ಶಿಕ್ಷಣ ಸಾಧನಾ ಶಿಖರವನ್ನೇರಲು ಮೈಲುಗಲ್ಲು : ಸಿಎ| ಪ್ರಕಾಶ್ ಶೆಟ್ಟಿ
ಮುಂಬಯಿ, ಜೂ.14: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಖಾರ್ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯು ವರ್ಷಂಪ್ರತಿಯಂತೆ ವಿತರಿಸಲಾಗುವ ಧರ್ಮಾರ್ಥ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಕಳೆದ ಭಾನುವಾರ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹಾರ್ ನಗರ್‍ನ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿನ ಮಂದಿರದಲ್ಲಿ ನಡೆಸಲಾಯಿತು.
ಸಾಂತಕ್ರೂಜ್ ಮತ್ತು ಆಸುಪಾಸಿನಲ್ಲಿ ಕಲಿಯುತ್ತಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ತುಳುಕನ್ನಡಿಗರ ವಿದ್ಯಾಥಿರ್üಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಈ ಬಾರಿಯೂ ಜಾತಿಮತ ಭೇದ ಎಣಿಸದೆ ಸುಮಾರು 350 ಮಕ್ಕಳಿಗೆ ಈ ವ್ಯವಸ್ಥೆ ಮಾಡಲಾಗಿ ಸಿಎ| ಪ್ರಕಾಶ್ ಶೆಟ್ಟಿ ತನ್ನ ಸ್ವರ್ಗೀಯ ಮಾತೃಶ್ರೀ ಶ್ರೀಮತಿ ಕಮಲಾ ಸೀನ ಶೆಟ್ಟಿ ಸ್ಮಾರಣಾರ್ಥ ನಿಶಾ ಪ್ರಕಾಶ್ ಶೆಟ್ಟಿ ದಂಪತಿ ನೆರೆದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಶುಭಾರೈಸಿದರು.
ಸಾಧನೆಯ ಶಿಖರವನ್ನೇರಲು ವಿದ್ಯಾಭ್ಯಾಸ ಮೈಲುಗಲ್ಲಿ ಆಗಿದೆ. ಮೌಲಿಕವಾದ ಶಿಕ್ಷಣ ಪಡೆದಾಗ ಮಾತ್ರ ಅಸಾಧಾರಣ ಸಾಧನೆ ಸಿದ್ಧಿಸ ಬಹುದು. ಮಕ್ಕಳು ಬರೀ ಶಿಕ್ಷಣ ಪಡೆದರೆ ಸಾಲದು. ವಿದ್ಯಾಭ್ಯಾಸದ ಜೊತೆಗೆ ಪರಿಸರ ಪ್ರೇಮ, ಸಂಸ್ಕಾರಯುತ ಬದುಕು ರೂಪಿಸುವ ಪರಿಯನ್ನು ಮೈಗೂಡಿಸಬೇಕು. ಸರ್ವ ಕಾಲದ ಯಶಸ್ಸಿಗೆ ಶಿಕ್ಷಣ ಅಸ್ತ್ರವಾಗಿ ಪರಿಣಮಿಸಿದೆ. ಮಾನವ ಜೀವನದ ಮಹತ್ವಪೂರ್ಣ ಅಂಗವಾಗಿರುವ ಶಿಕ್ಷಣವು ವ್ಯಕ್ತಿಯನ್ನಾಗಿಸುವ ರೂಪಿಸುವ ಪಾತ್ರ ವಹಿಸುತ್ತದೆ ಎಂದು ಪ್ರಕಾಶ್ ಶೆಟ್ಟಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮಂದಿರ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿü ನಗರ ಸೇವಕಿ ಪ್ರಜ್ಞಾ ದೀಪಕ್ ಭೂತ್ಕರ್, ಮಾಜಿ ನಗರ ಸೇವಕ ದೀಪಕ್ ಭೂತ್ಕರ್ ಉಪಸ್ಥಿತರಿದ್ದು, ಸಮಿತಿ ಕಾರ್ಯಾಧ್ಯಕ್ಷ ಆರ್.ಡಿ ಕೋಟ್ಯಾನ್, ಅರ್ಚಕ ನಾಗೇಶ್ ಸುವರ್ಣ, ಮಹಿಳಾ ಮಂಡಳಿ ಕಾರ್ಯಾಧ್ಯಕ್ಷೆ ಕೇಶರಿ ಬಿ.ಅಮೀನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಶಂಕರ್ ಸುವರ್ಣ ಮಾತನಾಡಿ ರಾಷ್ಟ್ರದ ಸುಸಂಸ್ಕೃತ ಪ್ರಜೆಗಳಾಗುವಲ್ಲಿ ವಿದ್ಯೆಯೇ ಪ್ರಮುಖವಾದದ್ದು ಆದುದರಿಂದ ಶಿಕ್ಷಣವನ್ನು ಪಾವಿತ್ರ ್ಯತೆಯ ರೂಪದಲ್ಲಿ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದÀ ಜಯರಾಮ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷ), ರಮೇಶ್ ಪೂಜಾರಿ (ಉಪ ಕಾರ್ಯದರ್ಶಿ), ವಿನೋದ್ ಹೆಜಮಾಡಿ (ಜೊತೆ ಕೋಶಾಧಿಕಾರಿ), ಕಮಲಾಕ್ಷ ಸುವರ್ಣ (ಟ್ರಸ್ಟೀ), ಜನಾರ್ದನ್ ಸಾಲಿಯಾನ್, ರವಿ ಕೋಟ್ಯಾನ್ (ಪೂಜಾ ಸಮಿತಿ ಜೊತೆ ಕಾರ್ಯದರ್ಶಿ) ಮತ್ತಿತರ ಯುವ ಮತ್ತು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ನಡೆಸಲ್ಪಟ್ಟ ಸಭೆಯಲ್ಲಿ ಸಮಿತಿಯ ಟ್ರಸ್ಟೀ ಸದಸ್ಯರಾಗಿದ್ದು ಸ್ವರ್ಗಸ್ಥರಾದ ವಾಸು ಪಿ.ಶೆಟ್ಟಿ ಜಾಗಕ್ಕೆ ಸದಸ್ಯರೆಲ್ಲ ಅನುಮತಿ ಮೇರೆಗೆ ಸಿಎ| ಪ್ರಕಾಶ್ ಶೆಟ್ಟಿ ಅವರನ್ನು ಟ್ರಸ್ಟೀಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.