Wednesday 14th, May 2025
canara news

ಆದರ್ಶ್ ಪೆರ್ಮನ್ನೂರು ಸಂಘಕ್ಕೆ ಅಧ್ಯಕ್ಷರಾಗಿ ಸಿರಿಲ್ ರಾಬರ್ಟ್ ಡಿ'ಸೋಜ ಆಯ್ಕೆ

Published On : 17 Jun 2018   |  Reported By : Rons Bantwal


ಮುಂಬಯಿ, ಜೂ.17: ಆದರ್ಶ್ ಪೆರ್ಮನ್ನೂರು ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸಿರಿಲ್ ರಾಬರ್ಟ್ ಡಿ'ಸೋಜ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಿರಿಲ್ ಅವರು ಪ್ರಸ್ತುತ ಪ್ರದಾನ ಕಾರ್ಯದರ್ಶಿ ದ.ಕ ಜಿಲ್ಲಾ ಗ್ರೂಪ್ ಡಿ ಸರಕಾರಿ ನೌಕರರ ಸಂಘ ಮಂಗಳೂರು ಹಾಗೂ ನಿರ್ದೇಶಕರು ದಿ ಸೌತ್ ಕೆನರಾ ಗವರ್ನಮೆಂಟ್ ಆಫಿಸರ್ಸ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಕೊಡಿಯಾಲ್‍ಬೈಲ್ ಮಂಗಳೂರು ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗೆ ಸಂಘದ ಮಹಾಸಭೆ ರೊನಾಲ್ಡ್ ಫೆರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಜರುಗಿದ್ದು, ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ವಾರ್ಷಿಕ ವರದಿ ಕಾರ್ಯದರ್ಶಿ ಡೆಮೆಟ್ರಿಯಸ್ ಜಿ.ಡಿ ಸೋಜ ವಾಚಿಸಿದ್ದು, ವಾರ್ಷಿಕ ಲೆಕ್ಕಪತ್ರವನ್ನು ಮೆಲ್ವಿನ್ ಡಿ ಸೋಜ ಮಂಡಿಸಿದರು.

ನಂತರ 2018 2019ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಇತರ ಪದಾಧಿಕಾರಿಗಳಾಗಿ ಸಿರಿಲ್ ರಾಬರ್ಟ್ ಡಿಸೋಜ (ಅಧ್ಯಕ್ಷರು), ಐವನ್ ಡಿಸೋಜ (ಉಪಾಧ್ಯಕ್ಷರು), ಲಾಜರಸ್ ಡಿ ಸೋಜ (ಕಾರ್ಯದರ್ಶಿ), ಡೆನಿಸ್ ಡಿ ಸೋಜ (ಕೋಶಾಧಿಕಾರಿ) ಆಗಿ ಆಯ್ಕೆಯಾಗಿರುತ್ತಾರೆ.

ಜೋಸ್ಲಿನ್ ಡಿ ಸೋಜ ಈ ಚುನಾವಣೆಯನ್ನು ನೇರವೇರಿಸಿದ್ದು ರೊನಾಲ್ಡ್ ಫೆರ್ನಾಂಡಿಸ್ ಸಭಾ ಕಲಾಪ ನಡೆಸಿ ಧನ್ಯವಾದ ಸಮರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here