Wednesday 14th, May 2025
canara news

ರಾಯನ್ ಇಂಟರ್‍ನೇಶನಲ್‍ನ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲು ಬೊರಿವಿಲಿ 100% ಫಲಿತಾಂಶ

Published On : 09 Jun 2018   |  Reported By : Rons Bantwal


ಮಾ| ತೀರ್ಥ್ ಜಿ.ನಾಯ್ಕ್ ಕುಂದಾಪುರ-ಮಾ| ಗಣೇಶ್ ಕೆ.ನಾಯ್ಕ್ ಗುಜ್ಜಾಡಿ ಪ್ರಥಮ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.08: ಮಹಾರಾಷ್ಟ್ರ ರಾಜ್ಯದ 2017-18ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶವನ್ನು ಮಹಾರಾಷ್ಟ್ರ ಶಿಕ್ಷಣ ಮಂಡಳಿ ಇಂದಿಲ್ಲಿ ಸೋಮವಾರ ಮಧ್ಯಾಹ್ನ ಪ್ರಕಟಿಸಿದ್ದು ರಾಯನ್ ಇಂಟರ್‍ನೇಶನಲ್ ಸಮೂಹ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲೆಗಳಲ್ಲಿ ಒಂದಾದ ಬೊರಿವಿಲಿ ಪೂರ್ವದ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲುಗೆ 100% ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ 97.7% ಅಂಕಗಳೊಂದಿಗೆ ಕು| ಸಾಕ್ಷಿ ಶ್ಹಾ ವಿದ್ಯಾಥಿರ್üನಿ ಶಾಲೆಯಲ್ಲೇ ಪ್ರಥಮರೆಣಿಸಿದ್ದಾಳೆ. ಕು| ಸಂಜನಾ ಶಿಂಧೆ ಮತ್ತು ಕು| ಸಾಕ್ಷಿ ಪ್ರಜಾಪತಿ 96.04% ಅಂಕಗಳೊಂದಿಗೆ ದ್ವಿತೀಯ ಹಾಗೂ ಕನ್ನಡಿಗ ವಿದ್ಯಾಥಿರ್üಗಳಾದ ಮಾ| ಗಣೇಶ್ ಕೃಷ್ಣ ನಾಯ್ಕ್ ಗುಜ್ಜಾಡಿ 88.80% ಅಂಕಗಳನ್ನು ಮತ್ತು ಮಾ| ತೀರ್ಥ್ ಗೋಪಾಲ್ ನಾಯ್ಕ್ ಕುಂದಾಪುರದ 91.00% ಅಂಕಗಳೊಂದಿಗೆ ಡಿಸ್ಟಿಂಕ್‍ಶನ್ ದರ್ಜೆಯಲ್ಲಿ ಪಾಸಾಗಿದ್ದಾರೆ.

       

TIRTH GOPAL NAIK                      GANESH KRISHNA NAIK                 PRAJAPATI KHUSHI ARVIND

    

SHAH SAKSHI KALPESH        SHINDE SANJANA ANIL

ಮಾ| ತೀರ್ಥ್ ಗೋಪಾಲ್ ನಾಯ್ಕ್: ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ಚಿಕ್ಕನ್‍ಸಾಲ್ ಇಲ್ಲಿನ ಗೋಪಾಲ್ ನಾಯ್ಕ್ ಮತ್ತು ಮತ್ತು ಜ್ಯೋತಿ ಗೋಪಾಲ್ ದಂಪತಿ ಸುಪುತ್ರ ಆಗಿದ್ದಾರೆ.

ಮಾ| ಗಣೇಶ್ ಕೃಷ್ಣ ನಾಯ್ಕ್: ಉಡುಪಿ ಜಿಲ್ಲೆಯ ಕುಂದಾಪುರ ಮಂಕಿ ಅಲ್ಲಿನ ಗುಜ್ಜಾಡಿ ಹೊವಣ್ಣ ನಿವಾಸದ ಕೃಷ್ಣ ನಾಯ್ಕ್ ಮತ್ತು ಸರೋಜಾ ಕೃಷ್ಣ ದಂಪತಿ ಸುಪುತ್ರ ಆಗಿದ್ದಾರೆ.

ಈ ಬಾರಿ ಒಟ್ಟು 257 ವಿದ್ಯಾಥಿರ್üಗಳು ಪರೀಕ್ಷೆಗೆ ಒಳಪಟ್ಟಿದ್ದು 126 ವಿದ್ಯಾಥಿರ್üಗಳು ಡಿಸ್ಟಿಂಕ್‍ಶನ್ ದರ್ಜೆಯಲ್ಲಿ, 96 ವಿದ್ಯಾಥಿರ್üಗಳು ಪ್ರಥಮ ಶ್ರೇಣಿ ಮತ್ತು 33 ವಿದ್ಯಾಥಿರ್üಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಬಂಟ್ವಾಳ ಮೂಲದ ಶಾಲೆಯ ಪ್ರಾಂಶುಪಾಲೆ ಮಾರಿಯೆಟ್ ಫೆರ್ನಾಂಡಿಸ್ ತಿಳಿಸಿದ್ದಾರೆ. ರಾಯನ್ ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ| ಆಗಸ್ಟಿನ್ ಎಫ್. ಪಿಂಟೋ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ, ಸಿಇಒ ರಾಯನ್ ಪಿಂಟೋ ಸಂತಸ ವ್ಯಕ್ತ ಪಡಿಸಿ ಎಲ್ಲಾ ವಿದ್ಯಾಥಿರ್üಗಳಿಗೆ ಮತ್ತು ಸರ್ವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಅಭಿನಂದಿಸಿ ಶುಭಾರೈಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here