Wednesday 14th, May 2025
canara news

ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಸಡಗರದ ಪ್ರಾರಂಭೋತ್ಸವ

Published On : 07 Jun 2018   |  Reported By : media release


ಉಡುಪಿ ಕುಂಜಾರುಗಿರಿ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯದ ಪ್ರಾರಂಭೋತ್ಸವ ಜೂನ್ ನಾಲ್ಕರಂದು ನಡೆಯಿತು. 2018-19 ರ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸಡಗರದಿಂದ ಆಚರಿಸಿ, ಹೊಸ ಕಲಿಕಾ ವರ್ಷವನ್ನು ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಅತ್ಯಂತ ಸಂಭ್ರಮದಿಂದ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ವಿವಿಧ ವರ್ಣಮಯ ಭಿತ್ತಿಚಿತ್ರಗಳು , ಹೂವಿನ ತೋರಣ ಮತ್ತು ವರ್ಣಮಾಲೆಗಳಿಂದ ವಿದ್ಯಾಸಂಸ್ಥೆಯ ಆವರಣವು ಕಂಗೊಳಿಸುತ್ತಿತ್ತು .

ಪ್ರಾಂಶುಪಾಲೆ ಗೀತಾ ಕೋಟ್ಯಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾಸಂಸ್ಥೆಯ ನಿಯಮಗಳನ್ನು ತಿಳಿಸಿ, ಶುಭ ಹಾರೈಸಿದರು. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸಕಲ ಸೌಲಭ್ಯಗಳನ್ನು ಉಪಯೋಗಿಸಿ ಮುನ್ನಡೆಯಬೇಕು ಎಂದು ಅವರು ಕರೆಯಿತ್ತರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here