಿದರು. ಪ್ರಮಾಣಿಕತೆ, ಆಸಕ್ತಿ ಮತ್ತು ಉದ್ದೇಶ ಕೂಡ ಸಹಕಾರಿ ಕ್ಷೇತ್ರದಲ್ಲಿ ಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಿ.ಎಲ್.ಡಿ.ಬ್ಯಾಂಕ್ ನ ಅದ್ಯಕ್ಷ ಸುದರ್ಶನ್ ಜೈನ ಮಾತನಾಡಿ, ಜನರ ಬೇಡಿಕೆ ಗಳಿಗೆ , ರೈತರಿಗೆ ಪೂರಕವಾಗಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ ಎಂದರು.
ವೇದಿಕೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್, ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಡಿ.ಸಿ.ಸಿ ಬ್ಯಾಂಕ್ ನ ವಿಟ್ಲ ವಲಯ ಮೇಲ್ವಿಚಾರಕ ಎಚ್ ಯೋಗೀಶ್, ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ, ಬಿಸಿರೋಡ್ ಡಿ.ಸಿ.ಸಿ.ಬ್ಯಾಂಕ್ ನ ಶಾಖಾ ವ್ಯವಸ್ಥಾಪಕಿ ಸೌಮ್ಯ ಮತ್ತು ಒಕ್ಕೂಟದ ಉಪಾಧ್ಯಕ್ಷ ಆಲ್ಬರ್ಟ ಡಿ.ಸೊಜ ಉಪಸ್ಥಿತರಿದ್ದರು. ಮಣಿ ನಾಲ್ಕೂರು ಸೇವಾ ಸಹಕಾರಿ‌ಬ್ಯಾಂಕ್ ನ‌ಮುಖ್ಯ ಕಾರ್ಯನಿರ್ವಣಾಧಿಕಾರಿ ಸುಧಾಕರ ಸ್ವಾಗತಿಸಿ, ಕಾವಳ ಪಡೂರು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿ

ಶಿವಾನಂದ ವಂದಿಸಿದರು. ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಾಣಾಧಿಕಾರಿ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here