ಕುಂದಾಪುರ, ಜೂನ್. 8: ದೇವಸ್ಥಾನದಲ್ಲಿ ಎಲ್ಲರಿಗೂ ಪ್ರವೇಶ ಇರುವಂತೆ, ಶಿಕ್ಷಣ ಸಂಸ್ಥೆಯಲ್ಲಿ ಎಲ್ಲರಿಗೂ ಪ್ರವೇಶ ದೊರಕಬೇಕು, ಬುದ್ದಿವಂತ ವಿದ್ಯಾರ್ಥಿಗಳನ್ನು ಮಾತ್ರ ಕಲಿಸಿದಲ್ಲಿ ಅವರು ನೀರಿಕ್ಷಯಂತೆ ಹೆಚ್ಚು ಅಂಕ ಗಳಿಸುತ್ತಾರೆ, ಆದರೆ ಅದು ಸಾಧನೆ ಅಲ್ಲಾ, ಕಲಿಕೆಯಲ್ಲಿ ಹಿಂದೆ ಇದ್ದವರಿಗೆ ಪ್ರವೇಶ ನೀಡಿ ಅಂತವರಿಗೆ ವಿಧ್ಯೆ ನೀಡಿ ವಿಧ್ಯಾವಂತನನ್ನಾಗಿ ಮಾಡಿದಲ್ಲಿ ಮಾತ್ರ ವಿದ್ಯಾ ಸಂಸ್ಥೆ ಸಾರ್ಥಕತೆ ಮತ್ತು ಸಾಧನೆ ಮಾಡಿದಂತ್ತಾಗುತದೆ’ ಎಂದು ಸಂತಮೇರಿಸ್ ಪಿ.ಯು.ಕಾಲೇಜಿನ ಆರಂಬೋತ್ಸವಕ್ಕೆ ಆಗಮಿಸಿದ ನೂತನ ಸಂಚಾಲಕರಾದ ವಂ| ಧರ್ಮಗುರು |ಸ್ಟ್ಯಾನಿ ತಾವ್ರೊ ಇವರು ಹೊಸದಾಗಿ ಪ್ರವೇಶ ಮಾಡಿದ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ‘ಮೊಬಾಯ್ಲನ್ನು ಚಟವನ್ನಾಗಿ ಮಾಡಿಕೊಳ್ಳಿ, ಹೆತ್ತವರು ತಮ್ಮ ಮಕ್ಕಳಿಗಾಗಿ ಕಾಳಜಿ ವಹಿಸಬೇಕು, ಅವರಿಗಾಗಿ ನಿಮ್ಮ ವೇಳೆಯನ್ನು ಮಿಸಲಿಡಿ, ಕೂಲಿಕಾರರ ಮಕ್ಕಳು ಶ್ರೀಮಂತರ ಮಕ್ಕಳು ರ್ಯಾಂಕ್ ಪಡೆಯುತ್ತಾರೆ, ಅವರೆಲ್ಲಾ ದಿನದಿಂದ ದಿನಕ್ಕೆ ಕೊಟ್ಟ ಪಾಠವನ್ನು ಕಲಿತು ಚೆನ್ನಾಗಿ ಅಭ್ಯಾಸ ಮಾಡಿದ ಮಕ್ಕಳು ಅನ್ನುದು ಜ್ಞಾಪಕದಲ್ಲಿ ಇರಬೇಕು’ ಎಂದು ಹೀತಪೆÇೀದೇಶ ನೀಡಿದರು.
ಮುಖ್ಯ ಅಥಿತಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ವಾಣಿ ಆಳ್ವಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ‘ನಮ್ಮನ್ನು ಬೆಳೆಸುವುದು ನಮ್ಮ ಶಿಕ್ಷಣ ಸಂಸ್ಥೆ ನಮ್ಮ ಹೆತ್ತವರು, ಇವತ್ತು ಶಿಕ್ಷಣ ಕಲಿಯಲು ಕಶ್ಟ ಎನ್ನಿಸಬಹುದು, ಆದರೆ ಇದೇ ಶಿಕ್ಷಣ ಮುಂದೆ ನಿಮ್ಮ ಬಾಳಿಗೆ ಬೆಳಕಾಗುತ್ತದೆ’ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿಲಾಯಿತು.
ನಿರ್ಗಮನ ಸಂಚಾಲಕರಾದ ವಂ|ಫಾ|ಅನಿಲ್ ಡಿಸೋಜಾರವರು ಕಾಲೇಜಿನ ಬುಲೆಟಿನ್ ಬ್ಲೊಸಮ್ ಉದ್ಘಾಟಿಸಿದ ಅವರನ್ನು ಸನ್ಮಾಸಲಾಯಿತು, ಉತ್ತರವಾಗಿ ‘ಈ ಕಾಲೇಜಿನ ಏಳಿಗೆಗಾಗಿ ಪ್ರಾಂಶುಪಾಲರಾದ ವಂ|ಪ್ರವೀಣ್ ಮಾರ್ಟಿಸ್ ಮತ್ತು ಉಪನ್ಯಾಸಕ ವ್ರಂದ ತುಂಬ ಶ್ರಮಿಸಿದೆ, ಹಾಗಾಗಿ ಪ್ರತಿ ವರ್ಷ ಉತ್ತಮ ಫಲಿತಾಂಶ ದೊರಕುತ್ತದೆ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಾಳಿಗೆ ಬೇಕಾದ ಮೌಲ್ಯಗಳನ್ನು ಕಲಿಸಿ ಸಮಾಜದಲ್ಲಿ ಯೋಗ್ಯ ವ್ಯಕ್ತಿಯನ್ನಾಗಿ ಮಾಡಿಸುವಲ್ಲಿ ಪ್ರಯತ್ನ ಯಶಸ್ವಿಯಾಗಿದೆ’ ಎಂದು ಅವರು ಶುಭವನ್ನು ಕೋರಿದರು.
ಪ್ರಾಂಶುಪಾಲರಾದ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಾಂಶುಪಾಲ ವಂ|ಫಾ| ಪ್ರವೀಣ್ ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ದ್ರಶ್ಯ ಮಾಧ್ಯಮದ ಮೂಲಕ ತಿಳುವಳಿಕೆ ನೀಡಿದರು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಮಕ್ಕಳ ಪೆÇೀಷಕರ ಪ್ರತಿನಿಧಿಯಾಗಿ ಗೊಡ್ವಿನ್ ನಜರೆತ್, ಪ್ರಮೀಳಾ ಡೆಸಾ, ಅತಿಥಿಯಾಗಿ ವಿನೋದ್ ಕ್ರಾಸ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಸಾಂಸ್ಕ್ರತಿಕ ಪ್ರರ್ದಶನ, ಅನುಭವ ಹಂಚಿಕೊಳ್ಳುವ, ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮಗಳು ವಿದ್ಯಾರ್ಥಿ ಲೇನೊಶಾ ಧನ್ಯವಾದಗಳನ್ನು ಅರ್ಪಿಸಿದರು. ಮೇಲಿಶಾ ಡಾಯಸ್ ಕಾರ್ಯಕ್ರವನ್ನು ನಿರೂಪಿಸಿದರು.